ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ,

Panchkalyana Pratistha Mahotsav is underway

ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ 

ಯಮಕನಮರಡಿ 03: ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ದಿ. 03 ರಂದು ಭಕ್ತಿಪೂರ್ವಕವಾಗಿ ಜೈನ ಧರ್ಮದ ಸಂಪ್ರದಾಯದಂತೆ ಸಕಲ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದು ಮುಂಜಾನೆ ಧರ್ಮಧ್ವಜಾರೋಹನ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

 ಭವ್ಯವಾದ ವೇದಿಕೆ ಉದ್ಘಾಟನಾ ಸಮಾರಂಭವು ಜರುಗಿತು. ನಂತರ ಆನೆ ಮತ್ತು ಕುದುರೆಗಳ ಭವ್ಯ ಮೆರವಣಿಗೆಯೊಂದಿಗೆ ಕುಂಭಮೇಳದೊಂದಿಗೆ ಭಗವಾನ  ಪಾರ್ಶ್ವನಾಥ ಪಂಚ ಲೋಹದ ಮೂರ್ತಿಯನ್ನು ಬರಮಾಡಿಕೊಳ್ಳಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ವಾತ್ಸಲ್ಯ ವಾರಿದಿ ಧರ್ಮ ಕೇಸರಿ ಆಚಾರ್ಯ ಜೀನ ಸೇನ ಮುನಿ ಮಹಾರಾಜರು ಧ್ವಜಾರೋಹಣ ನೆರವೇರಿಸಿದರು. ಅಪಾರ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದು ಹಾಗೂ ಉತ್ಸವ ಕಮೀಟಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು. ದಿ 9ರವರೆಗೆ ಜರುಗುವ ಎಲ್ಲ ವಿಧಿ ವಿಧಾನಗಳನ್ನು ಸಾಂಗವಾಗಿ ಜರುಗಲು ಅನುವು ಮಾಡಿಕೊಟ್ಟರು. 

ಜೈನದರ್ಮದ ಕುರಿತು ಕಿರು ಪರಿಚಯ: ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ವರ್ತಮಾನ ಕಾಲದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಮಹಾವೀರನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೊಳಿಸಿದನು. ಒಂದು ಕಾಲದಲ್ಲಿ ಇದು ರಾಜ ಧರ್ಮವಾಗಿದ್ದು, 8ನೇ ಶತಮಾನದ ನಂತರ ಅವನತಿ ಹೊಂದುತ್ತಾ ಬಂತು.  

ಪ್ರಸ್ತುತ, ಭಾರತದಲ್ಲಿ ಜೈನಧರ್ಮೀಯರು ಅಲ್ಪ ಸಂಖ್ಯಾತರಾಗಿದ್ದು ಕೇವಲ 42 ಲಕ್ಷ ಜನರಿದ್ದಾರೆಂದು (ಜನಗಣತಿ 2001) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಾಪುರ, ಯು.ಎಸ್‌.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. 

ಅದು 91.4ಅ (2001 ಜನಗಣತಿ), ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ ಅರಿಷ್ಟನೇಮಿ, ಪಾರ್ಶ್ವನಾಥ, ಮಹಾವೀರನಿಗಿಂತ ಹಿಂದಿನವರು. ಉತ್ತರಾಧ್ಯಾಯ ಸೂತ್ರಗಳಲ್ಲಿ ಪಾರ್ಶ್ವನಾಥನ ಹೆಸರು ಕಂಡು ಬರುವುದಾಗಿ ತಿಳಿದುಬಂದಿದೆ.