ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಪ್ರಹಾರ ಮಾಡಿರುವುದನ್ನು ಪಾಟೀಲ ಆಕ್ರೋಶ
ಯರಗಟ್ಟಿ 12: ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಪ್ರಹಾರ ಮಾಡಿರುವುದನ್ನು ಖಂಡಿಸಿ ತಹಸೀಲ್ದಾರ ಎಂ.ವಿ. ಗುಂಡಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು. ಬಸಗೌಡ ಪಾಟೀಲ, ಪರ್ವತಗೌಡ ಪಾಟೀಲ, ಈರಣ್ಣ ಚಂದರಗಿ, ಬಂಗಾರ್ಪ ಹರಳಿ, ರತ್ನಾಕರ ಶೆಟ್ಟಿ ಇತರರು ಇದ್ದರು.ಯರಗಟ್ಟಿ: ರಾಜ್ಯದಲ್ಲಿಯೇ ದೊಡ್ಡದಾದ ಲಿಂಗಾಯತ ಸಮುದಾಯವನ್ನು ಒಡೆದು ಚಿದ್ರ ಮಾಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯನವರು ಲಿಂಗಾಯತ ಸಮಾಜದಲ್ಲಿ ಮಿಸಲಾತಿ ಕಿಡಿ ಹಚಿದರು. ಈಗ ಲಿಂಗಾಯತರ ಮೇಲೆ ಲಾಠಿ ಪ್ರಹಾರ ಮಾಡಿಸಿ ಸೇಡು ತಿರಿಸಿಕೊಂಡಿದ್ದಾರೆ. ಎಂದು ಪಂಚಮಸಾಲಿ ಸಮಾಜದ ಮುಖಂಡರಾದ 9ಬಸನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗುರುವಾರ ಲಿಂಗಾಯತ ಪಂಚಮಸಾಲಿ ಹೋರಾಟ ಸಮೀತಿ ಬೆಳಗಾವಿಯಲ್ಲಿ ನಡೆದ ಪೊಲೀಸರ ಹಲ್ಲೆಯನ್ನು ಕಂಡಿಸಿ ಪ್ರತಿಭಟಸಿ, ರಸ್ತೆ ತಡೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಯನ್ನು ನಿಡುವುದಾಗಿ ಬರವಸೆ ನೀಡಿ ಈಗ ಉದ್ದೇಶಪೂರ್ವಕವಾಗಿ ಜಾರಿಕೊಳ್ಳುತ್ತಿದೆ ಎಂದರು.ಬಿಜೆಪಿ ಮುಖಂಡ ಈರಣ್ಣ ಚಂದರಗಿ ಮಾತನಾಡಿ, ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದ ರಾಜ್ಯ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದೆ.
ಅಲ್ಲದೇ ನಮ್ಮ ಹಕ್ಕಿಗಾಗಿ ಹೋರಾಟ ಮಾಡಿದರೆ ಪೊಲೀಸರನ್ನು ಬಳಸಿಕೊಂಡು ಲಾಠಿ ಪ್ರಹಾರ ಮಾಡಿಸಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಬರುವ ದಿನಗಳಲ್ಲಿ ಇದರ ದುಷ್ಪರಿಣಾಮವನ್ನು ಎದುರಿಸಲಿದೆ ಎಂದರು.ಹಿರಿಯರಾದ ಪರ್ವತಗೌಡ ಪಾಟೀಲ, ಬಂಗಾರ್ಪ ಹರಳಿ, ಗೌಡಪ್ಪ ಸವದತ್ತಿ, ರತ್ನಾಕರ ಶೆಟ್ಟಿ, ಬಸವರಾಜ ಇಂಚಲ, ಈರಣಗೌಡ ಪಾಟೀಲ, ಮಹಾದೇವಪ್ಪ ಚಂದರಗಿ, ಅಶೋಕ ಕುಡಚಿ, ಶೇಖಪ್ಪ ಹರಳಿ, ಈರಣ್ಣ ಶಿರೂರ, ಶಿವಾನಂದ ಬಳಿಗಾರ, ಈರಣ್ಣಾ ಹೂಲ್ಲೂರ, ಮಂಜುನಾಥ ಸಿದ್ಮದನಗೌಡ್ರ ಮಲ್ಲಿಕಾರ್ಜುನ ಚಿಪ್ಪಲಕಟ್ಟಿ ಇತರರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.