ಮಡಿವಾಳ ಮಾಚಿದೇವ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

Madiwala Machideva Jayanti: Floral Tribute by District Administration

ಮಡಿವಾಳ ಮಾಚಿದೇವ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ 01 : ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು. 

ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಮಡಿವಾಳ ಮಾಚಿದೇವ ಅವರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಮಾಡಿ ಗೌರವ ನಮನ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾ ಅಧ್ಯಕ್ಷರಾದ ಕೃಷ್ಣ ಎಸ್‌.ಮಡಿವಾಳರ್, ಸಮಾಜದ ಮುಖಂಡರಾದ ರಾಮಪ್ಪ ಕುಟಕನಳ್ಳಿ, ಗವಿಸಿದ್ದಪ್ಪ ಮಡಿವಾಳರ್, ಶರಣಪ್ಪ ಬೇಟಗೆರಿ, ಕನಕಪ್ಪ ಕನಕಗಿರಿ, ಮಹೇಶ ಹೋಸಳ್ಳಿ, ರಮೇಶ ಹೋಸಳಿ, ರಾಮಣ್ಣ ಮಡಿವಾಳರ್, ಹುಲಗಪ್ಪ, ಅಜಯ ಮಡಿವಾಳರ್ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.