ಸಂವಿಧಾನದ ಆಶಯಗಳ ವಿಭಾಗಿ ಮಟ್ಟದ ಕಾರ್ಯಗಾರ

ಧಾರವಾಡ 18: ಇವತ್ತಿನ ರಾಜಕೀಯ ಸ್ಥಿತಿಗತಿ ಹಾಗೂ ಸಂವಿಧಾನದ ಬಳಕೆ ಮತ್ತು ಕಾನೂನು ಪಾಲನೆ, ಬಡವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಕರ್ಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ನಾವು ದುಡಿಮೆಯ ಬಗ್ಗೆ ಹೆಚ್ಚು ಒಲುವು ಬಿಟ್ಟು ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ಎಲ್.ಸಿ ಬಕ್ಕಾಯಿ ಹೇಳಿದರು.

ಅವರು ಮಾತನಾಡಿದರು.

 ಸ್ಲಂ-ಜನಾಂದೋಲನ ಕನರ್ಾಟಕ ಹಾಗೂ ಧಾರವಾಡ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘದ ವತಿಯಿಂದ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನದ ಆಶಯಗಳು ಹಾಗೂ ನಗರ ವಂಚಿತ ಯುವ ಜನರ ಸವಾಲುಗಳ ಕುರಿತ ವಿಭಾಗಿಮಟ್ಟದ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿದರು.

 ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರು ಪಯರ್ಾಯ ಕಾನೂನು ವೇದಿಕೆಯ ವಿನಯ ಶ್ರೀನಿವಾಸ ಉದ್ಘಾಟಿಸಿದರು.

    ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಡ್ಯ ರಂಗ ನಿದರ್ೇಶಕ ಅಭಿಗೌಡ ನಗರ ವಂಚಿತ ಯುವ ಜನರು ಎದುರಿಸುತ್ತಿರುವ ಶಿಕ್ಷಣ ಮತ್ತು ನಿರುದ್ಯೋಗದ ಸವಾಲುಗಳನ್ನು ಕುರಿತು, ವಿಷಯ ಮಂಡನೆ ಮಾಡಿದರು.

ಎಸ್.ಜೆ.ಕೆ. ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ ಮಾನ್ವಿ ಇವರು ಸಂಘಟನೆ ಮತ್ತು ಎಸ್.ಜೆ.ಕೆ. ಉದ್ದೇಶ ಹಾಗೂ ಸಂವಿಧಾನದ ಕುರಿತ ಈ ಕಾರ್ಯಗಾರಗಳು ಇನ್ನು ಹೆಚ್ಚು ಹೆಚ್ಚು ಆಗಬೇಕು ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ನಿರೂಪಣೆ ಮಾರುತಿ ಭಿ. ಶಿರೋಳದವರ, ವಂದನಾರ್ಪಣೆ, ಹುಬ್ಬಳ್ಳಿ ಎಸ್.ಜೆ.ಕೆ ಸಂಚಾಲಕಿ ಶೋಭಾ ಕಮತರ ಮಾಡಿದರು.

ಎಸ್.ಜೆ.ಕೆ. ಜಿಲ್ಲಾ ಸಂಚಾಲಕ ರಸೂಲ ಎಂ. ನದಾಫ, ಲಿಡಕರ ಸಂಘದ ಅಧ್ಯಕ್ಷ ಅಶೋಕ ಭಂಡಾರಿ, ವಿನೋದ ಗೌಳಿ, ಸೈನಾಜ ದಪೇದಾರ, ಮಾಯಾ ಸಿಖ್, ಹಾಗೂ ಎಸ್.ಜೆ.ಕೆ ಧಾರವಾಡ, ಗದಗ, ಹುಬ್ಬಳ್ಳಿ ಸಂಘದ ಕಾರ್ಯಕರ್ತರು, ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.