ಕುಮಟಾ 31: ದೇಶಕ್ಕಾಗಿ ಪಟೇಲರ ಹಾಗೂ ಪ್ರಧಾನಿ ದಿ
ಇಂದಿರಾಗಾಂಧಿಯವರ ಸಾಧನೆ ದೊಡ್ಡದು. ಪಟೇಲರು ಸ್ವಾತಂತ್ರ್ಯೋತ್ತರ ಭಾರತವನ್ನು ಸಮರ್ಪಕವಾಗಿ ಮುನ್ನಡೆಸಿದ ಕೀತರ್ಿ ಇವರದ್ದು. ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು
ರಾಜಕಾರಣದ ಉತ್ತುಂಗ ತಲುಪಿದ ಇಂದಿರಾಗಾಂಧಿಯವರ ಜನಪರ ಕೊಡುಗೆಗಳು ಕೂಡಾ
ಅಷ್ಟೇ ಮಹತ್ವದ್ದು, ಹಾಗಾಗಿ ಈ ಇಬ್ಬರೂ ಮಹಾನ್
ವ್ಯಕ್ತಿಗಳ ಕಾರ್ಯಸಾಧನೆಗಳನ್ನು ಚಿಂತನೆಗಳನ್ನು ಎಲ್ಲರೂ ನೆನಪಿನಲ್ಲಿಡಬೇಕು ಎಂದು ಉಪವಿಭಾಗಾಧಿಕಾರಿ ಪ್ರೀತಿ
ಗೆಲ್ಹೋಟ್ ತಿಳಿಸಿದರು.
ಅವರು ಬುಧವಾರ ಪಟ್ಟಣದ
ತಾಲೂಕ ಪಂಚಾಯತ ಸಭಾಭವನದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನ ಹಾಗೂ
ರಾಷ್ಟ್ರೀಯ ಸಂಕಲ್ಪ ದಿನ ಉದ್ಘಾಟಿಸಿ ಮಾತನಾಡಿ,
ಭಾರತ ದೇಶದ ಸಂಸ್ಥಾಪಕರಲ್ಲೊಬ್ಬರಾದ ಸರದಾರ ವಲ್ಲಭಭಾಯಿ
ಪಟೇಲ ಹಾಗೂ ಮೊದಲ ಮಹಿಳಾ
ಪ್ರಧಾನಿ ಇಂದಿರಾಗಾಂಧಿಯವರು ತಮ್ಮ ಜೀವನ ಸಾಧನೆ
ಹಾಗೂ ಉನ್ನತ ವ್ಯಕ್ತಿತ್ವದಿಂದ ಎಲ್ಲರಿಗೂ ಪ್ರೇರಣಾ ಮೂಲವಾಗಿದ್ದಾರೆ. ಭಾರತದ ಮೊದಲನೇ ಉಪಪ್ರಧಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ದಿ ಸರದಾರ ಪಟೇಲರ
144ನೇ ಜನ್ಮದಿನ ಹಾಗೂ ಪ್ರಧಾನಿ ದಿ
ಇಂದಿರಾಗಾಂಧಿಯವರ ಪುಣ್ಯತಿಥಿ ಆಚರಿಸುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ತಾಪಂ ಇಓ ಸಿ
ಟಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ
ಪ್ರಜೆಯೂ ಮನೆಕಟ್ಟಿದರೆ ಸಾಲದು, ದೇಶಕಟ್ಟಬೇಕು, ವಯಕ್ತಿಕ ಹಿತ ಬಿಟ್ಟು ದೇಶಕ್ಕಾಗಿ
ಬದುಕುವ ಧ್ಯೇಯ ಹೊಂದಿದ್ದ ಸರದಾರ ಪಟೇಲರಂಥವರು, ಮಹಿಳಾ ಪ್ರಧಾನಿಯಾಗಿ ಸಾಧನೆ ಮಾಡಿದ ಇಂದಿರಾ ಗಾಂಯವರು ದೇಶದ ಇತಿಹಾಸವನ್ನು ನಿಮರ್ಿಸಿದವರು.
ಇದೇದಿನ ಉಕ್ಕಿನ ಮನುಷ್ಯ ಸರದಾರ ಪಟೇಲರ ವಿಶ್ವದಾಖಲೆಯ ಎತ್ತರದ ಉಕ್ಕಿನ ಪ್ರತಿಮೆ ಅನಾವರಣಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಶಿಕ್ಷಕ ರಾಮಚಂದ್ರ ಮಡಿವಾಳ ವಿಶೇಷ ಉಪನ್ಯಾಸ ನೀಡಿದ ಅವರು, ಸರದಾರ ಪಟೇಲರ ಕರ್ತವ್ಯನಿಷ್ಠೆ, ದೇಶಭಕ್ತಿ, ರೈತಪರ ಕಾಳಜಿ, ಕರ್ತವ್ಯದ ಜೊತೆಗೆ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗುವ ಗುಣಗಳು ದೇಶದ ಎಲ್ಲ ಪ್ರಜೆಗಳಲ್ಲೂ
ರಕ್ತಗತವಾಗಬೇಕಿದೆ ಎಂದರು. ಕಷ್ಟ ಎದುರಿಸಿ ಗಟ್ಟಿಯಾದ
ದಿಟ್ಟ ಮಹಿಳೆ ಇಂದಿರಾಗಾಂ ಮಹಿಳೆಯರಿಗೆ ವಿಶೇಷ ಪ್ರೇರಣೆಯಾಗಿದ್ದಾರೆ ಎಂದರು.
ತಹಶೀಲದಾರ ಮೇಘರಾಜ ನಾಯ್ಕ ರಾಷ್ಟ್ರೀಯ ಸಂಕಲ್ಪ ಪ್ರತಿಜ್ನೆ ಬೋಧಿಸಿದರು. ಜಿಪಂ ಸಹಾಯಕ ಅಭಿಯಂತ
ರಾಮದಾಸ ಗುನಗಿ ವೇದಿಕೆಯಲ್ಲಿದ್ದರು.
ತಾರಾ ನಾಯ್ಕ ಪ್ರಾಥರ್ಿಸಿದರು.
ದೇವರಾಯ ನಾಯ್ಕ ಸ್ವಾಗತಿಸಿದರು. ಎಂ ಎಂ ನಾಯ್ಕ
ನಿರೂಪಿಸಿದರು. ಡಿ ವಿ ಗುನಗಾ
ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.