ಪಂಡಿತ್ ದೀನದಯಾಳರ ಕೊಡುಗೆ ಅಪಾರ: ಹಾಲಪ್ಪ ಆಚಾರ್

ಲೋಕದರ್ಶನ ವರದಿ

ಯಲಬುಗರ್ಾ: ಪಂಡಿತ ದಿನದಯಾಳ ಉಪಾಧ್ಯಯಜೀಯವರು ಭವಿಷ್ಯ ಭಾರತದ ಜೀವನ ಹೇಗಿರಬೇಕು ಎಂದು ಕನಸು ಕಂಡವರು "ಏಕಾತ್ಮ ಮಾನವತಾವಾದ" ಹಾಗೂ "ಅಂತ್ಯೋದಯ" ಎಂಬ ಹೆಸರಿನಲ್ಲಿ ತಮ್ಮ ಆಥರ್ಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ದಾಂತಗಳನ್ನು ದೇಶದ ಮುಂದೆ ಭಾಷಣ ಹಾಗೂ ಲೇಖನಗಳ ಮೂಲಕ ಮಂಡಿಸಿದರು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

ನಗರದ ತಾಲೂಕ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ ಉಪಾಧ್ಯಾಯರ 103 ನೇ ಜನ್ಮ ವಷರ್ಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾನಪುರದ ಸನಾತನ ಧರ್ಮ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವಾಗಲೇ ಇವರ ಪರಿಚಯ ಬಲವಂತ ಮಹಾಶಬ್ದೆ ಅವರೊಡನೆ ಆಯಿತು ಹಾಗೂ ಇವರ ಪ್ರೇರಣೆಯಿಂದ ದೀನದಯಾಳಜೀಯವರು 1937ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿಕೊಂಡರು. ಹಾಗೂ ಎಂ ಎ ಮಾಡಲು ಆಗ್ರಾಕ್ಕೆ ತೆರಳಿದರು ಅಲ್ಲಿಯೂ ಸಹ ನಾನಾಜೀ ದೇಶಮುಖ ಹಾಗೂ ಬಾವುರಾವ್ ಜುಗಾಡೆ ಪರಿಚಯದಿಂದ ಸಂಘದ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. 1942ರಲ್ಲಿ ತಮ್ಮ ಬೇರೆ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದರು. ಉತ್ತರ ಪ್ರದೇಶದ ಲಖಿಮಾಪೂರ ಜಿಲ್ಲೆಯಲ್ಲಿ ಸಂಘದ ಕೆಲಸಕ್ಕಾಗಿ ತೆರಳಿದರು. ದೀನದಯಾಳ ಉಪಾಧ್ಯಾಯರ ಜೀವನದ ಆದರ್ಶಗಳು ಸರ್ವಕಾಲಿಕವಾದವುಗಳು. ಅವರ ದೇಶ ಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.  ಅದರಂತೆ ಅವರ ತತ್ವಾದರ್ಶಗಳು ನಮಗೆ ದಾರಿ ದೀಪಗಳಾಗಿವೆ ಎಂದರು.

ಬಳ್ಳಾರಿ ವಿಭಾಗೀಯ ಸಂಚಾಲಕ ಪ್ರಾಣೇಶರವರು ದೀನದಯಾಳಜೀಯವರ ಬಗ್ಗೆ ಉಪನ್ಯಾಸ ನೀಡಿದರು, ಮಾಜಿ ಬಿಜೆಪಿ ತಾಲೂಕ ಅದ್ಯಕ್ಷ ಶೀವನಗೌಡ್ರ ಬನ್ನಪ್ಪಗೌಡ್ರ ಮಾತನಾಡಿದರು.

ಮುಖಂಡರಾದ ಸಿ ಎಚ್ ಪಾಟೀಲ್, ಶಕುಂತಲಮ್ಮಾ ಮಲಿಪಾಟೀಲ, ಬಸವಲಿಂಗಪ್ಪ ಭೂತೆ, ಚಂದ್ರಶೇಖರ್ ಪಾಟೀಲ, ವೀರಣ್ಣ ಹುಬ್ಬಳ್ಳಿ, ತಾಪಂ ಉಪಾದ್ಯಕ್ಷ ವೀಶ್ವನಾಥ ಮರಿಬಸಪ್ಪನವರ್, ಪ್ರಭುರಾಜ ಕಲಬುಗರ್ಿ, ಸಿದ್ರಾಮೇಶ ಬೇಲೆರಿ, ದೊಡ್ಡಯ್ಯ ಗುರುವಿನ, ಸುರೇಶ ಮಾಟೂರು, ಷಣ್ಮುಖಪ್ಪ ರಾಂಪೂರ, ಪಪಂ ಸದಸ್ಯರಾದ ಅಂದಯ್ಯ ಕಳ್ಳಿಮಠ, ಅಮರೇಶ ಹುಬ್ಬಳ್ಳಿ, ವಸಂತ ಭಾವಿಮನಿ, ಕಳಕಪ್ಪ ತಳವಾರ, ಸೇರಿದಂತೆ ಅನೆಕ ಕಾರ್ಯಕರ್ತರು ಹಾಜರಿದ್ದರು.