ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದಿರಿ: ದೀಪಾ ಚೋಳನ್

ಧಾರವಾಡ 19: ಪಾಲಕರೆ ನೀವು ಸಾಕಾರಗೊಳಿಸದ ಕನಸುಗಳನ್ನು ಮಕ್ಕಳ ಮೇಲೆ ಹೇರದಿರಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೋಮೇಶ್ವರದಲ್ಲಿರುವ ಕೇಂದ್ರೀಯ ವಿದ್ಯಾಲಯದ 36 ನೇ ವಾಷರ್ಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಅವರದೆ ಆದ ಆಸೆ, ಕನಸು, ಪ್ರತಿಭೆ ಹುದಗಿರುತ್ತದೆ ಅದನ್ನು ಗುರುತಿಸಿ, ಎಲ್ಲ ಮಕ್ಕಳು ಅಂಕಗಳನ್ನು ಗಳಿಸುವ ಯಂತ್ರಗಳಲ್ಲ, ಕೆಲ ಮಕ್ಕಳು ಕ್ರೀಡೆ, ಚಿತ್ರಕಲೆ, ಲೇಖನ, ನಾಟಕ, ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ, ಅದನ್ನು ಅರಿತು ಅವರನ್ನು ಅವರಿಗೆ ಆ ಕ್ಷೇತ್ರದಲ್ಲಿ ಮುಂಬರಲು ಪ್ರೋತ್ಸಾಹಿಸಿ ಎಂದರು. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿ, ಹೆಣ್ಣು ಮಕ್ಕಳಿಗೆ ಗೌರವದಿಂದ  ಕಾಣುವದನ್ನು ಹೇಳಿಕೊಡಿ,  ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿ ತುಂಬಾ ಇದೆ, ತಂತ್ರಜ್ಞಾನ ಉಪಯೋಗಿಸಿ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ಕಲಿಸುವುದು ಒಬ್ಬ ಒಳ್ಳೆಯ ಶಿಕ್ಷಕನ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ, ರೂಪಶ್ರೀ, ಪ್ರಾಂಶುಪಾಲ ಮುರಳಿಕೃಷ್ಣ, ಮಾಜಿ ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೋನಾ ವಮರ್ಾ, ರಜತ ಸೈನಿ, ಜಿ.ಎನ್.ಹೆಗಡೆ, ಐಶ್ವರ್ಯ, ಸ್ಮೀತಾ, ರಾಜಶೇಖರ್, ರಂಗನಾಥ, ಬಸಪ್ಪ, ನೀತಾ, ರವಿಕಾಂತ, ಮಂಜುನಾಥ, 10 ನೇ ತರಗತಿ ಮತ್ತು 12 ನೇ ತರಗತಿ 100 ಕ್ಕೆ 100 ರಷ್ಟು ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 12 ನೇ ತರಗತಿಯಲ್ಲಿ 92.20 ಅಂಕ ಗಳಿಸಿದ ಪ್ರದಿತಿ ಪಾಟೀಲ, ಹಾಗೂ 10 ನೇ ತರಗತಿಯಲ್ಲಿ 95 ಪ್ರತಿಶತ ಅಂಕ ಗಳಿಸಿದ ನಿಧಿ ಈ ವಿದ್ಯಾಥರ್ಿಗಳಿಗೆ 5000/- (ಐದು ಸಾವಿರ ರೂ.) ನಗದು ಬಹುಮಾನ ಶಾಲೆಯ ವತಿಯಿಂದ ನೀಡಿ ಸನ್ಮಾನಿಸಲಾಯಿತು. 

ಸ್ವಾಗತ ನೃತ್ಯದೊಂದಿಗೆ ಪ್ರಾರಂಭಗೊಂಡ ಸಾಂಸ್ಕ್ರತಿಕ ಕಾರ್ಯಕ್ರಮ ಕೃಷ್ಣ ವಂದನ, ಯುಎಸ್ಎ ಡ್ಯಾನ್ಸ, ಟ್ರೇಬಲ್ ಡ್ಯಾನ್ಸ, ತೆಲುಗು ನೃತ್ಯ, ಸಂಸ್ಕೃತ ಶ್ಲೋಕ, ದೇಶಭಕ್ತಿ ಗೀತೆ, ಕನ್ನಡದ ಪಟ್ಟದ ಕುಣಿತ, ಗುಜರಾತಿ ನೃತ್ಯ, ಭಯಾನಕ ನೃತ್ಯ, ಇಂಡೋ ವೆಸ್ಟರ್ನ ಡ್ಯಾನ್ಸ ಮಾಡಿ ಮಕ್ಕಳು ನೆರೆದ ಸಭಿಕರನ್ನು ಮಂತ್ರ ಮುಗ್ಧ ಮಾಡಿದರು. 

ನಿರೂಪಣೆ  ಎ.ವಿ. ಐಶ್ವರ್ಯ, ವಂದನಾರ್ಪಣೆ ಎಸ್.ಎಮ್. ಸೌದಾಗರ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.