ಸರಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧ.ಬಸವರಾಜ ಶಿವಣ್ಣನವರ

Our government is always committed to the development of government schools. Basavaraja Sivannavara

ಸರಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧ.ಬಸವರಾಜ ಶಿವಣ್ಣನವರ 

ಬ್ಯಾಡಗಿ 03 :  ಮಕ್ಕಳಿಗೆ ಉತ್ತಮ ನೀಡುವ ಸರ್ಕಾರಿ ಶಾಲೆಗಳು ರಾಷ್ಟ್ರಭವಿಸನ್ನು ನಿರ್ಣಯಿಸುವ ಶಕ್ತಿಯನ್ನು ಹೊಂದಿದೆ ಅಂತಹ ಶಾಲೆಗಳ ಅಭಿವೃದ್ಧಿಗಾಗಿ ಎಲ್ಲ ಸರಕಾರಗಳು ಸದಾ ಸಿದ್ಧವಾಗಿರುತ್ತವೆ ಎಂದು ಶಾಸಕ ಬಸವರಾಜ್ ಶಿವಣ್ಣನವರು ಹೇಳಿದರು.ಪಟ್ಟಣದ ಪಿಎಂ ಶ್ರೀ ಶಾಸಕರ ಸರ್ಕಾರಿ ತಾಲೂಕು ಮಾದರಿ ಹಿರಿಯ ಪ್ರಾಥಮಿಕ  ಬಡಾವಣೆ ಎಂಟನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು 2024 25 ನೇ ಸಾಲಿನ ಮೂರನೇ ಹಂತದಲ್ಲಿ ಆಯ್ಕೆಯಾದ ಪಿಎಂಶ್ರೀ ಶಾಲಾ ಉದ್ಘಾಟನೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು. ಸರ್ಕಾರಿ ಶಾಲೆಯಲ್ಲಿ ಪ್ರತಿಯೊಬ್ಬ ಮಕ್ಕಳು ತಮ್ಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ನಾಗರಿಕ ರಾಗಿ ಬೆಳೆಯಬೇಕು ಇಂದಿನ ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ನಾವು ಮನಗಾಣಬೇಕಾಗಿದೆ. ಶಾಸಕರ ಮಾದರಿಯ ಸಹಕಾರಿ ಶಾಲೆಯಾಗಿದ್ದು ಇಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವುದು ಸಂತೋಷ ದ ವಿಷಯ ಹೀಗೆ ಪ್ರತಿ ಸರ್ಕಾರಿ ಶಾಲೆಗಳಲ್ಲಿಯೂ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದು ಸರ್ಕಾರದ ಸೌಲತ್ತುಗಳನ್ನು ತೆಗೆದು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಈ ಶಾಲೆಯು ಪಿಎಂ ಶ್ರೀ ಶಾಲೆಯ ಹಾಗೆ ಒಳ್ಳೆಯ ವಿಷಯ ಕೇಂದ್ರ ಸರ್ಕಾರದಿಂದ ಆಯ್ಕೆಯಾದ ಈ ಶಾಲೆಗೆ ಕಲಿಕೆ ಉಪಕರಣಗಳನ್ನು ಹಾಗೂ ಕಟ್ಟಡವನ್ನು ಕಟ್ಟಲು  ಕೇಂದ್ರ ಸರ್ಕಾರದಿಂದ ಅನುದಾನ ನೀಡುತ್ತದೆ . ಮತ್ತು ಶಾಲೆಯ ಅಳಿವು ಉಳುವಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಈ ಶಾಲೆಯಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಬಡಾವಣೆ ಶಾಲೆ ಹೆಸರಂತೆ ತಾಲೂಕಿನಲ್ಲಿ ಮಾದರಿಯ ಶಾಲೆಯಾಗಿದೆ ಇಲ್ಲಿ ಮಕ್ಕಳಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಲಿಕೆಯನ್ನು ನೀಡುವಲ್ಲಿ ಶಿಕ್ಷಕರ ಕೆಲಸ ಶ್ಲಾಘನೀಯ ಎಂದು ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯನ್ನು ಶುರು ಮಾಡಲಿ ಕೊಡಲಾಗುವುದು ಎಂದು ಹೇಳಿದರು.ಪುರಸಭೆಯ ಅಧ್ಯಕ್ಷ ಬಾಲಚಂದ್ರ ಗೋಡ್ ಪಾಟೀಲ್ ಮಾತನಾಡಿ ವಿದೇಶಾಲೆಯಲ್ಲಿ ನಾನು ಒಂದರಿಂದ ನಾಲ್ಕು ತರಗತಿಯವರಿಗೆ ಶಿಕ್ಷಣ ಪಡೆದಿದ್ದು ಈ ಶಾಲೆಯು ಪಿಎಂ ಶ್ರೀ ಶಾಲೆಯಾಗಿ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ ಮತ್ತು ಈಗಾಗಲೇ ನಾನು ಒಂದು ಸ್ಮಾರ್ಟ್‌ ಕ್ಲಾಸ್ ಅನ್ನು ಕಟ್ಟಿಸಿ ಕೊಟ್ಟಿದ್ದು ಇನ್ನೂ ತಮಗೆ ಅವಶ್ಯಕತೆ ಇದ್ದರೆ ಇನ್ನೊಂದು ಸ್ಮಾರ್ಟ್‌ ಕ್ಲಾಸ್ ಕಟ್ಟಿಸಿಕೊಡುತ್ತೇನೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಮಾತನಾಡಿ ಶಾಸಕರ ಮಾದರಿ ಶಾಲೆಯು ಪಿಎಂ ಶ್ರೀ ಶಾಲೆಯಾಗಿ ಆಯ್ಕೆಯಾಗಿದ್ದು ಸ್ವಂತದ ವಿಷಯ ಸಂತೋಷದ ವಿಷಯ ಈಗಾಗಲೇ ತಾಲೂಕಿನಲ್ಲಿ ಮೊದಲು ಚಿಕ್ಕಬಾಸುರಿನ ಗ್ರಾಮದಲ್ಲಿ ಶಾಲೆಯಿದೆ ಎರಡನೇದಾಗಿ ಬ್ಯಾಡಿಗಿಯ ಬಡಾವಣೆ ಶಾಲೆಯು ಆಯ್ಕೆಯಾಗಿದೆ ಶಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಕನ ಶಿಕ್ಷಣವನ್ನು ನೀಡಿ ಅವರನ್ನು ಭವಿಷ್ಯದ ಬುನಾದಿಯನ್ನು ತುಂಬೋ ಕೆಲಸ ಮಾಡಬೇಕು ಶಿಕ್ಷಕರು ಶಾಲೆ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರ ಗೌಡ ಪಾಟೀಲ.ಉಪಾಧ್ಯಕ್ಷ ಸುಭಾಷ್ ಮಾಳಗಿ.ಅಬ್ದುಲ ಮುನಾಫ್ ಎರೇಸಿಮಿ.ಫಕ್ಕೀರಮ್ಮಾ ಛಲವಾದಿ.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ.ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಹೋಳೆಯಪ್ಪ ಗೋಳ.ದುರ್ಗೆಶ ಗೋಣೆಮ್ಮನವರ..ರವಿ ಪೂಜಾರ.ಯಮಕ್ಕನವಲ ಸರ್‌.ಮೋಹನಕುಮಾರ ಈ ಓಂ.ಸುಮಂಗಲಾ ರಾರಾವಿ.ಈರಣ್ಣ  ಬೂಧಿಹಾಳಮಠ.ನಜೀರ ಅಹ್ಮದ್ ಶೇಖ್‌.ಮಜೀದ ಮುಲ್ಲಾ.ಮಾತಂಗಮ್ಮ ಬುಳ್ಳಮ್ಮನವರ.ಮಹ್ಮದ ರಫೀಕ್ ಮುಲ್ಲಾ.ಅಶ್ವನಿ .ಆಶಾಬೆಗಂ ಕಾಟೇನಹಳ್ಳಿ. ಹಾಗೂ ರಾಜಶ್ರೀ ಸಜ್ಜೆಶ್ವರ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.