ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರುಗಳು ಆದರ್ಶ ವಿದ್ಯಾರ್ಥಿಗಳಾಹಿ ಹೋರಹೊಮ್ಮಬೇಕು ಪಿ ಎಸ್ ನೇರ್ಲೆಕರ್
ಯಮಕನಮರಡಿ 1 : ಸ್ಥಳೀಯ ಸಿ ಇ ಎಸ್ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೆಹ ಸಮ್ಮೇಳನ ಹಾಗೂ ಪಿ ಯು ಸಿ ದ್ವೀತಿಯ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವು ದಿ. 1 ರಂದು ಕಾಲೇಜಿನ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ ಆರ್ ಎಮ್ ಹಂದಿಗುಂದ ವಹಿಸಿದ್ದರು. ಉಪಸ್ಥಿತರಾಗಿ ವ್ಹಿ ಎಮ್ ದುಗಾಣಿ ಇತಿಹಾಸ ಉಪನ್ಯಾಸಕರಾದ ಎಸ್ ಕೆ ಪಿ ಯು ಕಾಲೇಜ ಹುಕ್ಕೇರಿ ಪಿ ಎಸ್ ನೇರ್ಲೆಕರ ರವರು ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಹೈಸ್ಕೂಲ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಹೆಚ್ಚಿಗೆ ಮುಂಚುಣಿಯಲ್ಲಿದ್ದಾರೆ ವಿದ್ಯಾರ್ಥಿಗಳು ಮಾತ್ರ ಕೇವಲ ಕಾಲೇಜುಗಳಿಗೆ ಹೋಗುವ ನೆಪದಲ್ಲಿದ್ದು ಸ್ಪರ್ದೆಗಳಲ್ಲಿ ಹಿಂದೆ ಬಿದಿದ್ದಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ನಿರ್ಧಿಷ್ಠ ಗುರಿ ತಲುಪಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ಸಾಹ ಮತ್ತು ದೃಡ ಸಂಕಲ್ಪ ಇಟ್ಟುಕೊಂಡಾಗ ಮಾತ್ರ ಗುರಿ ಸಾದಿಸಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾ ವಿದಾರ್ಥಿನಿಯರು ಆಧುನಿಕ ವಸ್ತ್ರಗಳನ್ನು ಧರಿಸದೆ ಪೂರ್ವಜರ ಸಂಪ್ರದಾಯ ರೂಡಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾರಂಭದಲ್ಲಿ ಪ್ರಾಚಾರ್ಯ ನಾಶಿಪುಡಿರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದರಂತೆ ಉಪನ್ಯಾಸಕರಾದ ಎ ಬಿ ನಾಯಿಕ ರವರು ಸನ್ಮಾನ ಸಮಾರಂಭದ ನಿರೂಪಣೆ ಮಾಡಿದರು. ಇದೇ ಸಂಧರ್ಬದಲ್ಲಿ ಕನ್ನಡ ಉಪನ್ಯಾಸಕರನ್ನು ಸನ್ಮಾನಿಸುವುದರ ಜೋತೆಗೆ 2024ರ ನವ್ಹೆಂಬರ 1 ರಂದು ಬೆಳಗಾವಿ ಜಿಲ್ಲೆಯ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ ಚಪಣಿರವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತಿ ಪ್ರಾಚಾರ್ಯ ಎ ಬಿ ಅವಲಕ್ಕಿ, ಪ್ರೌಡಶಾಲೆ ಮುಖ್ಯ ಶಿಕ್ಷಕರಾದ ಎಸ್ ವಾಯ್ ಬನ್ನಿಗಿಡದ ಪಧವಿ ವಾಣಿಜ್ಯ ವಿಭಾಗದ ಪ್ರಾಚಾರ್ಯರಾದ ಅರುಣಾ ಸೂಜಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಶ್ರೀಮತಿ ಕುಂಬಾರರವರು ಹಾಗೂ ಎಲ್ಲ ಉಪನ್ಯಾಸಕರ ಬಳಗ ಸಿಬ್ಬಂದಿ ವರ್ಗ, ಹಾಗೂ ಆಡಳಿತ ಮಂಡಳಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪಾರಿತೋಷಕ ಬಹುಮಾನ ವಿತರಿಸಲಾಯಿತು