ಲೋಕದರ್ಶನ ವರದಿ
ರಾಯಬಾಗ 25: ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಪಟೇಲ ಸಾಹೇಬ ಇವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣರಾದವರನ್ನು ಶಿಕ್ಷೆಗೆ ಗುರುಪಡಿಸುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ನೌಕರರ ಸಂಘ ರಾಯಬಾಗ ಘಟಕ ಪದಾಧಿಕಾರಿಗಳು ತಹಶೀಲ್ದಾರ ಡಿ.ಎಸ್.ಜಮಾದಾರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಪಟೇಲ ಸಾಹೇಬ ಇವರ ಮೇಲೆ ಲಾರಿ ಹಾಯಿಸಿ ಹಲ್ಲೆ ನಡೆಸಿದ್ದು ಹಾಗೂ ಸಾವಿಗಿಡಾಗಿರುವ ಘಟನೆ ಖಂಡಿಸಿದ ನೌಕರರ ಸಂಘದ ಪದಾಧಿಕಾರಿಗಳು, ಈ ಕೃತ್ಯ ಎಸಗಿದ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು. ಸೂಕ್ಷ್ಮ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.
ನೌಕರರ ಸಂಘದ ಅಧ್ಯಕ್ಷ ಆಯ್.ಆರ್.ನದಾಫ, ವಿ.ಜಿ.ಹಾರೂಗೇರಿ, ಆರ್.ಎಮ್.ಡಬ್ಬಗೋಳ, ಎಸ್.ಎಚ್.ಕಾಂಬಳೆ, ವಿ.ವಿ.ಕುದರಿ, ಎಸ್.ಆರ್.ಕೋಡಿಕಪ್ಪಮಠ, ಸಿ.ಆಯ್.ಮೊಕಟಗಿ ಇದ್ದರು.