ನಮ್ಮ ವ್ಯಕ್ತಿತ್ವವ ನಾವೇ ರೂಪಿಸಿಕೊಳ್ಳಬೇಕು: ಡಾ. ಶಿಂದೆ

ಲೋಕದರ್ಶನ ವರದಿ

ವಿಜಯಪುರ 21: ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯೊಂದಿಗೆ ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ  ಪ್ರಾಧ್ಯಾಪಕ  ಡಾ. ವಿಷ್ಣು ಎಂ. ಶಿಂದೆ ನಗರ ಹೊರ ವಲಯದ ಇಟ್ಟಂಗಿಹಾಳ ಎಕ್ಸಲೆಂಟ್ ಪ್ರೌಢಶಾಲೆಯಲ್ಲಿ ಲಿಂ. ಎಂ.ಎಸ್. ಖೇಡ ಲಿಂ. ಮಲ್ಲಪ್ಪ ರುದ್ರಪ್ಪ ತೋಟದ ಲಿಂ. ಶಂಕರಾನಂದ ಉತ್ಲಾಸರ ಇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಶರಣರ ಮೌಲ್ಯಗಳು ಎಂಬ ವಿಷಯ ಕುರಿತಾಗಿ ಉಪನ್ಯಾಸ ನೀಡಿದರು.

ಆದ್ಯ ವಚನಕಾರ ಜೇಡರದಾಸಮಯ್ಯನವರನ್ನು ಮೊದಲು ಮಾಡಿಕೊಂಡು ಅನೇಕ ಶರಣರ ವಚನಗಳಲ್ಲಿನ ಸಾರವನ್ನು ವಿವರಿಸುತ್ತ ಉತ್ತಮ ವ್ಯಕ್ತಿ ಬದುಕಿಗೆ ಮತ್ತು ಸಾಮಾಜಿಕ ಸುಧಾರಣೆಗೆ ಶ್ರಮಿಸಿದವರು 12ನೇ ಶತಮಾನದ ಶರಣರು. ಸಪ್ತಶೀಲಗಳಾದ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ಮೂಲಕ ಸತ್ಯ, ಶುದ್ಧತೆಯ ಬಗ್ಗೆ ಅರಿವು ಮೂಡಿಸಿದವರು. ಕಾಯಕ ದಾಸೋಹ ತತ್ವದ ಮೂಲಕ ಜನಸಾಮಾನ್ಯರು ಸರಳ ಬದುಕಿನ ಬಗ್ಗೆ ಅರಿವು ಉಳ್ಳವರಾಗಿ ಅಂದಿನ ವಚನಗಳ ಸಾರ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ತನ್ನಿಮಿತ್ಯ ಜೀವನ ಸಾರ್ಥಕತೆ ಹೊಂದಿದ್ದರು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಆಶಯ ನುಡಿಗಳನ್ನಾಡುತ್ತ ಸಾಹಿತ್ಯ ಪರಿಷತ್ತು ರಾಜ್ಯದ ಅತೀ ದೊಡ್ಡ ಸರಕಾರದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ವಿವಿಧ ಕಾರ್ಯಕ್ರಮಗಳು ದತ್ತಿಗಳ ಮೂಲಕ ಅಗಲಿದ ಹಿರಿಯರನ್ನು, ಗಣ್ಯರನ್ನು ಸ್ಮರಿಸುವುದರೊಂದಿಗೆ ಅನೇಕ ದತ್ತಿ ಕಾರ್ಯಗಳು ತಪ್ಪದೇ ಪರಿಷತ್ತಿನಲ್ಲಿ ಹಮ್ಮಿಕೊಳ್ಳುತ್ತ ಕನ್ನಡ ನಾಡು, ನುಡಿಗಾಗಿ ಅವಿಸ್ಮರಣಿಯ ಸೇವೆ ಸಲ್ಲಿಸಿದ ಮಹನೀಯರನ್ನು ಈ ಸಂದರ್ಭದಲ್ಲಿ ನೆನೆಯುತ್ತ ಅವರ ವಿಚಾರಗಳ ಮತ್ತು ಬದುಕಿನ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಪ್ರತಿ ಸಂದರ್ಭದಲ್ಲಿ ನಡೆಯುತ್ತದೆ ಎಂದರು.

