ಪಂಚಾಚಾರ್ಯ ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಅಧ್ಯಕ್ಷರಾಗಿ ಜಹಾಗೀರದಾರ, ಉಪಾಧ್ಯಕ್ಷರಾಗಿ ಡೋಣೂರಮಠ ಅವಿರೋಧ ಆಯ್ಕೆ
ತಾಳಿಕೋಟಿ: ಪಟ್ಟಣದ ಜಂಗಮ ಸಮಾಜದ ಪ್ರತಿಷ್ಠಿತ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿಯಮಿತ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುತ್ತುರಾಜ ವಿಶ್ವನಾಥ ಜಹಾಗೀರದಾರ ಹಾಗೂ ಉಪಾಧ್ಯಕ್ಷರಾಗಿ ನಾಗಲಿಂಗಯ್ಯ ಚನ್ನಯ್ಯ ಡೋಣೂರಮಠ ಅವಿರೋಧವಾಗಿ ಆಯ್ಕೆಯಾದರು. ಶನಿವಾರ ಪಟ್ಟಣದಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮುತ್ತುರಾಜ್ ಜಹಾಗೀರದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗಲಿಂಗಯ್ಯ ಡೋಣೂರಮಠ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಂತೋಷಕುಮಾರ ಇಲಕಲ್ಲ ಘೋಷಿಸಿದರು. ಸಂಘದ ಒಟ್ಟು 13 ಸದಸ್ಯರ ಸ್ಥಾನಗಳಲ್ಲಿ 10 ಸ್ಥಾನಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದವು, ಉಳಿದ ಮೂರು ಸ್ಥಾನಗಳಾದ ಹಿಂದುಳಿದ ವರ್ಗ ಅ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ತಲಾ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಎಲ್ಲಾ 10 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿತ್ತು. ಅಧ್ಯಕ್ಷ ಉಪಾಧ್ಯಕ್ಷರ ಈ ಚುನಾವಣಾ ಪ್ರಕ್ರಿಯೆಯಲ್ಲಿ ಹತ್ತೂ ಸದಸ್ಯರು ಭಾಗವಹಿಸಿದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ಕಾರ್ಯ ನಿರ್ವಹಿಸಿದರು. ಸನ್ಮಾನ ಸಮಾರಂಭ: ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಜಂಗಮ ಸಮಾಜದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಮಯದಲ್ಲಿ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು,ವಿ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ,ತಾಲೂಕ ಅಧ್ಯಕ್ಷ ಶರಣಯ್ಯ ಹಿರೇಮಠ, ಶಿವಶಂಕರಯ್ಯ ಹಿರೇಮಠ, ಗುರಯ್ಯ ಹಿರೇಮಠ, ಕಾಶಿನಾಥ ಹಿರೇಮಠ, ಗಜದಂಡಯ್ಯ ಹಿರೇಮಠ,ಶಂಕ್ರಯ್ಯ ಬ್ಯಾಲ್ಯಾಳ ನೂತನ ಸದಸ್ಯರಾದ ಸಂಗಯ್ಯ ಕೊಡಗಾನೂರ, ಬಸಯ್ಯ ಹಿರೇಮಠ, ಚಿನ್ನಯ್ಯ ಹಿರೇಮಠ, ಈರಯ್ಯ ಹಿರೇಮಠ, ಪಂಚಾಕ್ಷರಿ ಹಿರೇಮಠ, ಮಲ್ಲಯ್ಯ ಸಾಲಿಮಠ, ವಿದ್ಯಾ ಮಹಾಂತೇಶ ಮಠ ಹಾಗೂ ರಾಜೇಶ್ವರಿ ಮಲ್ಲಯ್ಯ ವಿಭೂತಿಮಠ ಇದ್ದರು.