ಸಿ.ಎ ಸೈಟ್, ಘನ ತ್ಯಾಜ್ಯ ವಿಲೇವಾರಿ ಘಟಕ ಜಾಗ ಗುರುತಿಸಲು ಪ.ಪಂ ಸದಸ್ಯರ ಆಗ್ರಹ
ದೇವರಹಿಪ್ಪರಗಿ 10: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಖಾಲಿ ಜಾಗ ಹಾಗೂ ಗಾರ್ಡನ್‌ಗಳಿಗೆ ತಂತಿ ಬೇಲಿ ಹಾಕಿಸುವುದು ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ಪಟ್ಟಣ ಪಂಚಾಯಿತಿಯಿಂದ ಸುಮಾರು 60 ಲಕ್ಷಕ್ಕೂ ಹೆಚ್ಚು ಹಣ ನೀಡಿ ಜಾಗದ ಉತಾರ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ತಂತಿ ತೇಲಿ ಹಾಕಿಸಿ ಕಬ್ಜಾ ಪಡೆಯಲು ಪ.ಪಂ ಸರ್ವ ಸದಸ್ಯರು ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರಿಗೆ ಆಗ್ರಹಿಸಿದರು.ಮಂಗಳವಾರದಂದು ಅಧ್ಯಕ್ಷೆ ಜಯಶ್ರೀ ಬಸವರಾಜ ದೇವಣಗಾಂವ ಉಪಾಧ್ಯಕ್ಷ ರಮೇಶ ಮಸಿಬಿನಾಳ ಹಾಗೂ ಮುಖ್ಯಾಧಿಕಾರಿ ಅವರ ನೇತೃತ್ವದಲ್ಲಿ ಪಟ್ಟಣದ ಪ.ಪಂ ಸಭಾಭವನದಲ್ಲಿ ನಡೆದ 2024-25ರ ಸಾಮಾನ್ಯ ಸಭೆಯಲ್ಲಿ ಹಲವು ವಿಷಯಗಳ ಕುರಿತು ಪಟ್ಟಣದ ಅಭಿವೃದ್ಧಿಗೆ ಸರ್ವ ಸದಸ್ಯರು ಒಮ್ಮತದ ನಿರ್ಧಾರ ಮಾಡಿ ಆಗ್ರಹಿಸಿದ ಘಟನೆ ನಡೆಯಿತು.
ಸಾಮಾನ್ಯ ಸಭೆಯಲ್ಲಿ ದಿ.31-01-2021 ರಿಂದ 31-11-2024ರ ವರೆಗೆ ಜಮಾ ಖರ್ಚುಗಳ ಕುರಿತು ಚರ್ಚೆ, ವಾರ್ಡ್ ನಂ-1ರಿಂದ 10ರ ವರೆಗೆ ಗ್ರಾವಠಾಣ ಗಣಕೀಕೃತ ಉತಾರೆಗಳನ್ನು ಪೂರೈಸುವ ಕುರಿತು, ವಿವಿಧ ವಾರ್ಡುಗಳಲ್ಲಿ ಖಾಲಿ ಜಾಗ ಹಾಗೂ ಗಾರ್ಡನ್‌ಗಳಿಗೆ ತಂತಿಬೆಲೆ ಹಾಕಿಸುವ ಕುರಿತು, ಸರ್ವೇ ನಂ-56/3 ಜಮೀನು ಖರೀದಿಸಿದ ಬಗ್ಗೆ ವಿವರವಾದ ಮಾಹಿತಿ ನೀಡುವುದು, ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಹೊಸ ನಿವೇಶನಗಳನ್ನು ಅಭಿವೃದ್ಧಿ ಪಡಿಸುವ ಪೂರ್ವದಲ್ಲಿ ಸಭೆಯ ಅನುಮತಿ ಪಡೆಯುವ ಕುರಿತು ಹಾಗೂ ಪಟ್ಟಣದಲ್ಲಿ ಬರುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತು ಸರ್ವ ಸದಸ್ಯರಿಗೆ ವಿಷಯಗಳು ಕುರಿತು ಮುಖ್ಯಾಧಿಕಾರಿಗಳು ಗಮನ ಸೆಳೆದಾಗ ಸದಸ್ಯರುಗಳಾದ ಬಸೀರ ಅಹ್ಮದ್ ಬೇಪಾರಿ, ಕಾಸಪ್ಪ ಜಮಾದಾರ, ಕಾಸುಗೌಡ ಬಿರಾದಾರ (ಜಲಕತ್ತಿ) ಸೇರಿದಂತೆ ಹಲವಾರು ಸದಸ್ಯರು ಕೂಡಲೇ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಕಾಲಿ ಜಾಗ ಹಾಗೂ ಗಾರ್ಡನ್‌ಗಳು ಒತ್ತುವರಿ ಆಗುತ್ತಿವೆ ಅವುಗಳನ್ನು ಗುರುತಿಸಿ ತಂತಿ ಬೇಲಿ ಹಾಕಿಸುವ ವ್ಯವಸ್ಥೆ ಮಾಡಬೇಕು.
