ಆರ್ಥಿಕತೆಗೆ ಚೈತನ್ಯ ನೀಡಿದ ಬಜೆಟ್ ಕೃಷಿ, ಕೈಗಾರಿಕೆಗಳಿಗೆ ಉತ್ತೇಜನ ವೈದ್ಯ ಬಸವರಾಜ ಕ್ಯಾವಟರ್ ಪ್ರಶಂಸೆ

Budget that gave impetus to the economy, boosted agriculture, industries Dr. Basavaraja Cavatar pra

ಆರ್ಥಿಕತೆಗೆ ಚೈತನ್ಯ ನೀಡಿದ ಬಜೆಟ್ ಕೃಷಿ, ಕೈಗಾರಿಕೆಗಳಿಗೆ ಉತ್ತೇಜನ ವೈದ್ಯ ಬಸವರಾಜ ಕ್ಯಾವಟರ್ ಪ್ರಶಂಸೆ  

ಕೊಪ್ಪಳ : ಕೇಂದ್ರ ಸರಕಾರದಿಂದ ಶನಿವಾರ ಮಂಡಿಸಲಾದ ಬಜೆಟ್ ನಿಂದ ಮಧ್ಯಮ ವರ್ಗಕ್ಕೆ ಬೂಸ್ಟ್‌ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ವ್ಯಾಖ್ಯಾನಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಧ್ಯಮ ವರ್ಗದವರ ಮೇಲಿನ ಗಮನಿಯ ಉಳಿತಾಯಕ್ಕೆ ಅನುಕೂಲವಾಗಿ ಸುಮಾರು 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಗಮನಾರ್ಹ.ಅದರಲ್ಲಿಯೂ ತೆರಿಗೆಯಲ್ಲಿ ಬಹಳ ಸರಳೀಕರಣ ಮಾಡಲಾಗಿದೆ. ವಿಶೇಷವಾಗಿರುವ ಕ್ಯಾನ್ಸರ್ ಓಷಧಿಗಳಿಗೆ, ಮೆಡಿಕಲ್ ಸೈನ್ಸನ್, ನವ ತಂತಜ್ಞಾನಕ್ಕೆ ಹಾಗೂ ಎಲೆಕ್ಟ್ರಾನಿಕ್ಸ್‌ ಗಳಿಗೆ, ಬಹಳಷ್ಟು ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಅಲ್ಲದೆ, ಬಜೆಟ್ ನಲ್ಲಿ ಬಡವರು. ರೈತರು, ಮಹಿಳೆಯರು, ಯುವಕರು, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೈಗಳಿಗೆ ವಿಪುಲವಾದಂತ ಅವಕಾಶ ಕೊಟ್ಟಿರುವ ಆ್ಯಯವ್ಯಯ ಇದಾಗಿದೆ.ಪ್ರಮುಖವಾಗಿ ವೇಗದಲ್ಲಿ ಆರ್ಥಿಕ ಬೆಳವಣಿಗೆ ದಾಖಲಿಸುತ್ತಿರುವ ಭಾರತವನ್ನು ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಮಾಡುವ ವ್ಯವಸ್ಥೆಯ ಭಾಗವಾಗಿ  ಕೇಂದ್ರ ಬಜೆಟ್ ಕಲ್ಪನೆ ಹೊಂದಿದೆ.ಹಳ್ಳಿಗಾಡಿನಲ್ಲಿ ಸ್ವಯಂ ಉದ್ಯೋಗವಕಾಶ, ರೈಲ್ವೆ, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿದೆ.ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಭಾಗವಾಗಿ ದೇಶದ ಪ್ರತಿ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲು ಉದ್ದೇಶಿಸುವುದು ಸ್ವಾಗತಾರ್ಹ.ಪ್ರಮುಖವಾಗಿ  ಕೃಷಿ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಬಜೆಟ್ ಇದಾಗಿದೆ. ರೈತರಿಗೆ ಧನ-ಧಾನ್ಯ ಕಿಸಾನ್ ಯೋಜನೆ ಜಾರಿ ಮಾಡಿರುವುದು ಮೆಚ್ಚುವಂತಹ ಸಂಗತಿ. ಎಲ್ಲ ಪ್ರೌಢ ಶಾಲೆಗಳಿಗೂ ಇಂಟರ್ ನೆಟ್ ಸಂಪರ್ಕ ಸಾಧಿಸಲು ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ.ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂ. 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಘೋಷಿಸಲಾಗಿದ್ದು, ಇದರಿಂದ ಕರ್ನಾಟಕಕ್ಕೂ 7 ರಿಂದ 8 ಸಾವಿರ ಕೋಟಿ ರೂ. ಸಾಲ ದೊರೆಯುವ ಸಾಧ್ಯತೆ ಇದೆ. ಇದೊಂದು ಅಭಿವೃದ್ಧಿ ಪರ ಬಜೆಟ್, ಆದ್ದರಿಂದ 2025-26 ರ ಹೊತ್ತಿಗೆ ಶೇ 7 ರಿಂದ 8 ರ ವರೆಗೆ ದೇಶದಲ್ಲಿ ಜಿಡಿಪಿ ಅಭಿವೃದ್ಧಿ ನೀರೀಕ್ಷೆ ಮಾಡಬಹುದು ಎಂದು ವೈದ್ಯ ಬಸವರಾಜ ಕ್ಯಾವಟರ್ ಅವರು ತಿಳಿಸಿದ್ದಾರೆ.