ಲೋಕದರ್ಶನ ವರದಿ
ಬೆಳಗಾವಿ 31: ನಗರದ ಗೋವಾವೇಸದಲ್ಲಿರುವ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿ. 28ರಂದು ನಡೆದ ಪಾಲಕರ ಸಮಾವೇಶದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಪಾಲಕರನ್ನು ಉದ್ದೇಶೀಸಿ ಮಾತನಾಡಿದ ಪ್ರಾಚಾರ್ಯ ಡಾ. ಸಿ.ಎನ್.ನಾಯ್ಕರ ಅವರು ಮಹಾವಿದ್ಯಾಲಯದ ವಿದ್ಯಾಥರ್ಿಗಳಿಗೆ ಅತ್ಯುತ್ತಮವಾಗಿ ಶೈಕ್ಷಣಿಕ ವಾತಾವರಣ ನಿಮರ್ಾಣ ಮಾಡುವ ಧೇಯ್ಯೋದ್ದೇಶ ಹೊಂದಿದೆ. ಪಾಲಕರು ಮಿತ್ರರಂತೆ ಮೃದುವಾಗಿ ಬೆರೆತು ಮಕ್ಕಳಿಗೆ ಅಭ್ಯಾಸ ಮಾಡಲು ಸಲಹೆ ನೀಡಬೇಕು. ಪಾಲಕರು ಮಕ್ಕಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಮಾತ್ರ ನೀಡಬೇಕು, ಮಹಾವಿದ್ಯಾಲಯದಲ್ಲಿ ಅಭ್ಯಾಸದ ಜೊತೆಗೆ ಮಕ್ಕಳ ಅಭಿರುಚಿಗೆತಕ್ಕಂತೆ ಕ್ರೀಡೆ, ಸಾಂಸ್ಕೃತಿಕ ಸ್ರ್ಪಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಶಿಕ್ಷಕ, ಪಾಲಕ, ವಿದ್ಯಾಥರ್ಿಗಳು ಮೂವರು ಸೇರಿ ಅಹನರ್ಿಸಿ ಶ್ರಮಿಸಿದಾಗ ಮಾತ್ರ ಅತ್ಯುತ್ತಮ ಫಲಿತಾಂಶ ಹೊರಬರುತ್ತದೆ ಎಂದು ನುಡಿದರು.
ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಸಿ. ನಾಯ್ಕರ ಅವರು ವೇದಿಕೆಮೇಲೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸುಚಿತ್ರಾ ಯಾದವ ಸ್ವಾಗತಿಸಿದರು, ದೀಪಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾಥರ್ಿ ವೃಂದದವರು ಉಪಸ್ಥಿತರಿದ್ದರು.