ಸಂಸತ್ ದಾಳಿ, ಹುತಾತ್ಮರಿಗೆ ರಾಜ್ಯಸಭೆ ಗೌರವ ನಮನ

ನವದೆಹಲಿ, 13 ಸಂಸತ್ ಭವನದ ಮೇಲಿನ  ದಾಳಿಯಲ್ಲಿ  ಹುತಾತ್ಮರಾದವರಿಗೆ  ರಾಜ್ಯಸಭೆಯಲ್ಲಿ  ಇಂದು  ಗೌರವ ಸಲ್ಲಿಸಿ, ಒಂದು  ನಿಮಿಷ ಮೌನ ಆಚರಿಸಲಾಯಿತು. ಸದನ ಸಮಾಮಾವೇಶ ಗೊಳ್ಳುತ್ತಿದ್ದಂತೆಯೆ ಸಭಾಪತಿ  ಎಂ.ವೆಂಕಯ್ಯ ನಾಯ್ಡು ಅವರು ಭದ್ರತಾ ಸಿಬ್ಬಂದಿ ಮತ್ತು ಇತರರ  ತ್ಯಾಗ, ಬಲಿದಾನ ದೇಶ ಮರೆಯಲಾಗದು ಎಂದು ಸ್ಮರಿಸಿದರು.ಇದು ಭೀಕರ ದಾಳಿಯ 15 ನೇ ವಾರ್ಷಿಕೋತ್ಸವವಾಗಿದ್ದು ಇಂತಹ ಪಿಡುಗಿನ ವಿರುದ್ಧ ಸದಸ್ಯರು ದೃಡ  ನಿಶ್ಚಯದಿಂದ ಹೋರಾಡಲು ನಿರ್ಧರಿಸಿ, ಹುತಾತ್ಮರಾದವರ ಗೌರವಾರ್ಥ ಸದನದಲ್ಲಿ  ಒಂದು ನಿಮಿಷ  ಮೌನ ಆಚರಿಸಲಾಯಿತು.