ಮಹಿಳೆಯರಿಗಾಗಿ ಇನ್ನರ್ ವೀಲ್ ಕ್ಲಬ್‌ದಿಂದ ಪ್ಯಾಪ್ ಸ್ಮೀಯರ್ ಪರೀಕ್ಷಾ ಶಿಬಿರ
ಕೊಪ್ಪಳ 07: ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ನಗರದ ಲೈನ್ಸ್ ಆಸ್ಪತ್ರೆಯಲ್ಲಿ ಮಹಿಳಾ ಆರೋಗ್ಯ ಮುಂದಾಳು ಯೋಜನೆ ಅಡಿಯಲ್ಲಿ ಮಹಿಳೆಯರಿಗಾಗಿ ಪ್ಯಾಪ್ ಸ್ಮಿಯರ್ ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು ಇದರಿಂದ ಸುಮಾರು 25 ಮಹಿಳೆಯರು ಇದರ ಲಾಭ ಪಡೆದುಕೊಂಡರು ಈ ಮುಂದಾಳು ಮಹಿಳಾ ಆರೋಗ್ಯ ವನ್ನು ಉತ್ತೇಜಿಸಲು ಮತ್ತು ಗರ್ಬಾಶಯ ಬಾಯಿ ಕ್ಯಾನ್ಸರ್ ಬಗ್ಗೆ ಮುಂಜಾಗ್ರತೆಗಾಗಿ ಮುಂಚಿನ ಪತ್ತೆಗಾಗಿ ಮಹತ್ವಪೂರ್ಣ ಹೆಜ್ಜೆ ಇದಾಗಿದೆ ಇದರಿಂದ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದಾಗಿದೆ ಇದರ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಹಮ್ಮಿಕೊಂಡಿದೆ ಎಂದು ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು.
ಸದರಿ ಶಿಬಿರದಲ್ಲಿ ಸುಮಾರು 50 ಜನ ಮಹಿಳೆಯರು ಪಾಲ್ಗೊಂಡು ಇದರ ಲಾಭ ಪಡೆದುಕೊಂಡರು, ಈ ಶಿಬಿರದಲ್ಲಿ ಡಾ, ಗೀತಾಂಜಲಿ ಜಂತ್ಲಿ ಮತ್ತು ಪ್ರದೀಪ್ ಸೋಮಲಾಪುರ್ ಪಾಲ್ಗೊಂಡು ಮಹಿಳೆಯರಲ್ಲಿ ಜಾಗೃತಿ ಮತ್ತು ಮುಂಜಾಗ್ರತೆ ಕ್ರಮದ ಬಗ್ಗೆ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್ ಐ ಎಸ್ ಓ ಮಧು ನಿಲೋಗಲ್ ಎಡಿಟರ್ ನಾಗವೇಣಿ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ರಾಧಾ ಕುಲಕರ್ಣಿ, ಮಾಜಿ ಅಧ್ಯಕ್ಷರಾದ ಪದ್ಮ ಜೈನ್, ಸುಜಾತ ಪಟ್ಟಣಶೆಟ್ಟಿ ಅಲ್ಲದೆ ಸುಧಾ ಶೆಟ್ಟರ್ ,ಮಮತಾ ಶೆಟ್ಟರ್, ಸಕ್ರಿಯ ಸದಸ್ಯರಾದ ಕವಿತಾ ಶೆಟ್ಟರ್ ,ವಿದ್ಯಾ ಬೆಟಿಗೇರಿ ಶೋಭಾ ,ಶಿಲ್ಪ ಶಶಿಮಠ್, ಜ್ಯೋತಿಮಟ್ಟಿ ,ಹೇಮಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.