ಲೋಕದರ್ಶನ ವರದಿ
ಬೆಳಗಾವಿ 27: ವಿವಿಧ ಕ್ರೀಡೆಯಲ್ಲಿ ಯುವ ವಿದ್ಯಾಥರ್ಿಗಳು ಸಾಧನೆ ಮಾಡಿ ಒಲಂಪಿಕನಲ್ಲಿ ಬೆಳಗಾವಿ ಮಿಂಚುವಂತಾಗಲು ಕೆ.ಎಲ್.ಇ ಕಾಯರ್ಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ತನು-ಮನ- ಧನದಿಂದ ಪರಿಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಕ್ರಿಯಾತ್ಮಕ ,ಕೌಶಲ್ಯಯುತವಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆಗೈದು ಭಾರತದ ಕ್ರೀಡಾಲೋಕದ ಕಣ್ಮಣಿಗಳಾಗಬೇಕೆಂದು ಬೆಳಗಾವಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ನಿದರ್ೇಶಕ ಎಸ್.ಸಿ. ಕಟ್ಟೀಮನಿ ಹೇಳಿದರು.
ಅವರು ನಗರದ ಕೆಎಲ್ಇ ಜಿ.ಎ. ಸಂಯುಕ್ತ ಪದವಿಪೂರ್ವ ಕಾಲೇಜಿನ 2018-19ನೆಯ ಸಾಲಿನ ವಾಷರ್ಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತ, ಸೋಲು ಗೆಲುವಿನ ಸೋಪಾನ. ತಮ್ಮ ಹಣೆಬರಹ ತಮ್ಮ ಕೈಯಲ್ಲಿದೆ. ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಕೆಎಲ್ಇ ಆಜೀವ ಸದಸ್ಯ ಮಹಾದೇವ ಬಳಿಗಾರ ಅತಿಥಿಗಳಾಗಿ ಆಗಮಿಸಿ ಪಾರಿವಾಳ, ಬಲೂನ ಹಾರಿಸುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯ ಸಿದ್ಧರಾಮ ಗದಗ ವಹಿಸಿ ಮಾತನಾಡಿದರು. ಆರಂಬದಲ್ಲಿ ಆಕರ್ಷಕ ಪಥಸಂಚಲನ ವಿದ್ಯಾಥರ್ಿಗಳಿಂದ ಜರುಗಿತು. ವೇದಿಕೆ ಮೇಲೆ ಪ್ರಭಾರಿ ಪ್ರಾಚಾರ್ಯ ಬಾಗಪ್ಪ ಮಾರದ ಉಪಸ್ಥಿತರಿದ್ದರು.
ಕ್ರೀಡಾ ಕಮೀಟಿಯ ಪ್ರಭು ನಿಡೋಣಿ, ಹನಮಂತ ವೀರಗಂಟಿ, ಎಸ್.ಜೆ. ಏಳುಕೋಟಿ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಅಲ್ಕಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಚ್.ಜಿ.ವೀರಗಂಟಿ ವಂದಿಸಿದರು.