2018-19ನೇ ಸಾಲಿನಲ್ಲಿ ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಹಣ ನೀಡಿ ಘನ ತ್ಯಾಜ್ಯ ವಿಲೇವರಿ ಘಟಕ ಸ್ಥಾಪಿಸಲು ಜಮೀನು ಖರೀದಿಸಿ ಉತಾರ ಪಟ್ಟಣ ಪಂಚಾಯಿತಿ ಹೆಸರಿನಲ್ಲಿ ಮಾಡದೆ ಇರುವುದು ಮೊದಲು ಇದ್ದ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಅವರ ಸಮಯದಲ್ಲಿ ನಡೆದಿದೆ ಹಾಗೂ ಘಟಕದ ಸಲುವಾಗಿ ಸರ್ಕಾರದಿಂದ ಹಣ ಬಂದರು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸಮಸ್ಯೆಯಾಗಿದೆ ಹಾಗೂ 2 ಎಕರೆ ಜಾಗದ ಉತಾರಿ ಭೂಮಿ ಇದ್ದರೂ ಘಟಕ ನಿರ್ಮಾಣಕ್ಕೆ ತೊಂದರೆಯಾಗಿದೆ ಕೂಡಲೇ ಜಾಗದ ಕುರಿತು ಸರ್ವ ಸದಸ್ಯರು ಪರೀಶೀಲನೆ ನಡೆಸಿ ಸರ್ಕಾರದ ಗಮನಕ್ಕೆ ತರೋಣ ಎಂದರು.
ಪಟ್ಟಣದಲ್ಲಿ ಇದುವರೆಗೆ 133 ನಿವೇಶನಗಳಿದ್ದು ಹೊಸ ನಿವೇಶನಗಳನ್ನು ಅಭಿವೃದ್ಧಿ ಪಡಿಸುವ ಪೂರ್ವದಲ್ಲಿ ಸಭೆಯಲ್ಲಿ ಅನುಮತಿ ಪಡೆಯಬೇಕು, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಹರಾಜು ಕುರಿತು, ಅನಧಿಕೃತ ನಾಳ,ಕಟ್ಟಡಗಳ, ಹೊಸ ಖಾತೆ ಬದಲಾವಣೆ, ಏಜೆಂಟರ ಹಾವಳಿ ಹಾಗೂ ಪಟ್ಟಣದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುದೀರ್ಘ 3ಗಂಟೆಗಳ ಕಾಲ ಗಂಭೀರ ಚರ್ಚೆ ನಡೆಯಿತು.
ಪ.ಪಂ ಸದಸ್ಯರುಗಳಾದ ಶಾಂತಯ್ಯ ಜಡಿಮಠ, ಉಮೇಶ ರೂಗಿ, ಮಂಗಳೇಶ್ವರ ಕಡ್ಲೆವಾಡ, ಕಾಶಿನಾಥ ಭಜಂತ್ರಿ, ಸಿಂಧೂರ ಡಾಲೇರ, ರತ್ನವ್ವ ದೇವೂರ, ಅರಿಫಾಬೇಗುಂ ಬಾಗವಾನ, ಸುಮಂಗಲಾ ಸೇಬೇನವರ, ಸಲೀಮಾ ಮಣೂರ, ದಾನಾಬಾಯಿ ಚವ್ಹಾಣ, ನಾಮ ನಿರ್ದೇಶನ ಸದಸ್ಯರುಗಳಾದ ಶ್ಯಾಮಣ್ಣ ಮೆಟಗಾರ(ರಾಜು), ಸುನೀಲ ಕನಮಡಿ, ಹುಸೇನ ಕೊಕಟನೂರ, ಪ.ಪಂ ಕಿರಿಯ ಅಭಿಯಂತರರಾದ ಗುರುರಾಜ ಬಿರಾದಾರ, ಮುತ್ತುರಾಜ ಹಿರೇಮಠ, ಕಿ.ಆರೋಗ್ಯ ನೀರೀಕ್ಷಕ ಫೀರೋಜ ಮುಲ್ಲಾ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.