ಹನುಮಾನ್ ದೇವಸ್ಥಾನ ದಲ್ಲಿ ಪಂಚಾಮೃತ ಅಭಿಷೇಕ
ಕೊಪ್ಪಳ 06: ಗುರುವಾರ ದಂದು ಮದ್ವನವಮಿ ಪ್ರಯುಕ್ತವಾಗಿ ಬೆಳಗ್ಗೆ 6:00 ಗಂಟೆಗೆ ವಾಯು ಸ್ತೋತ್ರ ಪಠಣ ಮತ್ತು ಪಂಚಾಮೃತ ಅಭಿಷೇಕ ಬೆಳಿಗ್ಗೆ 8:30 ಕ್ಕೆ ರಥೋತ್ಸವ ನೆರೆಯಿತು ನಗರದ ಜವಾಹರ ರಸ್ತೆ ಮುಖಾಂತರ ಆಜಾದ್ ಸರ್ಕಲ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಮುಖಾಂತರ ಪ್ಯಾಟಿ ಈಶ್ವರ ದೆವಸ್ಥಾನ ಹತ್ತಿರ ಇರುವ ಆಂಜನೇಯ ದೇವಸ್ಥಾನ ದಿಂದ ಜವಾಹರ ರಸ್ತೆ ಮುಖಾಂತರ ಬಜಾರ ಹನುಮಾನ್ ದೇವಸ್ಥಾನದ ವರೆಗೆ ರಥೋತ್ಸವ ಭಜನೆ ಮತ್ತು ವೇದ ಘೊಷ ಮುಖಾಂತರ ರಥೋತ್ಸವ ನಡೆಯುತ್ತದೆ.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು ಮತ್ತು ಮಹಿಳೆಯರು ಮತ್ತು ನಗರದ ಪ್ರಮುಖರು ಭಾಗವಹಿಸಿದ್ದರು. ನಂತರ ದೇವಸ್ಥಾನದಲ್ಲಿ ಮಧ್ಯಾಹ್ನ01:30 ಕೆ ತೀರ್ಥ ಪ್ರಸಾದ ನೇರೆವೆರಿತು ಎಂದು ಈ ಮೂಲಕ ಬಜಾರ್ ಹನುಮಾನ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