ಬೈಲಹೊಂಗಲ 26: ಹೆಸರುಕಾಳು ಖರೀದಿ ಕೇಂದ್ರ ತೆರೆಯದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ರಾಜ್ಯ ಸಮ್ಮಿಶ್ರ ಸಕರ್ಾರದ ರೈತ ವಿರೋಧಿ ನೀತಿ ಖಂಡಿಸಿ ಭಾರತೀಯ ಕೃಷಿಕ ಸಮಾಜದಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಹೆಸರುಕಾಳು ಸುರಿದು ಬುಧವಾರ ಆಕ್ರೋಶ ವ್ಯಕ್ತಪಡಿಸಲಾಯಿತು.
ಪಟ್ಟಣದ ಮುರಗೋಡ ರಸ್ತೆಯಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ, ರೈತರ ಮನವಿ ಸ್ವೀಕರಿಸಬೇಕಿದ್ದ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಕಚೇರಿಯಲ್ಲಿ ಇಲ್ಲದ್ದರಿಂದ ಘೋಷಣೆ ಕೂಗಿದರು. ರೈತರ ಆದಾಯ ದ್ವಿಗುಣಗೊಳಿಸುವ ಹೆಸರಿನಲ್ಲಿ ಕೇಂದ್ರ ಸಕರ್ಾರ ರೈತ ಪರವಾದ ನೀಲುವನ್ನು ತೆಗೆದುಕೊಂಡರೂ ಅದು ರೈತನಿಗೆ ಬಂದು ತಲುಪದೆ ಮಧ್ಯವತರ್ಿಗಳ ಪಾಲಾಗುತ್ತಿರುವದನ್ನು ಕಂಡು ಕಾಣದಿರುವ ರಾಜ್ಯ ಸಕರ್ಾರದ ಕ್ರಮಕ್ಕೆ ಧಿಕ್ಕಾರ ಹೇಳಿದರು. ರಾಜ್ಯ ಸಮ್ಮಿಶ್ರ ಸಕರ್ಾರ ರೈತಪರವಾಗಿದೆಯೋ, ದಲ್ಲಾಳಿಗಳ ಪರವಾಗಿದೆಯೋ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ ಎಂದು ನೋವು ತೋಡಿಕೊಂಡರು.
ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಭಾರತೀಯ ಕೃಷಿಕ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಮಹಾಂತೇಶ ಕಮತ, ಮಾತನಾಡಿ, ಕೇಂದ್ರ ಸಕರ್ಾರ ರೈತ ಫಸಲುಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ಹೆಸರುಕಾಳು ಬೆಳೆಗೆ ಪ್ರತಿ ಕ್ವಿಂಟಾಲಗೆ 6,975 ರೂ.ಪ್ರತಿ ರೈತರಿಂದ 10ಕ್ವಿಂಟಾಲ್ ಖರೀದಿಸುವಂತೆ ಆದೇಶಿಸಿದೆ. ಅದು ಇದುವರೆಗೂ ಪ್ರಾರಂಭಿಸದಿರುವದು ಅನ್ಯಾಯದ ಕ್ರಮವಾಗಿದೆ. ಕೂಡಲೇ ತಾಲೂಕಿನಲ್ಲಿ ಹೆಸರುಕಾಳು ಖರೀದಿ ಕೇಂದ್ರ ತೆರೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಮಡಿವಾಳಪ್ಪ ಹೋಟಿ, ಮಾರುತಿ ತಿಗಡಿ, ಈರಪ್ಪ ಹುಬ್ಬಳ್ಳಿ, ಮಡಿವಾಳಪ್ಪ ತಳವಾರ, ಮಡಿವಾಳಪ್ಪ ಬುಳ್ಳಿ, ಈರಪ್ಪ ಅಂಗಡಿ, ಸುರೇಶ ಹೊಳಿ, ಉಳವಪ್ಪ ಬೂದಿಹಾಳ, ಅಡಿವೆಪ್ಪ ದುಗ್ಗಾನಟ್ಟಿ, ಸೋಮಪ್ಪ ಏಣಗಿಮಠ, ಬಸವರಾಜ ದುಗ್ಗಾಣಿ, ಮಲ್ಲಿಕಾಜರ್ುನ ಕರಡಿಗುದ್ದಿ, ದುಂಡಪ್ಪ ಪಣದಿ, ಮಹಾಂತಯ್ಯ ಪೂಜೇರ, ಮಡಿವಾಳಪ್ಪ ಚಿಕ್ಕೊಪ್ಪ, ವಿರುಪಾಕ್ಷಿ ಕರಡಿಗುದ್ದಿ ಹಾಗೂ ಮತ್ತಿತರರು ಇದ್ದರು.
ಎಸಿ ಕಚೇರಿಗೆ ರೈತರು ಬೀಗ ಜಡಿದಿದ್ದರಿಂದ ಸಿಬ್ಬಂದಿ, ಸಾರ್ವಜನಿಕ ಕೆಲಸಗಳು ಕೆಲಕಾಲ ಸ್ಥಗಿತಗೊಂಡಿತ್ತು. ಕಚೇರಿ ಒಳಗಿದ್ದ ಕೆಲ ಸಿಬ್ಬಂದಿ, ನಾಗರಿಕರು ಕಂಪೌಂಡ ಜಿಗಿದು ಹೊರ ನಡೆಯುತ್ತದ್ದ ದೃಶ್ಯ ಕಂಡು ಬಂದಿತು. ಶಿರಸ್ತೆದಾರ ಎಸ್.ಆರ್.ಗೌಡರ, ಸಿಬ್ಬಂದಿ ಜೊತೆ ರೈತರಿಂದ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಕಚೇರಿ ಆವರಣದಲ್ಲಿ ಅಡುಗೆ ತಯಾರಿಸಿ ಊಟ ಮಾಡಿದರು.
ಪೊಟೊ ಕ್ಯಾಪ್ಸನ:ಎಚ್26-ಬಿಎಲ್ಎಚ್ 3
ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತರು ಹೆಸರುಕಾಳು ಸುರಿದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿ ಬುಧವಾರ ಧರಣಿ ನಡೆಸಿದರು.