ಪಕ್ಷದ ಶಿಸ್ತಿನ ಶಿಫಾಯಿ ಶಾಸಕ ಅಜ್ಜಂಪೀರ ಖಾದ್ರಿಗೆ ಒಲಿದ ಹೆಸ್ಕಾಂ ಅಧ್ಯಕ್ಷ ಪಟ್ಟ
ಶಿಗ್ಗಾವಿ 26 : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಪ್ರತಿಷ್ಠಿತ ಕಣವಾಗಿ ಗಮನ ಸೆಳೆದಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ ಅವರ ಗೆಲುವಿಗೆ ಶ್ರಮಿಸಿದ ಪಕ್ಷದ ಶಿಸ್ತಿನ ಶಿಫಾಯಿ ಮಾಜಿ ಶಾಸಕ ಸೈಯ್ಯದ ಅಜ್ಜಂಪೀರ ಖಾದ್ರಿ ಅವರಿಗೆ ಹೆಸ್ಕಾಂ ನಿಗಮದ ಅಧ್ಯಕ್ಷ ಸ್ಥಾನ ಪಟ್ಟ ಲಬಿಸಿದೆ.
ಟಿಕೆಟ್ ಸಿಗದಿದ್ದಾಗ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಖಾದ್ರಿ, ಸಿಎಂ.ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಮಾತಿಗೆ ಮನ್ನಣೆ ನೀಡಿ ನಾಮಪತ್ರ ವಾಪಾಸ್ ಪಡೆದು, ಪಠಾಣ ಅವರನ್ನು ಗೆಲ್ಲಿಸಿ ಕೊಂಡೇ ಬೆಂಗಳೂರಿಗೆ ಬರುವುದಾಗಿ ಕೊಟ್ಟ ಭರವಸೆಯಂತೆ ಪಠಾಣ ಪರ ಭರ್ಜರಿ ಚುನಾವಣೆ ಪ್ರಚಾರ ಮಾಡಿದರು.ಗೆಲುವಿಗೆ ರಣತಂತ್ರ ಹೆಣೆದು ಗೆಲ್ಲಿಸಿಕೊಂಡೇ ಬೆಂಗಳೂರಿಗೆ ಹೋಗಿದ್ದ ಖಾದ್ರಿ ಅವರಿಗೆ ಸಿಎಂ.ಡಿಸಿಎಂ ಹುಬ್ಬಳ್ಳಿ ಹೆಸ್ಕಾಂ.ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ಅಜ್ಜಂಪೀರ್ ಖಾದ್ರಿ ಅವರನ್ನು ನೇಮಕ ಮಾಡಿ ಇಂಧನ ಇಲಾಖೆ ಸರಕಾರದ ಆಧೀನ ಕಾರ್ಯದರ್ಶಿ ವಿನೋಧ್ ಕುಮಾರ ಡಿ.ಎಂ.ಅವರು ಆದೇಶಶಿದ್ದಾರೆ.
ಖಾದ್ರಿ ಅವರಿಗೆ ರಾಜಕೀಯ ಅಧಿಕಾರ ಲಬಿಸುತ್ತಿದ್ದಂತೆ ಅವರ ಕಾರ್ಯಕರ್ತ, ಅಭಿಮಾನಿಗಳಲ್ಲಿ ಸಂತಸ ಜೋರಾಗಿದೆ. ಮತ್ತೊಂದಡೆ 30 ವರ್ಷದಿಂದ ರಾಜಕೀಯ ಅಧಿಕಾರ ವಂಚಿತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಾಸಕ ಸ್ಥಾನದ ಜತೆಗೆ ನಿಗಮ ಮಂಡಳಿ ಅಧಿಕಾರ ಲಭಿಸಿದ್ದು ಇನ್ನಿಲ್ಲದ ಖುಷಿ ತಂದಿದೆ. ನಾಲ್ಕು ಬಾರಿ ಸೋಲು ಕಂಡಿರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಶಿಸ್ತಿನ ಶಿಫಾಯಿಗಳಾಗಿ ಜನರ ಮನ ಗೆದ್ದ ಖಾದ್ರಿ ಅವರಿಗೆ ನಿಗಮದ ಅಧ್ಯಕ್ಷರಾಗಿದ್ದು ಪಕ್ಷದ ಸಂಘಟನೆಗೆ ಬಲ ತಂದು ಕೊಟ್ಟಿದೆ. ಬರುವ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷ ಗೆಲ್ಲಿಸುವ ಶಕ್ತಿ ಸಿಕ್ಕಂತಾಗಿದೆ.