ಮೋದಿ ಕರ್ನಾಟಕದ ರಾಜ್ಯದ ಗ್ಯಾರಂಟಿ ಯೋಜನೆ ಅಳವಡಿಸಿಕೊಂಡರು: ಗ್ಯಾರಂಟಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ
ಕಾರವಾರ 03: ಗ್ಯಾರಂಟಿ ಅನುಷ್ಠಾನ ಮಾಡಿದರೆ, ಸರ್ಕಾರ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.ಕೊನೆಗೆ ಅವರೇ ಮೋದಿ ಗ್ಯಾರಂಟಿ ಎಂದು ಅಳವಡಿಸುವ ಬಿಜೆಪಿ ರಾಜ್ಯಗಳಲ್ಲಿ ಕರ್ನಾಕಟ ಮಾದರಿಯ ಗ್ಯಾರಂಟಿ ಕೆಲಸ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಟೀಕಿಸಿದರು.ಕಾರವಾರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿದ ನಂತರ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಐದು ಗ್ಯಾರಂಟಿ ಅನುಷ್ಟಾನಕ್ಕೆ ಯಾವುದೇ ಹಣದ ಕೊರತೆಯಿಲ್ಲ ಎಂದರು.ರಾಜ್ಯದಲ್ಲಿ 1.22 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು 35,180 ಕೋಟಿ ಖರ್ಚು ಮಾಡಲಾಗಿದೆ.ಗೃಹ ಜ್ಯೋತಿ ಯೋಜನೆಯಲ್ಲಿ 1.63 ಕೋಟಿ ಫಲಾನುಭವಿಗಳಿದ್ದು 12,589 ಕೋಟಿ ಹಣ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ 59.56 ಕೋಟಿ ಫಲಾನುಭವಿಗಳಿದ್ದು 9.775 ಕೋಟಿ ಫಲಾನುಭವಿಗಳಿಗೆ ನೀಡಲಾಗಿದೆ.ಶಕ್ತಿ ಯೋಜನೆಯಲ್ಲಿ 387 ಕೋಟಿ ಫಲಾನುಭವಿಗಳಿದ್ದು ,9352 ಕೋಟಿ ಕರ್ಚು ಮಾಡಲಾಗಿದೆ.ಯುವ ನಿಧಿ ಯೋಜನೆಯಲ್ಲಿ 2.37 ಲಕ್ಷ ನೊಂದಣಿಯಾಗಿದ್ದು, 252 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.ಗ್ಯಾರಂಟಿ ಸ್ಕೀಮ್ ಬೇಡ ಎಂದು ಬರೆದುಕೊಟ್ಟ ಜಿಲ್ಲೆಯಲ್ಲಿ ಐದು ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನವಾಗಿವೆ.
ರಾಜ್ಯದಲ್ಲಿ ಅತಿ ಹೆಚ್ಚು ಗ್ಯಾರಂಟಿ ಯೋಜನೆ ಅನುಷ್ಠಾನ ಆಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದು ರೇವಣ್ಣ ನುಡಿದರು. ಶೇ 98 ರಷ್ಟು ಐದು ಗ್ಯಾರಂಟಿ ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನ ಆಗಿವೆ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ . ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.ಗೃಹ ಲಕ್ಷ್ಮಿ ಹಣ ಬೇಡ ಎಂದು 2500 ಮಹಿಳೆಯರು ಬರೆದು ಕೊಟ್ಟಿದ್ದಾರೆ.
ಹೀಗೆ ಬರೆದು ಕೊಟ್ಟವರು ಉತ್ತರ ಕನ್ನಡ ಜಿಲ್ಲೆಯವರು ಮಾತ್ರ ಎಂದರು.ಗೃಹ ಲಕ್ಷ್ಮಿ ಹಣ ಬೇಡ ಎಂದು ರಾಜ್ಯದಲ್ಲಿ ಕೇವಲ ಉತ್ತರ ಕನ್ನಡ ಜಿಲ್ಲೆಯ ಕೆಲವು ಮಹಿಳೆಯರು ಮಾತ್ರ ಬರೆದುಕೊಟ್ಟಿದ್ದಾರೆ ಎಂದು ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಮ್. ರೇವಣ್ಣ ಹೇಳಿದರು......