ಧಾರವಾಡ: ದಿ. ಎಂ.ಎಫ್.ಪಾಟೀಲರದು ಸಾರ್ಥಕ ಬದುಕು. ಹುಟ್ಟು-ಸಾವಿನ ನಡುವಿನ ಅವರ ಬದುಕು ಸಮಾಜಕ್ಕೊಂದು ಅನುಕರಣೀಯ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಮರಿಗೌಡ ಫಕ್ಕೀರಗೌಢ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಸಹಕಾರಆಂದೋಲನ’ ಉಪನ್ಯಾಸಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದ ಅವರು ಅಪಾರವಾದ ಲೋಕಾನುಭವ ಹೊಂದಿದ್ದರು. ಅಂತಹ ಬದ್ಧತೆ, ಪ್ರಾಮಾಣಿಕ ವ್ಯಕ್ತಿಗಳು ಸಿಗುವುದು ಇಂದುಅಪರೂಪ. ರಾಜಕಾರಣಕ್ಕಿಂತ ಸಮಾಜ ಸೇವೆ ಹಾಗೂ ಸಂಘಟನೆಯಲ್ಲಿ ಅವರಿಗೆ ಆಸಕ್ತಿ ಹೆಚ್ಚು. ಅಂತಹ ಪುಣ್ಯಪುರುಷರನ್ನು ದತ್ತಿ ಮೂಲಕ ಕುಟುಂಬದವರು ಸ್ಮರಿಸುವುದು ಅನನ್ಯವಾದುದು. ಸರ್.ಸಿದ್ಧಪ್ಪ ಕಂಬಳಿಯವರು ಆಗಿನ ಮುಂಬೈ ಸರಕಾರದಲ್ಲಿ 8 ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನೀಗಿಸಿದವರು. ಅವರ ಒಂದು ಮೂರ್ತಿ ಲಕ್ಕುಂಡಿಯಲ್ಲಿ ಸ್ಥಾಪಿಸುವ ಬೇಡಿಕೆ ಇದ್ದು ನಾನೇ ಸ್ವಂತ ಖರ್ಚಿನಿಂದ ಮಾಡಿಸುವುದಾಗಿ ಭರವಸೆ ನೀಡಿದರು.
ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಮಾತನಾಡಿ, ದಿ.ಎಂ.ಎಫ್.ಪಾಟೀಲರು ಸನ್ಮಾರ್ಗದಲ್ಲಿ ನಡೆದು ಬಂದ ಮಹಾನುಭಾವಿಗಳು. ನಾನಿಂದು ಶಾಸಕನಾಗಲು ನಮ್ಮದೊಡ್ಡಪ್ಪ ದಿ. ಎಂ.ಎಫ್. ಪಾಟೀಲರು ನೀಡಿದ ಸಂಸ್ಕಾರವೇ ಕಾರಣ.ಆಗಿನ ಕಾಲದ ಎಲಾ ರಾಜಕೀಯ ಮುತ್ಸದ್ಧಿಗಳು ಸಹಕಾರಿ ಧುರೀಣರುಎಂ.ಎಫ್.ಪಾಟೀಲರ ಒಡನಾ
ಡಿಗಳೇ ಆಗಿದ್ದರು.ಬಾಲ್ಯದಿಂದಲೇ ನನಗೂ ನಮ್ಮ ಕುಟುಂಬದವರಿಗೂ ಅವರು ಸಾಥಕ ಬದುಕಿನ ಜೀವನ ಪಾಠ ಹೇಳಿದವರು. ಶಿಸ್ತಿಗೆ ಹೆಸರಾದವರಾಗಿದ್ದರು ಎಂದರು.
ಜಿ.ಪಿ.ಪಾಟೀಲ ಮಾತನಾಡಿ, ಎಂ.ಎಫ್.ಪಾಟೀಲರು ಸಹಕಾರಿ ಕ್ಷೇತ್ರದ ಸಾಧನೆಯ ದಿಗ್ಗಜರು. ಕುಂದಗೋಳ, ಸಹಕಾರಿಕ್ಷೇತ್ರದಲ್ಲಿ ಸಾಧನೆ ಮಾಡಲುಅವರದೇ ಶ್ರಮ ಹೆಚ್ಚು .ಅವರೊಬ್ಬಜನಮಾನಸದ ವ್ಯಕ್ತಿಗಳು.ಎಸ್.ಆರ್.ಬೊಮ್ಮಾಯಿ ಹಾಗೂ ಎಂ.ಎಫ್. ಪಾಟೀಲರ ನಡುವೆ ಅವಿನಾಭಾವ ಸಂಬಂಧವಿತ್ತು ಎಂದು ಹೇಳಿದರು.
