ಪಾಪು-ಬಾಪು ನಾಟಕ ಪ್ರದರ್ಶನ

ಲೋಕದರ್ಶನ ವರದಿ

ಹೂವಿನಹಡಗಲಿ06: ಪಟ್ಟಣದ ಜಿಬಿಆರ್ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ವತಿಯಿಂದ ಕಾಲೇಜ್ ವಿದ್ಯಾಥರ್ಿಗಳಿಗಾಗಿ 2018 ಡಿಸೆಂಬರ್ 28ರಂದು ಪಾಪು-ಬಾಪು ನಾಟಕದ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

       ಕನರ್ಾಟಕ ಸಕರ್ಾರದ ವಾತರ್ಾ ಇಲಾಖೆ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ರೂಪಿಸಿರುವ ಗಾಂಧೀ 150 ಒಂದು ರಂಗ ಪಯಣದ ಭಾಗವಾಗಿ ಕಾಲೇಜಿನಲ್ಲಿ ನಾಟಕ ಪ್ರದರ್ಶನವಾಯಿತು. ಬೊಳುವಾರು ಮಹಮದ್ ಕುಂಞ್ ಅವರ 'ಪಾಪು ಗಾಂಧೀ ಗಾಂಧೀ ಬಾಪು ಆದ ಕತೆ' ಕೃತಿಯನ್ನು ಆಧರಿಸಿದ ರಂಗ ಪ್ರಯೋಗವೇ ಪಾಪು-ಬಾಪು ನಾಟಕವನ್ನು ಶಿರಸಿಯ ಡಾ.ಶ್ರೀಪಾದ ಭಟ್ ರಂಗರೂಪಕ್ಕೆ ತಂದು ನಿದರ್ೇಶಿಸಿದ್ದು ನಾಡಿನ ಅತ್ಯಂತ ಪ್ರಯೋಗಶೀಲ ಕಲಾವಿದರು ಭಾಗವಹಿಸಿದ್ದಾರೆ.

ಈ ನಾಟಕದಲ್ಲಿ ಗಾಂಧೀ ಪಾತ್ರ ನಿರ್ವಹಿಸಿದ್ದ ಜಿಬಿಆರ್ ಕಾಲೇಜಿನ ಹಳೆಯ ವಿದ್ಯಾಥರ್ಿ ಅಜಯ್ ಚಲವಾದಿ ಹಾಗೂ ತಂಡದ ವ್ಯವಸ್ಥಾಪಕ ಹರಿಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.         ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ವರಕುಮಾರಗೌಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಶ್ರೀನಿವಾಸ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರಂಗಪಯಣದ ತಾಲೂಕು ಸಂಚಾಲಕ ದ್ವಾರಕೀಶ ರೆಡ್ಡಿ, ಎಚ್.ಕೆ.ಮಹೇಶ್, ಎಚ್.ಎಂ.ಗುರುಬಸವರಾಜಯ್ಯ ಸೇರಿದಂತೆ ಕಾಲೇಜಿನ ಹಲವು ಉಪನ್ಯಾಸಕರು ಹಾಗೂ ವಿದ್ಯಾಥರ್ಿಗಳು ನಾಟಕ ವೀಕ್ಷಿಸಿದರು. ಪಾಪು-ಬಾಪು ರಂಗ ಪ್ರಯೋಗ ವಿದ್ಯಾಥರ್ಿ ಯುವಜನರಿಗೆ ತಲುಪುವಲ್ಲಿ ಯಶಸ್ವಿಯಾಯಿತು.