ಭಾರತೀಯ ಅಧಿಕಾರಿಗಳನ್ನು ಅವಮಾನಿಸಿದ ಪಾಕಿಸ್ತಾನ; ಪ್ರತಿಭಟನೆ ದಾಖಲಿಸಿದ ಭಾರತ

ನವದೆಹಲಿ: ಗುರು ನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಭಾರತೀಯ ಯಾತ್ರಾರ್ಥಿಗಳನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಲಾಹೋರ್'ನ ಫರೂಖಾಬಾದ್ನಲ್ಲಿರುವ ಗುರುದ್ವಾರ ಸಚ್ಛಾ ಸೌಧಕ್ಕೆ ತೆರಳುತ್ತಿದ್ದ ಭಾರತೀಯ ಅಧಿಕಾರಿಗೆ ಪಾಕಿಸ್ತಾನ  ಮಾಡಿದ್ದು, ಈ ಸಂಬಂಧ ಭಾರತ  ಪಾಕ್ ವಿರುದ್ಧ ಪ್ರತಿಭಟನೆ ದಾಖಲಿಸಿದೆ.

ಇಸ್ಲಾಮಾಬಾದ್'ನ ಭಾರತೀಯ ರಾಯಭಾರಿ ಅಧಿಕಾರಿಗಳಾದ ರಂಜಿತ್ ಸಿಂಗ್ ಹಾಗೂ ಸುನಿಲ್ ಕುಮಾರ್ ಅವರಿಗೆ ಗುರುದ್ವಾರಕ್ಕೆ ತೆರಳಲು ಅನುಮತಿ ನಿರಾಕರಿಸುವ ಮೂಲಕ ಪಾಕಿಸ್ತಾನ ಅವಮಾನ ಮಾಡಿದೆ. 

ಗುರುದ್ವಾರದ ಬಳಿ ಬಂದ ಬಳಿಕ ಅಧಿಕಾರಿಗಳನ್ನು ಪಾಕಿಸ್ತಾನ ಅಧಿಕಾರಿಗಳು ತಡೆಹಿಡಿದಿದ್ದಾರೆ. ಸಾಮಾನ್ಯ ಯಾತ್ರಾರ್ಥಿಗಳಂತೆಯೇ ತಮ್ಮನ್ನೂ ಒಳ ಪ್ರವೇಶಿಸಲು ಬಿಡುವಂತೆ ತಿಳಿಸಿದರೂ, ಪಾಕಿಸ್ತಾನ ಅಧಿಕಾರಿಗಳು ಕೇಳಿಲ್ಲ. ಪಂಜಾಬ್ ಸಿಂಘ್ ಸಂಗತ್ ಮುಖ್ಯಸ್ಥ ಗೋಪಾಲ್ ಸಿಂಗ್ ಚಾವ್ಲಾ ಅವರು ಭಾರತೀಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ, ಮತ್ತೊಂದು ದಿನ ಬರುವಂತೆ ತಿಳಿಸಿದ್ದಾರೆ. ಇದು ಗುರುದ್ವಾರದ ಪಾವಿತ್ರ್ಯತೆಯನ್ನು ನಾಶ ಮಾಡಿದಂತಾಗುತ್ತದೆ. ಎಂದು ಭಾರತೀಯ ರಾಯಭಾರಿ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಎಂಪಿಎ ರಮೇಶ್ ಸಿಂಗ್ ಆರೋರ ಹಾಗೂ ತಾರಾ ಸಿಂಗ್ ಹಾಗೂ ಇತರೆ ಸಂಘಟನೆಗಳು ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ ಎಂದು ಹೇಳಿದ್ದಾರೆ.

ಪಾಕ್ ವಿರುದ್ಧ ಪ್ರತಿಭಟನೆ ದಾಖಲು:
ಕರ್ತಾರ್ಪುರ ಕಾರಿಡಾರ್ ಒಪ್ಪಂದವಾದ 24 ಗಂಟೆಗಳಲ್ಲೇ ಈ ಘಟನೆ ನಡೆದಿದ್ದು, ಪಾಕಿಸ್ತಾನದ ಈ ದುರ್ವರ್ತನೆಗೆ ಭಾರತ ಪ್ರತಿಭಟನೆ ದಾಖಲಿಸಿದೆ. 

ಪಾಕಿಸ್ತಾನ ವಿದೇಶಾಂಗ ಸಚಿವಾಲಯವೇ ಈ ಹಿಂದೆ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಗುರುದ್ವಾರ ಪ್ರವೇಶಿಸಲು ಅನುಮತಿ ನೀಡಿತ್ತು. ಅನುಮತಿ ನೀಡಿದ್ದರೂ, ನ.21 ಮತ್ತು 22 ರಂದು ಗುರುದ್ವಾರಕ್ಕೆ ತೆರಳಿದ್ದ ಭಾರತೀಯ ರಾಯಭಾರಿ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿ ಕಿರುಕುಳ ನೀಡಲಾಗಿದೆ. ಪಾಕಿಸ್ತಾನದ ಈ ವರ್ತನೆ ವಿರುದ್ಧ ಭಾರತ ಪ್ರತಿಭಟಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.