ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು - ನರಸನಗೌಡರ
ಮುಧೋಳ 10 : ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಬೇಕು, ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು, ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕೆಂದು ಜಮಖಂಡಿ ಸರ್ಕಾರಿ ಮಹಿಳಾ ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಮಹಾಂತೇಶ ನರಸನಗೌಡರ ಹೇಳಿದರು. ಶುಕ್ರವಾರ ಸಂಜೆ ನಗರದ ರನ್ನ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮುಧೋಳ ಪಬ್ಲಿಕ್ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಹಾಗೂ ಅಮೂಲ್ಯ ಕಿಂಡರಗಾರ್ಟನ್ ಆಂಡ್ ಲೋವರ್ ಪ್ರಾಮೈರಿ ಸ್ಕೂಲ್ ಇದರ 10ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಕರು ಎಷ್ಟು ಅವಶ್ಯವೋ ಅಷ್ಟೆ ತಂದೆ ತಾಯಿಯರ ಜವಾಬ್ದಾರಿ ಮುಖ್ಯವಾಗಿದೆ, ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಕಲಿತು ಹಲವಾರು ಉನ್ನತ ಉದ್ದೆಗಳಿಗೆ ತೆರಳಬೇಕು, ಈಗ ಕಲಿಯುತ್ತಿರುವ ಮಕ್ಕಳು ಮೊಬೈಲ್ ಹಾಗೂ ರಾಜಕಿಯ ವ್ಯಾಮೊಹಕ್ಕೆ ಒಳಗಾಗದೆ ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಪಡೆದು ತಾವು ಕಲಿತ ಸಂಸ್ಥೆಗೆ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸ ಬೇಕೆಂದು ಹೇಳಿದರು ಪತ್ರಕರ್ತ ವಿಶ್ವನಾಥ ಮುನವಳ್ಳಿ ಅತಿಥಿ ಸ್ಥಾನವಹಿಸಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಾಧ್ಯ, ಶಿಕ್ಷಕರು ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸುವ ಪ್ರವೃತ್ತಿ ಮೈಗೂಡಿಸಿಕೊಂಡು ಬೋಧಿಸಿದಾಗ ತಮಗೂ ಶಿಕ್ಷಣದ ಮಹತ್ವ ತಿಳಿಯುವುದರ ಜತೆಗೆ ಸರಳ ಬೋಧನೆಗೆ ಸಹಕಾರಿಯಾಗಲಿದೆ, ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದರು. ಕೆಪಿಸಿಸಿ ಕೋರ್ಡಿನೇಟರ್ ಸದುಗೌಡ ಪಾಟೀಲ ಸಾಂದರ್ಭಿಕವಾಗಿ ಮಾತನಾಡಿದರು, ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಪಾಟೀಲ ಅಧ್ಯಕ್ಷತೆವಹಿಸಿದ್ದರು, ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜ್ಯೋತಿ ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಸೋಮು ಹೆಚ್. ಹಿರೇಮಠ, ಎಂಪಿಎಸ್ ಶಾಲೆಯ ಪ್ರಾಚಾರ್ಯ ನೂರಜಿಹಾನ್ ಮುಲ್ಲಾ ವೇದಿಕೆ ಮೇಲೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಸೆಳೆಯಿತು.