ಪಿಎಸ್‌ಐ ಈರಣ್ಣ ರಿತ್ತಿ ವರ್ಗಾವಣೆಗೊಳಿಸಿ ಇಲ್ಲಂದರೆ ಡಿ.12ರಂದು ಶಿರಹಟ್ಟಿ ಬಂದ್‌ಗೆ ಕರೆ
PSI Iranna Rithi should be transferred or else call for Shirahatti bandh on December 12
ಗದಗ 08: ಜಿಲ್ಲೆ ದಕ್ಷ ಪೊಲೀಸ್ ಅಧಿಕಾರಿಗಳನ್ನ ಹೊಂದಿದೆ ಆದರೆ ಈರಣ್ಣ ರಿತ್ತಿ ಎಂಬ ಪಿ ಎಸ್ ಐ ವರ್ಗಾವಣೆ ಗೊಂಡು ಮತ್ತೆ ಶಿರಹಟ್ಟಿ ಠಾಣೆಗೆ ಬಂದಿರುವುದು ಪೊಲೀಸ್ ಇಲಾಖೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಬೆಂಬಲಕ್ಕೆ ನಿಂತಿರುವ ಪಿ ಎಸ್ ಐ ಈರಣ್ಣ ರಿತ್ತಿ ಇವರ ಬೆಂಬಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನಿಂತಿದ್ದಾರೆ ಎಂಬ ಸಂಶಯ ಬಂದಿದೆ ಎಂದು ಶಿವರಾಮಕೃಷ್ಣ ಸೇವಾ ಟ್ರಸ್ಟ್ ಗದಗ ಜಿಲ್ಲಾಧ್ಯಕ್ಷ ರಾಜು ಖಾನಪ್ಪನವರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಮೊದಲು ಲಕ್ಷ್ಮೇಶ್ವರ ನಗರದ ಅಮಾಯಕ ಗೋಸಾವಿ ಸಮುದಾಯದ ಪುರುಷರು ಹಾಗೂ ಮಹಿಳೆಯ ಮೇಲೆ ಈರಣ್ಣ ರಿತ್ತಿ ಹಲ್ಲೆ ನಡೆಸಿರುವುದನ್ನ ಖಂಡಿಸಿ ಅವರ ಅಮಾನತ್ತಿಗೆ ಆಗ್ರಹಿಸಿ ನಂತರ ಅವರು ಬೇರೆ ಕಡೆಗೆ ಹೆಸರಿಗೆ ಮಾತ್ರ ವರ್ಗಾವಣೆ ಗೊಂಡು ಮತ್ತೆ ನಮ್ಮ ಜಿಲ್ಲೆಗೆ ಆಗಮಿಸಿದ್ದು, ಈಗ ಶಿರಹಟ್ಟಿ ತಾಲೂಕಿನ ಬಂಜಾರ ಸಮುದಾಯದ ರೈತನ ಮರ್ಮಾಂಗಕ್ಕೆ ಹಲ್ಲೆ ನಡೆಸಿ ಅವನ ಬಳಿ ಇರುವ ಹಣವನ್ನ ತೆಗೆದುಕೊಂಡಿರುತ್ತಾರೆಂದು ರಾಜು ಖಾನಪ್ಪನವರ ಆರೋಪಿಸಿದರು. ಪಿಎಸ್‌ಐ ಮಾಡುತ್ತಿರುವ ಭ್ರಷ್ಟಾಚಾರ ಮತ್ತು ಹಲ್ಲೆಗಳಿಗೆ ಬೆಂಬಲವಾಗಿ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಸಾತ್ ಇರುವ ಶಂಕೆ ಇದೆ ಎಂದ ಅವರು, ಈ ಕೂಡಲೇ ಇವರನ್ನ ಜಿಲ್ಲೆಯಿಂದ ವರ್ಗಾವಣೆ ಗೊಳಿಸಬೇಕು.
ಇಲ್ಲದಿದ್ದಲ್ಲಿ ಡಿಸೆಂಬರ್-12 ರ ಶುಕ್ರವಾರ ಶಿರಹಟ್ಟಿ ಬಂದ್ ಗೆ ಕರೆ ನೀಡಿದ್ದು, ನಮ್ಮ ಬಂದಗೆ ಸಾರ್ವಜನಿಕರು, ವ್ಯಾಪಾರಸ್ಥರು, ಸುತ್ತ ಮುತ್ತಲಿನ ಗ್ರಾಮಗಳ ಜನರು ಸಹಕಾರ ನೀಡಬೇಕೆಂದು ಆಗ್ರಹಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ರಾಮಣ್ಣ ಕಂಬಳಿ,ಸೋಮು ಗುಡಿ, ಸಂತೋಷ ಖೋಡೇಕರ, ಪರಶುರಾಮ ಡೊಂಕಳ್ಳಿ, ಸತೀಶ ಕುಂಬಾರ, ವಿಶಾಲ ಗೋಕಾವಿ, ಶಿವು ಲಮಾಣಿ, ಪುಂಡಲೀಕ ಲಮಾಣಿ ಸೇರಿದಂತೆ ಇತರರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 