ಪಿಕೆಪಿಎಸ್‌ನ ಶತಮಾನೋತ್ಸವ ಸಮಾರಂಭ ಗ್ರಾಮೀಣ ರೈತರಿಗೆ ಸಹಕಾರಿಗಳು ವರದಾನ: ಶಾಸಕ ರಾಜು ಕಾಗೆ
ಕಾಗವಾಡ 23: ರಾಷ್ಟ್ರೀಕೃತ ಬ್ಯಾಂಕ್‌ಗಳು ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಾಯ ನೀಡಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸಹಕಾರಿ ಸಂಘಗಳು ಸ್ಥಾಪನೆಗೊಂಡು, ರೈತರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ರೈತರ ಏಳಿಗೆಗೆ ಶ್ರಮಿಸಿ, ಅವರ ಪಾಲಿಗೆ ವರದಾನವಾಗಿವೆ. ಅದರಂತೆ ಕಾಗವಾಡ ಪಟ್ಟಣದಲ್ಲಿ 100 ವರ್ಷಗಳ ಹಿಂದೆ ಸ್ಥಾಪನೆಗೊಂಡ ಪಿಕೆಪಿಎಸ್ ಸಹಕಾರಿಯು ಇಲ್ಲಿಯ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಿ, ಶತಮಾನೋತ್ಸವ ಕಂಡಿರುವುದು ಹೆಮ್ಮೆಯ ವಿಷಯವಾಗಿದೆಯೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಅವರು, ಸೋಮವಾರ ದಿ. 23 ರಂದು ಕಾಗವಾಡ ಪಟ್ಟಣದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಭವನ ಉದ್ಘಾಟಿಸಿ, ನೂತನ ಸದಸ್ಯರಿಗೆ ಸಾಲ ವಿತರಿಸಿ, ಮಾತನಾಡುತ್ತಿದ್ದರು. ಪಟ್ಟಣದ ಹಿರಿಯರು ಮುಂದಾಲೋಚನೆಯೊಂದಿಗೆ ಇಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸಿ, ಇಲ್ಲಿಯ ರೈತರಿಗೆ ಆರ್ಥಿಕ ನೆರವು ನೀಡುವ ಜೊತೆಗೆ ಕೃಷಿಗಾಗಿ ಬೇಕಾಗುವ ಗೊಬ್ಬರ, ಯಂತ್ರೋಪಕರಣಗಳು ಮತ್ತು ಟ್ರ್ಯಾಕ್ಟರ್ ಖರೀದಿಗಾಗಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ, ರೈತರ ಜೀವನ ಮಟ್ಟವನ್ನು ಸುಧಾರಿಸುವ ಕೆಲಸ ಮಾಡಿದ್ದಾರೆ. ಈಗ ಆ ಸಂಸ್ಥೆಯು ಶತಮಾನೋತ್ಸವ ಆಚರಿಸುತ್ತಿದೆ. ಇದೇ ರೀತಿಯಾಗಿ ಈ ಭಾಗದ ರೈತರಿಗೆ ನೆರವು ನೀಡುವ ಮೂಲಕ ಸಹಕಾರಿಯು ಪ್ರಗತಿ ಸಾಧಿಸಲಿ. ನಾವು ಕೂಡಾ ಎಲ್ಲ ರೀತಿಯ ಸಹಾಯ-ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಸಾನಿಧ್ಯವನ್ನು ಕವಲಗುಡ್ಡದ ಅಮೇಶ್ವರ ಮಹಾರಾಜರು, ನಾಂದಣಿ ಜೈನ ಮಠದ ಜೀನಸೇನ ಭಟ್ಟಾರಕರು, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು, ಬೆಡಗದ ಬನಸಿದ್ಧ ಮಹಾರಾಜರು ವಹಿಸಿದ್ದರು. ಶ್ರೀಗಳು ಮತ್ತು ಗಣ್ಯರು, ನೂತನ ಶತಮಾನೋತ್ಸವ ಭವನವನ್ನು ಉದ್ಘಾಟಿಸಿ, ಪೂಜೆ ನೆರವೇರಿಸಿದರು. ಬಳಿಕ ನಡೆದ ಕಾರ್ಯಕ್ರಮವನ್ನು ಸಸಿಗೆ ನೀರೇರೆದು ಚಾಲನೆ ನೀಡಲಾಯಿತು. ಎಲ್ಲ ಗಣ್ಯರನ್ನು, ಶ್ರೀಗಳನ್ನು, ಸಾಧಕರನ್ನು ಸನ್ಮಾನಿಸಲಾಯಿತು. ನಂತರ ನೂತನ ಸದಸ್ಯರಿಗೆ ಸಾಲವನ್ನು ವಿತರಿಸಲಾಯಿತು. ಸಹಕಾರಿಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ನಡೆದು ಬಂದ ದಾರಿಯನ್ನು ವಿವರಿಸಿ, ಜೊತೆಗೆ ತಾವು ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 3 ಕೋಟಿಯಷ್ಟು ಇದ್ದ ಪತ್ತನ್ನು ಎರಡು ಬಾರಿ ಹೆಚ್ಚಿಗೆ ತಂದು, 10 ಕೋಟಿ ಮಾಡಿದ್ದೇವೆ. ಮತ್ತು ಶತಮಾನೋತ್ಸವ ಭವನ ನಿರ್ಮಾಣ ಮಾಡಿ, ಮಾತು ಉಳಿಸಿಕೊಂಡಿದ್ದೇವೆ. ಇದಕ್ಕೆ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಪರಿಶ್ರಮ ಬಹಳಷ್ಟಿದೆ ಎಂದರು. ಹಲ್ಯಾಳ ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಾ್ಪ ಸವದಿ, ಉಪಾಧ್ಯಕ್ಷ ಶಂಕರ ವಾಘಮೋಡೆ, ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆನ್ನವರ, ಶಿರೋಳ ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಘುನಾಥ ಪಾಟೀಲ, ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ ಪಾಟೀಲ, ತಹಶೀಲ್ದಾರ ರಾಜೇಶ ಬುರ್ಲಿ, ಬಿಡಿಸಿಸಿ ಬ್ಯಾಂಕ್ ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಮಲ್ಲಪ್ಪಾ ರಾವುತನವರ, ಅಣ್ಣಾಸಾಬ ಕಠಾರೆ, ಸೌರಭ ಪಾಟೀಲ, ರಮೇಶ ಚೌಗುಲಾ, ಪದ್ಮಾಕರ ಕರವ, ಶಾಂತಿನಾಥ ಕರವ, ಶಾಂತಿನಾಥ ಕಿನಕೆ ಮತ್ತು ಸಹಕಾರಿಯ ಉಪಾಧ್ಯಕ್ಷ ಬಸವರಾಜ ಉಪ್ಪಾರ, ಸದಸ್ಯರಾದ ಬಸನಗೌಡಾ ಪಾಟೀಲ, ಸತ್ಯೆಗೌಡಾ ಪಾಟೀಲ, ಗೌಸ್ ಸೈಯದ, ಕುಮಾರ ಪೂಜಾರಿ, ಚನಗೌಡಾ ಪಾಟೀಲ, ಅನೀಲ ಮಾಳಿ, ಅನೀಲ ಬಜಂತ್ರಿ, ಕವಿತಾ ಮಗದುಮ್ಮ, ಬ್ಯಾಂಕ್ ನಿರಿಕ್ಷಕರ ಬಿ.ಐ. ಪಾಟೀಲ, ಕಾರ್ಯದರ್ಶಿ ರಾಜೇಂದ್ರ ಪೂಜಾರಿ ಸೇರಿದಂತೆ ಸಹಕಾರಿಯ ಎಲ್ಲ ರೈತ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು, ಉಪಸ್ಥಿತರಿದ್ದರು. ಅಜೀತ ಕರವ ಸ್ವಾಗತಿಸಿದರು. ಎ.ಎಸ್. ಪಾಟೀಲ ನಿರೂಪಿಸಿದರು. ಎ.ಜೆ. ಪಾಟೀಲ ವಂದಿಸಿದರು.