ಲೋಕದರ್ಶನ ವರದಿ
ಮಾಂಜರಿ 13: ವಿದ್ಯಾಥರ್ಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ಆರೋಗ್ಯ ವೃದ್ಧಿಯಾಗುತ್ತದೆ ಅದೇ ಪ್ರಕಾರ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಆದರೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಯ ವೈದ್ಯಾಧಿಕಾರಿ ಡಾ. ಮಹೇಶ್ ಕುಂಬಾರ್ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ಎಸ್ ಸಿ ಪಾಟೀಲ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕ ಕ್ರೀಡಾ ಸ್ಪಧರ್ೆಯನ್ನು ಉದ್ಘಾಟಿಸಿ ಡಾ ಮಹೇಶ್ ಕುಂಬಾರ್ ಮಾತನಾಡಿದರು. ಕ್ರೀಡೆ ಜೊತೆ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು ಪೈಪೋಟಿ ಯುಗದಲ್ಲಿ ವಿದ್ಯಾಥರ್ಿಗಳು ತಂತ್ರಜ್ಞಾನದ ಶಿಕ್ಷಣ ಅವಶ್ಯಕತೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಶ್ರಮಿಸಬೇಕೆಂದರು ಇದೇ ವೇಳೆ ಸದೃಢ ಆರೋಗ್ಯ ನಿಮರ್ಿಸಲು ವಿದ್ಯಾಥರ್ಿಗಳು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಅವರು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ರಾದ ಬಿಎಸ್ ಅಂಬಿ ಶಾರದಾದೇವಿ ಕೋರೆ ಪ್ರೌಢಶಾಲೆಯ ಶಿಕ್ಷಕರಾದ ಬಿಕೆ ಸಿಂದ ಸುಧೀರ್ ಕೋಟಿವಾಲೆ ಹಾಗೂ ಇನ್ನುಳಿದ ಶಿಕ್ಷಕರು ಹಾಜರಿದ್ದರು.