ಕಾಂಗ್ರೇಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ ಮಾತನಾಡಿ ಸಾಹಿತ್ಯ ಪರಿಷತ್ತು ನಿತ್ಯ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡದ ನಾಡು, ನುಡಿಯನ್ನು ಜಾಗೃತಗೊಳಿಸುವುದರೊಂದಿಗೆ ವಿನೂತನವಾದ ಮಾಸಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿರುವದನ್ನು ಕಾಣುತ್ತೇವೆ.  ದತ್ತಿ ದಾನಿಗಳ ಪರವಾಗಿ ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ಕಾರ್ಯದಶರ್ಿ ಶಿವಾನಂದ ಕೆಲೂರ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವ್ಯಕ್ತಿಯ ಅಂತಸತ್ವವೇ ವ್ಯಕ್ತಿತ್ವ ವಿಕಸನಕ್ಕೆ ಮೂಲ ಕಾರಣ ಮಕ್ಕಳಲ್ಲಿ ಹುದುಗಿದ  ಆಂತರಿಕ ಶಕ್ತಿಯನ್ನು ಹೊರತೆಗೆದು ಅದಕ್ಕೆ ಉತ್ತಮ ಸಂಸ್ಕಾರ ನೀಡುವದೇ ವ್ಯಕ್ತಿತ್ವ ವಿಕಸನ ಎಂದರು.

ಪತ್ರತರ್ಕ ಪರಶುರಾಮ ಬಾಸಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಇಂದಿನ ವಿದ್ಯಾಥರ್ಿಗಳಿಗೆ ವ್ಯಕ್ತಿತ್ವ ವಿಕಸನದಂತಹ ಉಪನ್ಯಾಸ ಅತ್ಯಂತ ಅವಶ್ಯಕ. ಹಾಗೂ ಜನಪದ ಸಾಹಿತ್ಯದಲ್ಲಿ ಮಾನವಿಯ ಮೌಲ್ಯಗಳ ಜೊತೆಗೆ ಸಹಬಾಳ್ವೆ ಪ್ರೀತಿಸಿ ಗೌರವದೊಂದಿಗೆ ಬದುಕುವದನ್ನು ಹಾಡು, ಕುಟ್ಟುವ, ಬಿಸುವ ಕಲೆಗಳಲ್ಲಿ ಒಗ್ಗಟ್ಟಿನ ಬದುಕು ಹಾಸಹೊಕ್ಕಾಗಿತ್ತು ಎಂದರು. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಯು.ಎನ್. ಕುಂಟೋಜಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ ನಿರೂಪಿಸಿದರು. ಪ್ರೊ. ರಾಜೇಂದ್ರಕುಮಾರ ಬಿರಾದಾರ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವಕಾರ್ಯದಶರ್ಿ ಪ್ರೊ. ಬಸವರಾಜ ಕುಂಬಾರ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಭಾಗ್ಯಶ್ರೀ ತೆಗ್ಗಳ್ಳಿ, ಶಿಕ್ಷಕಿ ಮಂದಾಕಿನಿ, ಬಿ.ಎಚ್. ವಿವೇಕಾನಂದ, ತುಪ್ಪದ, ಸಿದ್ದಲಿಂಗ ಕಿಣಗಿ, ಎಸ್.ವಾಯ್. ನಡುವಿನಕೇರಿ, ಸೋಮಶೇಖರ ಕುಲರ್ೆ, ಪ್ರೊ. ಶರಣಗೌಡ ಬಿರಾದಾರ, ಎಕ್ಸಲೆಂಟ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.