ಲೋಕದರ್ಶನ ವರದಿ
ರಾಯಬಾಗ 20: ಮಕ್ಕಳ ಸಾಮಥ್ರ್ಯವನ್ನು ಗುತರ್ಿಸಿ ಅವರು ಆಸಕ್ತಿ ಹೊಂದಿದ ವಿಷಯದಲ್ಲಿ ಮುಂದುವರೆಯಲು ಪಾಲಕರು ಪ್ರೋತ್ಸಾಹ ನೀಡಬೇಕು. ಇದರಿಂದ ಅವರಲ್ಲಿರುವ ಸೃಜನಾತ್ಮಕ ಕಲೆ ಹೊರಹೊಮ್ಮುತ್ತದೆ ಎಂದು ಹುಬ್ಬಳ್ಳಿಯ ಸಿ.ಎ ನಟರಾಜ್ ಮುಶರ್ಿಲ್ಲಿ ಹೇಳಿದರು.
ಶನಿವಾರ ಪಟ್ಟಣದ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆಯ ಮಹಾವೀರ ವಸತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಅತೀಯಾದ ಕಟ್ಟುಪಾಡುಗಳನ್ನು ವಿಧಿಸದೇ ಸ್ವಾತಂತ್ರ ಕೊಟ್ಟು, ಸ್ನೇಹಿತರಂತೆ ಬೆಳಸಬೇಕು. ತಪ್ಪು ದಾರಿಗೆ ಹೋಗುತ್ತಿರುವುದು ಕಂಡ ಬಂದರೆ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳಿ, ಸಮಾಜದಲ್ಲಿ ಒಳ್ಳೆಯ ನಾಗರೀಕನಾಗಿ ಬೆಳೆಯುವಂತೆ ಮಾರ್ಗದರ್ಶನ ನೀಡಬೇಕೆಂದು ಕಿವಿ ಮಾತು ಹೇಳಿದರು.
ಸಂಸ್ಥೆ ಅಧ್ಯಕ್ಷ ಡಿ.ಎಮ್.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಸುಮತಿ ಶಿಂದೆ, ಶೀತಲ ಬೇಡಕಿಹಾಳೆ, ಸಂಜು ಬಡೋರೆ, ಡಾ.ಅಜೀತ ನಾಯಿಕ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ಪಾಲಕರು ಮತ್ತು ವಿದ್ಯಾಥರ್ಿಗಳು ಇದ್ದರು.