‘ಸಹಕಾರಿ ಆಂದೋಲನ’ ಕುರಿತು ಧಾರವಾಡ ಸಿ.ಟಿ.ಸಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಎಲ್. ಶಿವಳ್ಳಿ ಮಾತನಾಡಿ, ಸಮಾನತೆಯ ನೆಲೆಯಲ್ಲಿ ಪರಸ್ಪರರೂ ಒಂದು ಗೂಡಿ ಬಾಳುವುದೇ ಸಹಕಾರ. ಇದೊಂದು ಸ್ವಯಂಪ್ರೇರಿತ ವಿಧಾನ. ರಾಬರ್ಟ್ ಓವೆನ್ ವಿಶ್ವದ ಮೊದಲ ಸಹಕಾರಿ ಪ್ರವರ್ತಕರಾದರೆ, ಭಾರತದಲ್ಲಿ ಮೊದಲು ಸಹಕಾರಿ ಸಂಘವನ್ನು 1905 ರಲ್ಲಿ ಕಣಗಿನಹಾಳದಲ್ಲಿ ಸಿದ್ಧನಗೌಡ ಪಾಟೀಲ ಸ್ಥಾಪಿಸಿ ಕರ್ನಾಟಕಕ್ಕೆ ಹೆಮ್ಮೆತಂದರು.ದೇಶದಅರ್ಥವ್ಯವಸ್ಥೆ ಸದೃಢವಾಗಬೇಕಾದರೆ ಸಹಕಾರ ಸಂಘದಿಂದ ಮಾತ್ರ ಸಾಧ್ಯ.ಡಾ. ಕುರಿಯನ್, ಡಾ.ಸ್ವಾಮಿನಾಥನ್ ಸಹಕಾರಿ ಕ್ಷೀರ ಕ್ರಾಂತಿ ಹಾಗೂ ಹಸಿರು ಕ್ರಾಂತಿಗೆ ಕಾರಣರಾದರು. ಎಂ.ಎಫ್.ಪಾಟೀಲ, ಎಸ್.ಎಫ್. ಪಾಟೀಲ, ಎ.ಎಸ್. ಪಾಟೀಲ ಹಾಗೂ ಎಸ್.ವಿ. ಪಾಟೀಲರಂತಹ ಮುತ್ಸಧಿಗಳು ಸಹಕಾರಿ ಕ್ಷೇತ್ರವನ್ನು ಸಬಲಗೊಳಿಸಿದ್ದಾರೆ ಎಂದರು.
ಖ್ಯಾತ ಉದ್ಯಮಿ ಭರತ ಬೊಮ್ಮಾಯಿ ದತ್ತಿ ಕುರಿತು ಮತ್ತು ದತ್ತಿದಾನಿ ಬೊಮ್ಮನಾಯಕ ಪಾಟೀಲ ದತ್ತಿಆಶಯ ಕುರಿತು ಮಾತನಾಡಿದರು. ವೇದಿಕೆ ಮೇಲೆ ಸುರೇಖಾ ಬೊಮ್ಮನಾಯಕ ಪಾಟೀಲ ಇದ್ದರು.
ಸತೀಶತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಕುಂದಗೋಳ ಶಾಸಕ ಎಂ.ಆರ್.ಪಾಟೀಲ, ಕರ್ನಾಟಕ ಸಹಕಾರಗ್ರಾಹಕರ ಮಹಾಮಂಡಳ ಅಧ್ಯಕ್ಷ ಜಿ. ಪಿ.ಪಾಟೀಲ ಮತ್ತುದತ್ತಿದಾನಿ ಸುರೇಖಾ ಮತ್ತು ಬೊಮ್ಮನಾಯ್ಕ ಪಾಟೀಲರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿಡಾ. ಮಲ್ಲಿಕಾರ್ಜುನ ಪಾಟೀಲ, ಬಸಯ್ಯಕಾಡಯ್ಯ ಹಿರೇಮಠ, ಸಿ.ಎಸ್. ಪಾಟೀಲ, ಮಂಜುನಾಥಉಡುಪಿ, ಮೋಹನ ಸಿದ್ಧಾಂತಿ, ಎಸ್.ಎಂ. ಪಾಟೀಲ, ಎಸ್.ಜಿ. ಪಾಟೀಲ, ಕಿರಣ ಶಿಂಧೆ, ಎಸ್.ಎಸ್. ಲಕ್ಷ್ಮೇಶ್ವರ, ಮರಿಗೌಡ ಪಾಟೀಲ, ಎಸ್.ಬಿ. ಪಾಟೀಲ, ಕಾಶಿನಾಥ ಹಾದಿಮನಿ, ಎಂ.ಎಫ್.ಪಾಟೀಲ ಪರಿವಾರದವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.