ಲೋಕದರ್ಶನ ವರದಿ
ಮೂಡಲಗಿ 12: ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಗ್ರಾಮಿಣ ಕ್ರೀಡೆಗಳಾದ ಕಬಡ್ಡಿ, ವಾಲಿಬಾಲ, ಖೋ-ಖೋ, ಓಟದ ಸ್ಪಧರ್ೆ, ಗುಂಡು ಎಸೆತ ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದು ಅತಿ ಅವಶ್ಯಕವಾಗಿದೆಯೆಂದು ಬೆಳಗಾವಿ ನೆಹರು ಯುವ ಕೆಂದ್ರದ ಲೆಕ್ಕ ಹಾಗು ಕಾರ್ಯಕ್ರಮ ಸಹಾಯಕ ಅಧಿಕಾರಿ ಆರ್.ಆರ್ ಮುತಾಲಿಕ್ ದೇಸಾಯಿ ಹೆಳಿದರು.
ಧರ್ಮಟ್ಟಿ ಗ್ರಾಮದಲ್ಲಿ ಭಾರತ ಸಕರ್ಾರದ ನೆಹರು ಯುವ ಕೇಂದ್ರ ಬೆಳಗಾವಿ, ಜೈ ಕನರ್ಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ದಿ ಸಂಘ ಹಳ್ಳೂರ, ಅಮೆಚೋರ ಕಬಡ್ಡಿ ಅಸೊಸಿಯೇಷನ್ ಬೆಳಗಾವಿ, ಲಕ್ಷ್ಮೀದೇವಿ ಕ್ರೀಡಾ ಹಾಗೂ ದಟ್ಟಿ ಕುಣಿತ ಕಲಾ ಸಂಘ ಧರ್ಮಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಾ, ಕ್ರೀಡೆಗಳು ಎಲ್ಲರನ್ನು ಒಂದು ಗೂಡಿಸುವ ಕೊಂಡಿಗಳಾಗಿವೆ. ಇಂತಹ ಕ್ರೀಡೆಗಳನ್ನು ತಲೆ ತಲೆಮರಿಗೆ ತಲುಪಿಸುವ ಕಾರ್ಯವಾಗಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೇ ಯುವ ಸಂಘಟನೆಯಲ್ಲಿ ತೊಡಗಿಕೊಂಡು ಗ್ರಾಮೀಣ ಭಾಗದ ಸವರ್ೋತೊಮುಖ ಅಭಿವೃದ್ದಿಗೆ ಶ್ರಮಿಸಬೇಕೆಂದು ಯುವಕರಿಗೆ ಕರೆ ನಿಡಿದರು.
ಕನರ್ಾಟಕ ರಾಜ್ಯ ಯುವ ಸಂಘಗಳ ಒಕ್ಕ್ಕೂಟದ ಜಿಲ್ಲಾ ಅಧ್ಯಕ್ಷ ಸಿದ್ದಣ್ಣಾ ದುರದುಂಡಿ ಮಾತನಾಡಿ, ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಸೋತೆ ಎಂದು ಕುಗ್ಗದೆ ಗೆದ್ದೆನೆಂದು ಹಿಗ್ಗದೆ ನಿರಂತರವಾಗಿ ಪ್ರಯತ್ನಿಸಿದಾಗ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಬಿಳಿಯಾನಸಿದ್ದ ಸ್ವಾಮಿಜೀ ವಹಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುತ್ಯಪ್ಪಾ ಕೋರಕಪೂಜೇರಿ ವಹಿಸಿದರು. ಡಾ.ಶಿವಾನಂದ ವಾಗಲೆ ಬಿ,ಬಿ ಪೂಜೇರಿ, ಡಾ.ರವಿಚಂದ್ರ ಕಂಕನವಾಡಿ, ಮಂಜುನಾಥ ಕುಂಬಾರ, ವಿಟ್ಟಲ ಪೂಜೇರಿ, ಬಸವರಾಜ ತುಬಚಿ, ಮಡ್ಡೆಪ್ಪಾ ಕೋರಕಪೂಜೇರಿ, ಕಾಮನ್ನಾ ಸನಧಿ, ಮಾದೇವ ಬಡ್ಡಿ, ಬನಪ್ಪಾ ಕೋರಕಪೂಜೇರಿ, ಶಿವು ಬಬಲಿ, ಕೆ ಕೆ ತಿಗಡಿ ಹಾಗೂ ಲಕ್ಷ್ಮೀದೇವಿ ಕ್ರೀಡಾ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉದ್ದಪ್ಪಾ ಹಳ್ಳೂರ ಸ್ವಾಗತಿಸಿದರು, ರಾಮಚಂದ್ರ ಕನಕಿಕೋಡಿ ನಿರೂಪಿಸಿದರು. ಅಜ್ಜಪ್ಪಾ ಪೂಜೇರಿ ವಂದಿಸಿದರು.