'ಮಕ್ಕಳಿಗೆ ಪಾಲಕರು ಮನೋಸ್ಥೈರ್ಯ ನೀಡಿ'

ಲೋಕದರ್ಶನ ವರದಿ

ಬೆಳಗಾವಿ 23:  ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಥರ್ಿನಿಯರ 'ಪಾಲಕರ ಸಭೆ' ಹಮ್ಮಿಕೊಳ್ಳಲಾಗಿತ್ತು. ಜಿಎಸ್ ಎಸ್ ಕಾಲೇಜಿನ ನಿವೃತ್ತ ಪ್ರಾದ್ಯಾಪಕರು ಹಾಗೂ ಈಗಿನ ಮಾಡೆಲ್ ಪಿ. ಯು. ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರೀಧರ ಹುಕ್ಕೇರಿಯವರು ಪಾಲಕರ ಸಭೆಯಲ್ಲಿ ಮುಖ್ಯತಿಥಿಗಳಾಗಿ ಉಪಸ್ಥಿತರಿದ್ದು ಪಾಲಕರಿಗೆ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ  ಮಾರ್ಗದರ್ಶನ ಮಾಡಿದರು. "ಮಕ್ಕಳಿಗೆ ನಿಜವಾದ ಜ್ಞಾನ ನೀಡುವ ಶಿಕ್ಷಕ ಗಿಡದ ಕೆಳಗೆ ಕುಳಿತಾದರೂ ಜ್ಞಾನವನ್ನು ನೀಡುತ್ತಾನೆ. ಆದ್ದರಿಂದ ನಿಮ್ಮ ಮಕ್ಕಳ ಭವಿಷ್ಯಕ್ಕೆ ಐಷಾರಾಮಿ ಕಾಲೇಜುಗಳಿಗಿಂತ ಸಂಪೂರ್ಣ ಜ್ಞಾನದ ಜೊತೆಗೆ ಮುಂದಿನ ಜೀವನವನ್ನು ರೂಡಿಸುವಂತಹ ಕಾಲೇಜುಗಳಲ್ಲಿ ನಿಮ್ಮ ಮಕ್ಕಳ ಶಿಕ್ಷಣವನ್ನು ಮುಂದುವರಿಸಿ ಎಂದು ಪಾಲಕರಿಗೆ ಕಿವಿಮಾತು ಹೇಳುತ್ತಾ ಬಿ.ಕೆ. ಮಾಡೆಲ್ ಹೈಸ್ಕೂಲಿನ ಆವರಣದಲ್ಲಿ ಹೊಸದಾಗಿ ಆರಂಭಗೊಂಡ ಪಿಯು ಕಾಲೇಜಿನ ವೈಶಿಷ್ಠ್ಯಗಳು ಹಾಗೂ ಮಕ್ಕಳಿಗೆ ದೊರಕುವ ಗುಣಮಟ್ಟದ ಜ್ಞಾನ ಹಾಗೂ ಸೌಲಭ್ಯಗಳ ಬಗ್ಗೆ ವಿವರಿಸಿದರು.

         ಬೆಳಗಾವಿ ಶಿಕ್ಷಣ ಸಂಸ್ಥೆಯ ಗೌರವಾನ್ವಿತ ಕಾರ್ಯದಶರ್ಿಗಳು ಹಾಗೂ ನಗರದ ಹೆಸರಾಂತ ಚಾರ್ಟಡ್ ಅಕೌಂಟಂಟ್ರಾದ ಶ್ರೀನಿವಾಸ ಶಿವಣಗಿಯವರು ಅಧ್ಯಕ್ಷತೆ ವಹಿಸಿದ್ದರು ಅವರು ಮಾತನಾಡುತ್ತ "ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ, ಧೈರ್ಯದಿಂದ ಹಾಗೂ ಆನಂದದಿಂದ ಎದುರಸಲಿ ಅವರಿಗೆ ಶಿಕ್ಷಕರು ಹಾಗೂ ಪಾಲಕರು ಆ ರೀತಿ ಒಂದು ಮನೋಸ್ಥೈರ್ಯ ಕೊಡಿರಿ" ಎಂದು ಕರೆ ನೀಡಿ ಸಂಸ್ಥೆಯಿಂದ ಮಕ್ಕಳಿಗೆ ದೊರಕುವ ಪಿಯುಸಿ ವರೆಗಿನ ವಿದ್ಯಾಭ್ಯಾಸದ ಬಗ್ಗೆ ವಿವರಿಸಿದರು.

         ಬೆಳಗಾವಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಜಿ. ಎನ್. ಜೋಶಿಯವರು ಶಾಲೆಯಲ್ಲಿನ ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳಲ್ಲಿ  ಒಳ್ಳೆಯ ಹವ್ಯಾಸಗಳು, ಮನೋಭಾವನೆ, ಪ್ರಾಮಾಣಿಕತೆ ಶಿಸ್ತು ಮತ್ತು ಸಂಯಮ ಗುಣಗಳನ್ನು ಬೆಳೆಸಲು ಪ್ರಯತ್ನಿಸಬೇಕೆಂದು ಹೇಳಿದರು. ಈಶಸ್ತವನ ಹಾಗೂ ದೀಪ ಬೆಳಗಿಸುವುದರ ಮೂಲಕ ಕರ್ಾಕ್ರಮ ಆರಂಭವಾಯಿತು. ಶಾಲೆಯ ಮುಖ್ಯೋಪಾದ್ಯಾಯರಾದ ಎಮ್. ಕೆ. ಮಾದಾರ ಸಭಿಕರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ದೊರೆಯುವ ಗುಣಾತ್ಮಕ ಶಿಕ್ಷಣದ ಬಗ್ಗೆ ವಿವರಿಸಿದರು ಮುಂಬರುವ ಎಸ್ಎಸ್ಎಲ್ಸಿ ವಾರ್ಷಿಕ್  ಪರೀಕ್ಷೆಯ ನಿಯಮಗಳು ಹಾಗೂ ಜಾಗ್ರುಕತೆಯ ಬಗ್ಗೆ ವಿವರಿಸಿದರು.  ಕಾರ್ಯಕ್ರಮದಲ್ಲಿ ಪಿ. ಬಿ. ಬಡಕುಂದ್ರಿ, ಮಕ್ಕಳು, ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ. ಶ್ರಿದೇವಿ ಇಟಗಿಕರ ನಿರೂಪಿಸಿ ಕುಮಾರಿ. ಸಾಕ್ಷಿ ಮೊತೆಕರ ವಂದಿಸಿದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸರಸ್ವತಿ ದೇಸಾಯಿ, ವೆಂಕಟೇಶ ಕುಲಕಣರ್ಿ ಹಾಗೂ ಶ್ರೀದೆವಿ ಕುಲಕಣರ್ಿ ಶ್ರಮಿಸಿದರು.