ಅದ್ದೂರಿಯಾಗಿ ರುದ್ರಾವಧೂತರ ಪಲ್ಲಕಿ ಉತ್ಸವ
ಜಮಖಂಡಿ 14: ನಗರದ ರುದ್ರಸ್ವಾಮಿ ಪೇಠ ಗಲ್ಲಿಯಲ್ಲಿ ರುದ್ರಾವಧೂತರ ಪಲ್ಲಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ರುದ್ರಾವಧೂತರ 94ನೇ ಪುಣ್ಯಾರಾಧನೆ ಹಾಗೂ 39ನೇ ವೇದಾಂತ ಪರಿಷತ್ ಕಾರ್ಯಕ್ರಮದ ಕೊನೆಯ ದಿನದಂದು ರುದ್ರಾವಧೂತರ ಪಲ್ಲಕಿ ಉತ್ಸವದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡು ಪಲ್ಲಕಿಯ ಮೇಲೆ ಬೆಂಡು,ಬೆತ್ತಾಸು, ಚುರುಮರಿಯನ್ನು ಹಾರಿಸುವ ಮೂಲಕ ಶ್ರದ್ಧಾ, ಭಕ್ತಿಯನ್ನು ಮೆರೆದರು. ಸಾವಿರಾರು ಮಹಿಳೆಯನ್ನು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತುಕೊಂಡು ಅದರಲ್ಲಿ ಇರುವ ಬೆಂಡು,ಬೆತ್ತಾಸು, ಚುರುಮರಿಯನ್ನು ಹಾರಿಸುತ್ತಿದ್ದರು.
ಮಠದ ಆವರಣದಲ್ಲಿ ನಡೆದ ಪಲ್ಲಕಿ ಉತ್ಸವ ರುದ್ರಾವಧೂತರ ಮಠವನ್ನು ಐದು ಸುತ್ತು ಪ್ರದರ್ಶನ ಹಾಕಿತ್ತು. ನಂತರ ಪಲ್ಲಕಿಯು ಮಠದ ಗರ್ಭ ಗುಡಿಯೊಳಗೆ ಪ್ರವೇಶ ಮಾಡುತ್ತಿದಂತೆ ಸಾವಿರಾರು ಭಕ್ತರು ಓಂ ನಮಃ ಶಿವಾಯ ಎಂದು ಘೋಷಣೆಯನ್ನು ಕೂಗು ಮೊಳಗಿತ್ತು. ನಂತರ ಅನ್ನಸಂತರೆ್ಣ ಜರುಗಿತು.