ಹಾರೂಗೇರಿ,22: ಕಳೆದ 14 ತಿಂಗಳನಿಂದ ಪೌರಕಾಮರ್ಿಕರ ವೇತನ ನೀಡದ ಹಿನ್ನಲೆಯಲ್ಲಿ ಅಹೋರಾತ್ರಿಯನ್ನದೆ ಕಳೆದ ಮೂರು ದಿನಗಳಿಂದ ಅನಿಧರ್ಿಷ್ಟ ಧರಣಿ ನಡೆಸುತ್ತಿರುವ ಮೂವರು ಪೌರಕಾಮರ್ಿಕರು ಅಸ್ವಸ್ಥಗೊಂಡು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ಘಟನೆಯು ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಪಟ್ಟಣದ ಪುರಸಭೆಯ ಕಾಯರ್ಾಲಯದ ಆವರಣದಲ್ಲಿ ಆಹೋರಾತ್ರಿ ಧರಣಿ ನಿರತ ಪೌರಕಾಮರ್ಿಕ ರಮೇಶ ಸರಿಕರ(54), ಕಲ್ಲಪ್ಪ ಕುಲ್ಲೋಳ್ಳಿ(42), ಪ್ರಭು ಬಳ್ಳಾರಿ(40) ಈ ಮೂವರು ಮುಂಜಾನೆ ತೀವ್ರ ಅಸ್ವಸ್ಥರಾಗಿರುವುದರಿಂದ ಸ್ಥಳೀಯರು 108 ವಾಹನ ಕರೆಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದರು.
ಚಿಂಚಲಿ ಪಟ್ಟಣ ಪಂಚಾಯತಿ ಹಾಗೂ ಹಾರೂಗೇರಿ ಪುರಸಭೆ ಗ್ರಾಮ ಪಂಚಾಯತಿಯಿಂದ ಮೇಲ್ಚಜರ್ೆಗೆರಿರುವ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಕಳೆದ 14 ತಿಂಗಳಿನಿಂದ ವೇತನ ನೀಡದೆ ಅವರುಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಮೂರು ದಿನಗಳಿಂದ ಪಟ್ಟಣದಲ್ಲಿ ನೀರು ಪೂರೈಕೆ ಹಾಗೂ ಸ್ವಚ್ಛತಾ ಕಾರ್ಯ ಇಲ್ಲದೆ ನಾಗರಿಕರು ಪರದಾಡುತ್ತಿದ್ದಾರೆ.
ಪ್ರತಿಭಟನಾ ನಿರತರು: ಸಾಹೇಬರೆ ನಾವುಗಳು ಕಳೆದ 14 ತಿಂಗಳಿನಿಂದ ವೇತನವಿಲ್ಲದೆ ಮಳಿಗೆಗಳ ಸಾಕಷ್ಟು ಸಾಲ ಮಾಡಿ ಉಪಜೀವನ ನಡೆಸುತ್ತಿದ್ದೇವೆ. ನಮಗೆ ವೇತನ ಬಾರದೆ ಇರುವುದರಿಂದ ಯಾರೂ ಸಹ ಸಾಲ ಮತ್ತು ದಿನನಿತ್ಯ ಉಪಜೀವನ ನಡೆಸುವುದಕ್ಕೆ ಸಹಾಯ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ನಮಗೆ ಜೀವನ ಸಾಕು ಸಾಕಾಗಿ ಹೋಗಿದೆ. ಒಂದು ತೊಟ್ಟು ವಿಷ ನೀಡಿ. ಒಮ್ಮೆ ನಮ್ಮ ಮಕ್ಕಳು ಮರಿಗಳು ಕಟ್ಟಿಕೊಂಡು ಸಾಯುತ್ತೆವೆ. ನಮಗೆ ಯಾವುದು ಚಿಕಿತ್ಸೆ ಬೇಡ ಎಂದು ನಿರಾಕರಿಸುತ್ತಿರುವ ಪೌರಕಾಮರ್ಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನಪ್ರತಿನಿಧಿಗಳು ತಮ್ಮ ತಮ್ಮ ರಾಜೀಕಿಯ ಕಿತ್ತಾಟದಲ್ಲಿ ಅಮಾಯಕ ಪೌರಕಾಮರ್ಿಕರ ವೇತನ ನೀಡದೆ ಪೌರಕಾಮರ್ಿಕರೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಹೀಗಾಗಿ ನಾಳೆ ನಡೆಯುವ ಪೌರಕಾಮರ್ಿಕರ ಪ್ರತಿಭಟನೆಚಿುಲ್ಲೂ ಕಾಮರ್ಿಕರ ಕುಟುಂಬಸ್ಥರು ಸಹ ಧರಣಿಯಲ್ಲಿ ಭಾಗಿಯಾಗಿ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಧರಣಿ ನಿತರರು ಪತ್ರಿಕೆಯ ಮುಂದೆ ತಮ್ಮ ಅಸಮಾಧಾನ ಆಕ್ರೋಶ ತೋಡಿಕೊಂಡರು.
ಧರಣಿ ನಿರತರಾದ ಹಾರೂಗೇರಿ ಪುರಸಭೆ ಮುಂದೆ ಮಾರುತಿ ಸರಿಕರ, ನಾಗಪ್ಪ ಬಳ್ಳಾರಿ, ಲಕ್ಷ್ಮವ್ವಾ ಮಾದರ, ಮಾಲವ್ವ ಮಾದರ, ಪಾರ್ವತಿ ಮಾದರ, ಭೀಮವ್ವಾ ಉಪ್ಪಾರ, ಲಕ್ಷ್ಮೀ ಬಳ್ಳಾರಿ, ನಾಗರಾಜ ಬಳ್ಳಾರಿ, ಸಂಬಾಜಿ ಕಾಂಬಳೆ, ಅನ್ನವ್ವಾ ಕಾಂಬಳೆ, ಹಣಮಂತ ಕಾಂಬಳೆ, ಸದಾಶಿವ ತುಬಚಿ, ನರಸಿಂಹ ಬಳ್ಳಾರಿ, ಶ್ರಾವಣ ಖಣದಾಳ, ಸುಶೀಲಾ ಹರಿಜನ. ಚಿಂಚಲಿ ಪಟ್ಟಣ ಪಂಚಾಯತಿ ಮುಂದೆ ಲಕ್ಷ್ಮಣ ಕೋಳಿಗುಡ್ಡೆ, ಪಿಂಟು ವಡ್ಡರ, ರವಿ ಖೋತ, ಈರಗೌಡ ಪಾಟೀಲ ಗೋಪಾಲ ಪರೀಟ, ವಿಜಾಬಾಯಿ ಮಾಂಗ, ಮಿರಾಸಾಬ ಕೊಥಳಿ, ನೀತಾ ಮಾಂಗ, ಕಲಾವತಿ ಮಾಂಜರಿ, ಪರಶುರಾಮ ಕೋಳಿಗುಡ್ಡೆ, ಬಾಳು ಕೋಳಿಗುಡ್ಡೆ, ಬಿಬಾ ಶೀಕಲಗಾರ, ನಾರಾಯಣ ಕಾಂಬಳೆ, ಪರಶು ಮಾಂಗ ಹಾಗೂ ವೀರಾ ಮಾಂಗ ಪ್ರತಿಭಟನೆ ಮುಂದುವರೆಸಿದ್ದಾರೆ.