ಅಥಣಿ ತಾಲೂಕಾ ಪಂಚಾಯತ್ ಅಧ್ಯಕ್ಷರಾಗಿ ನಾಯಿಕ, ಉಪಾಧ್ಯಕ್ಷರಾಗಿ ಪಾಟೀಲ ಅವಿರೋಧ ಆಯ್ಕೆ

ಚುನಾವಣೆ ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರೊಂದಿಗೆ ತಾಲೂಕಾ ಸದಸ್ಯರು ಹಾಗೂ ಮುಖಂಡರು ವಿಜಯೋತ್ಸವ ಆ

ಅಥಣಿ 22: ಅಥಣಿ ತಾಲೂಕಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಶುಕ್ರವಾರ ನಡೆದಿದ್ದು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯನ್ನು ಮತ್ತೆ ಬಿಜೆಪಿ ಹಂಚಿಕೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಕವಿತಾ ನಾಯಿಕ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ಪಾಟೀಲ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಆಗಮಿಸಿದ ಉಪವಿಭಾಗಾಧಿಕಾರಿ ರವಿಂದ್ರ ಕರಿಲಿಂಗನಗೌಡ ಘೋಷಣೆ ಮಾಡಿದರು .

             43 ಅಥಣಿ ತಾಲೂಕ ಪಂಚಾಯತ ಸದಸ್ಯರಲ್ಲಿ 32 ಸದಸ್ಯರು ಚುನಾವಣೆಗೆ  ಹಾಜರಾಗಿದ್ದು ಅದರಲ್ಲಿ 11 ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಕವಿತಾ ನಾಯಿಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಪಾಟೀಲ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಇವರ ವಿರುದ್ಧ ಯಾವುದೆ ಸದಸ್ಯರು ನಾಮಪತ್ರ ಸಲ್ಲಿಸದಿರುವುದರಿಂದ 1 ಗಂಟೆಗೆ ಚುನಾವಣಾಧಿಕಾರಿ ರವಿಂದ್ರ ಕರಿಲಿಂಗನಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ಕವಿತಾ ನಾಯಿಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

                 ಅಧ್ಯಕ್ಷರಾಗಿ ಆಯ್ಕೆಯಾದ ಕವಿತಾ ನಾಯಿಕ ಮಾತನಾಡಿ ತಾಲೂಕಿನಲ್ಲಿ ಬರಗಾಲವಿರುವುದರಿಂದ ನಾವು ಎಲ್ಲಾ ಮಾಹಿತಿ ಪಡೆದು ನೀರಿನ ಸೌಕಯ್ರ್ಯ ಮಾಡುತ್ತೇವೆ. ಅಬಿವೃದ್ಧಿಗೆ ಮಾಜಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರ ಸಲಹೆ ಪಡೆದು ಯಾವುದೆ ಗ್ರಾಮ ಪಂಚಾಯತಿಯಲ್ಲಿ ಮೇವಿನ ಹಾಗೂ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು. 

         ಜಿ.ಪಂ ಸದಸ್ಯರಾದ ಸಿದ್ದಪ್ಪಾ ಮುದಕನ್ನವರ, ಬಿಜೆಪಿ ಮುಖಂಡರಾದ ಶ್ರೀಶೈಲ ನಾಯಿಕ, ಶಿವಾನಂದ ನಾಯಿಕ, ವಿಜಯ ಮಂಗಸೂಳಿ, ಅರುಣ ಬಾಸಿಂಗೆ, ಮಲ್ಲೇಶ ಹುದ್ದಾರ ಮುಂತಾದವರು ಭಾಗಿಯಾಗಿದ್ದರು.

                ಚುನಾವಣೆ ನಂತರ ಮಾಜಿ ತಾಲೂಕಾ ಅಧ್ಯಕ್ಷ ಶಕುಂತಲಾ ರುದ್ರಗೌಡ, ಮಾಜಿ ತಾಲೂಕಾ ಪಂಚಾಯತ ಉಪಾಧ್ಯಕ್ಷರಾದ ಸುಜಾತ ಅವರವಾಡ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಕವಿತಾ ನಾಯಿಕ ಹಾಗೂ ಉಪಾಧ್ಯಕ್ಷೆ ಜ್ಯೋತಿ ಪಾಟೀಲ ಅವರನ್ನು ಸನ್ಮಾನಿಸಿದರು.