ಶೇಡಬಾಳ/ಕಾಗವಾಡ 03: ಕರ್ನಾಟಕಾ ಸರ್ಕಾರ ಮಹಾರಾಷ್ಟ್ರದ ಕೋಯ್ನಾದಿಂದ ಕೃಷ್ಣಾ ನದಿಗೆ 4 ದಿನದ ಒಳಗಾಗಿ ನೀರು ಬಿಡದೇ ಹೋದಲ್ಲಿ ಕಾಗವಾಡ ತಾಲೂಕಿನ ರೈತರು ತಾಲೂಕಾ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಈ ಭಾಗದ ರೈತ ಮುಖಂಡರು ಕಾಗವಾಡ ತಹಶೀಲ್ದಾರ ಮೇಘರಾಜ ನಾಯಿಕ ಅವರಿಗೆ ಮನವಿ ಪತ್ರ ಅರ್ಪಿಸಿ ಒತ್ತಾಯಿಸಿದರು.
ಶುಕ್ರವಾರ ದಿ. 3 ರಂದು ಮಾಜಿ ಜಿಪಂ ಸದಸ್ಯ ರವೀಂದ್ರ ಪೂಜಾರಿ, ಹಾಲಿ ಜಿಪಂ ಸದಸ್ಯ ಅಜೀತ ಚೌಗಲಾ, ರೈತ ಮುಖಂಡ ಶೀತಲಗೌಡ ಪಾಟೀಲ ಇವರ ನೇತೃತ್ವದಲ್ಲಿ ನೂರಾರು ರೈತ ಮುಖಂಡರು ಕಾಗವಾಡ ತಹಶೀಲ್ದಾರರಿಗೆ ಮನವಿ ಪತ್ರ ಅಪರ್ಿಸಿದರು. ಈ ಸಮಯದಲ್ಲಿ ರವೀಂದ್ರ ಪೂಜಾರಿ, ಶೀತಲಗೌಡ ಪಾಟೀಲ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿ ತಾಲೂಕಿನಲ್ಲಿ ನೀರಿನ ಬರ ಎದುರಾಗಿದೆ. ಹನಿ ನೀರಿಗಾಗಿ ಈ ಭಾಗದ ಜನ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ದನ, ಕರುಗಳ ಸ್ಥಿತಿ ಅಂತೂ ಹೇಳತೀರದಾಗಿದೆ. ಚುನಾವಣೆ ಸಮಯದಲ್ಲಿ ಅನೇಕ ಜನಪ್ರತಿನಿಧಿಗಳು ನೀರು ಬಿಡಿಸುವ ಆಶ್ವಾಸನೆ ನೀಡಿ ಹೋದರು ವಿನಃ ಯಾವುದೇ ಕಾರ್ಯ ಕೈಗೂಡಿಲ್ಲ. ಸಕರ್ಾರಿ ಅಧಿಕಾರಿಗಳಂತು ಇಂತಹ ಜ್ವಲಂತ ಸಮಸ್ಯೆ ಕಡೆಗೆ ದುರ್ಲಕ್ಷ ವಹಿಸಿದ್ದು ಖಂಡನೀಯವಾಗಿದೆ ಎಂದು ಆರೋಪಿಸಿದರು. ಮುಂದಿನ ನಾಲ್ಕು ದಿನಗಳಲ್ಲಿ ಕೃಷ್ಣಾ ನದಿಗೆ ನೀರು ಹರಿಸದೇ ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಕಾಗವಾಡ ತಾಲೂಕಿನ ರೈತರಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಂಡಿದೆ. ಇದು ನಾನು ಅರಿತಿದ್ದೇನೆ. ಸಮಸ್ಯೆ ಇತ್ಯರ್ಥಗೊಳಿಸಲು ಕೃಷ್ಣಾ ನದಿಗೆ ನೀರುಹರಿಸಬೇಕು. ಈ ಬೇಡಿಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಸಕರ್ಾರಕ್ಕೆ ನಿಮ್ಮ ವಿಚಾರ ಮುಟ್ಟಿಸುವ ಜವಾಬ್ದಾರಿ ನನ್ನದಾಗಿದೆ ಎಂದು ಕಾಗವಾಡ ತಹಸೀಲ್ದಾರ ಮೇಘರಾಜ ನಾಯಕ ಭರವಸೆ ನೀಡಿದರು.
ಹೋರಾಟದಲ್ಲಿ ಕಾಗವಾಡ ಜಿಪಂ ಸದಸ್ಯ ಅಜೀತ ಚೌಗಲಾ, ಮಾಜಿ ಗ್ರಾಪಂ ಅಧ್ಯಕ್ಷ ನಾತಗೌಡಾ ಪಾಟೀಲ, ಉಗಾರ ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಹೇಬ ಚೌಗಲಾ, ಮಂಗಸೂಳಿ ಮಾಜಿ ಗ್ರಾಪಂ ಅಧ್ಯಕ್ಷ ಚಿದಾನಂದ ಮಾಳಿ, ಮಹಾದೇವ ಕಟಿಗೇರಿ, ಕರವೇ ಅಧ್ಯಕ್ಷ ಸಿದ್ಧು ವಡೆಯರ, ಬಾಬಾಸಾಹೇಬ ಪಾಟೀಲ, ಪಿಎಲ್ಡಿ ಬ್ಯಾಂಕಿನ ನಿದರ್ೇಶಕ ಭರತ ಮಾಳಿ, ಧೊಂಡಿಬಾ ವಾಘಮೋಡೆ, ಮಿಜರ್ಿ ಸೇರಿದಂತೆ ಅನೇಕ ಕಾರ್ಯಕರ್ತರು, ಕಾಗವಾಡ, ಶೇಡಬಾಳ, ಉಗಾರ, ಮಂಗಸೂಳಿ ಮೊದಲಾದ ಗ್ರಾಮಗಳ ಹಲವಾರು ರೈತ ಮುಖಂಡರು ಇದ್ದರು ಉಪಸ್ಥಿತರಿದ್ದರು.
---------------------------------ಬಾಕ್ಸ--------------------------------------
ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ ಶನಿವಾರ ದಿ. 4ರಂದು ಮುಂಜಾನೆ 9 ಗಂಟೆಗೆ ಉಗಾರ ಖುರ್ದ ಪಟ್ಟಣದ ಬಸವೇಶ್ವರ ಸರ್ಕಲ್(ಪರಸಪ್ಪ ಕಾರ್ನರ್) ದಲ್ಲಿ ನೂರಾರು ರೈತರು ಪ್ರತಿಭಟನೆ ಮಾಡಲಿದ್ದಾರೆ.