ಯಮಕನಮರಡಿ 02: ಬಾಬಾ ರಾಮದೇವ ಮಹಾರಾಜರು ಯೋಗದ ಮುಖಾಂತರ ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಭಾಷೆ ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿದ ಒಬ್ಬ ಆಧುನಿಕ ಯೋಗ ಗುರು ಎಂದು ಹಾಸನ ಜಿಲ್ಲೆ ಅರಸಿಕೇರಿ ಕೋಡಿ ಮಠದ ಕಿರಿಯ ಸ್ವಾಮಿಗಳಾದ ಚೇತನ ದೇವರು ಹೇಳಿದರು.
ಅವರು ಬುಧವಾರ ದಿ. 2ರಂದು ದಾದಬಾನಹಟ್ಟಿ ಹತ್ತರಗಿ ಮಜತಿ ಕಾಂಪ್ಲೆಕ್ಸನಲ್ಲಿ ಪತಂಜಲಿ ಆರೋಗ್ಯ ಕೇಂದ್ರ ಮತ್ತು ಸ್ಟೋರ ಉದ್ಘಾಟಿಸಿ ಇಂದು ನಾವು ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಭವ್ಯ ದಿವ್ಯವಾದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮನುಷ್ಯನು ಆರೋಗ್ಯಕ್ಕೆ ಆಯುವರ್ೇದ ಔಷಧಿಗಳ ಬಳಕೆ ಅಗತ್ಯವಾಗಿದ್ದು ನಮ್ಮ ಬದುಕು ಇತರರಿಗೆ ಮಾದರಿಯಾಗಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕೆಂದು ಹೇಳಿದರು.
ಹರಿದ್ವಾರ ಪತಂಜಲಿ ಯೋಗಪೀಠದ ಕನರ್ಾಟಕ ಪ್ರಭಾರಿಗಳಾದ ಬವರಲಾಲ ಆರ್.ಜಿ ಮಾತನಾಡಿ ಇಂದು ಸ್ವಾಮಿಗಳು ಕೇವಲ ಪ್ರವಚನ ಧರ್ಮ ಪ್ರಚಾರಕ್ಕೆ ಸೀಮಿತವಾಗಿದ್ದರೆ, ಬಾಬಾ ರಾಮದೇವ ಮಹಾರಾಜರು ಯೋಗ ಮತ್ತು ಸ್ವದೇಶಿ ದಿನನಿತ್ಯ ವಸ್ತುಗಳ ಬಳಕೆ ಇಡೀ ವಿಶ್ವದಲ್ಲಿ ಹೊಸ ಇತಿಹಾಸವನ್ನು ನಿಮರ್ಿಸಿದ್ದಾರೆ. ಕೆಲವೊಂದು ವಿದೇಶಿ ಕಂಪನಿಗಳು ಪತಂಜಲಿ ಉತ್ಪನ್ನಗಳ ಬಳಕೆಗೆ ರಾಜಕಾರಣಿಗಳ ಮೂಲಕ ವಿರೋಧ ವ್ಯಕ್ತಪಡಿಸಿದರು. ಹೆಚ್ಚು ಲಾಭಕ್ಕಾಗಿ ಕೆಲವು ಕಂಪನಿಗಳು ಕಲಬೆರಿಕೆ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿರುವುದು ಖೇದನಿಯ ಸಂಗತಿ. ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕೆಂದು ಹೇಳಿದರು.
ಹತ್ತರಗಿ ಕಾರೀವ್ಮಠದ ಗುರುಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು. ರಾಜೇಂದ್ರ ಹಂಚಿಯವರು ಸ್ವಾಗತಿಸಿದರು. ಹರಿದ್ವಾರ ಪತಂಜಲಿ ಯೋಗ ಕೇಂದ್ರದ ಕನರ್ಾಟಕ ತೆಲಂಗಾಣ ಆಂಧ್ರಪ್ರದೇಶದ ನಿದರ್ೆಶಕ ಪ್ರೇಮಾನಂದ ನಾತಜಿ ಮತ್ತು ಉತ್ತರ ಕನರ್ಾಟಕದ ನಿದರ್ೇಶಕ ದಿವಾಕರಜಿ, ಕಿರಣಜಿ ಮತ್ತು ಶಂಕರ ಹಂಚಿ, ಈರಣ್ಣಾ ಕುಡಚಿ, ಶ್ರೀಶೈಲ ಪಿಟಗಿ, ಅಶೋಕ ಸಾಳೆ, ಚಂದ್ರಶೇಖರ ಚಪಣಿ, ಬಸಿರಹಮ್ಮದ ತಟಗಾರ, ರವಿಶಂಕರ ಮಲ್ಲಾಪುರ ಮಠ ಮುಂತಾದವರು ಉಪಸ್ಥಿತರಿದ್ದರು.