ಜಿಲ್ಲೆಯಲ್ಲಿ ಹೆಚ್ಚು ಬಿದಿರು ಬೆಳೆಸುವದು ನಮ್ಮ ಗುರಿ : ಸಚಿವ ಜಾರಕಿಹೊಳಿ

ಬೆಳಗಾವಿ, 1: ರೈತರಲ್ಲಿ ತಿಳುವಳಿಕೆ ಮೂಡಿಸಿ ಬಿದಿರು ಉತ್ಪಾದನೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಿ ಅದರ ಹೆಚ್ಚಿನ ಲಾಭಾಂಶವನ್ನು ಪಡೆಯುವುದಕ್ಕೆ ಅರಣ್ಯ ಇಲಾಖೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಜೈವಿಕ ಮತ್ತು ಪರಿಸರ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ಶನಿವಾರ (ಜೂ.1) ರಂದು ನಗರದ ಸುವರ್ಣ ವಿದಾನಸೌಧದಲ್ಲಿ ಆಯೋಜಿಸಲಾಗಿದ್ದ ಕನರ್ಾಟಕ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಬಿದಿರು ಅಭಿಯಾನ ಅವರುಗಳ ಸಹಯೋಗದಲ್ಲಿ ಬಿದಿರು ಬೆಳೆ, ಉತ್ಪನ್ನ ಮತ್ತು ಉದ್ಯಮ ಎಂಬ ವಿಚಾರ ಸಂಕಿರ್ಣ ಮತ್ತು ಕಾಯರ್ಾಗಾರ ಕಾರ್ಯಕ್ರಮವನ್ನು ಉದ್ಭಾಟಿಸಿ ಅವರು ಮಾತನಾಡಿದರು.

ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಿದಿರನ್ನು ಹೆಚ್ಚಾಗಿ ಬೆಳೆಯುವದನ್ನು ಗಮನಿಸಿದ್ದೆನೇ ಇದೇ ರೀತಿಯಲ್ಲಿ ಮುಂದುವರೆಸಲು ಪ್ರೋತ್ಸಾಹವನ್ನು ಸಕರ್ಾರ ನೀಡುತ್ತದೆ. ಬೇರೆ ಬೆಳೆಗೆ ಹೋಲಿಸಿದರೆ ಅದರಂತೆ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ನೀಡಲು ಸಹಾಯವಾಗಿದೆ ಎಂದರು.

ಆಯಾ ಭಾಗದಲ್ಲಿ ಯಾವ ತಳಿಯ ಬಿದಿರು ಬೆಳೆಯಲು ಅವಶ್ಯಕತೆ ಇದೇ ಎಂದು ತಿಳಿದು ಅಂತವರಿಗೆ ನಮ್ಮ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುತ್ತದೆ. ಬಿದಿರಿಂದ 15 ನೂರು ವಿವಿಧ ಉಪಯೋಗವಿದೆ ಅದರ ಲಾಭವನ್ನು ನಮ್ಮ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನರ್ಾಟಕ ರಾಜ್ಯ ಖನಿಜ ನಿಗಮ ನಿಯಮಿತ (ಮೈಸೂರು ಮಿನಿರಲ್ಸ್ ಲಿ.) ಅಧ್ಯಕ್ಷರು ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು ಬಿದಿರು ಮಾನವನಿಗೆ ಅಷ್ಟೇ ಅಲ್ಲದೆ ಪರಿಸರಕ್ಕೂ, ದನಕರುಗಳಿಗೂ ಔಷಧ ರೂಪದಲ್ಲಿ ಸಹಾಯವಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಬಿದಿರು ಕಸವೆಂದು ಕಾಣಲಾಗುತ್ತಿದೆ. ಈಗ ಬಿದಿರು ಎಲ್ಲರಿಗೂ ಅನುಕೂಲವಾಗುವ ಬೆಳೆಯಾಗಿದೆ ಹಾಗಾಗಿ ಅದನ್ನು ಉತ್ತಮ ರೀತಿಯಲ್ಲಿ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.

ಬಾಂಬು ಬೆಳೆ ಬೆಳೆಯುವದರಿಂದ ರೈತರಿಗೆ ಸಾಕಷ್ಟು ಲಾಭವಾಗುತ್ತದೆ. ಬಿದಿರು ವ್ಯವಸಾಯ ಮಾಡಲು ರೈತರಿಗೆ ಹಾಗೂ ಉದ್ಯೋಗ ಮಾಡಲು ಮೆದಾರ ಸಮಾಜಕ್ಕೆ ತುಂಬ ಉಪಯುಕ್ತವಾಗಿದೆ ಎಂದರು.

ಬಿದಿರು ಬೆಳೆಯುವ ರೈತರಿಗೆ ಮುಂಬರುವ ದಿನಗಳಲ್ಲಿ ಒಳ್ಳೆಯ ಲಾಭವಾಗಲಿ ಎಂದು ಹೇಳುತ್ತ ಬಿದಿರು ನಮ್ಮ ಜೀವನದಲ್ಲಿ ಏನೆಲ್ಲ ಉಪಯೋಗಗಕ್ಕೆ ಬರುತ್ತದೆ ಎಂದು ತಿಳಿಸಿದರು. 

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ ಶ್ರೀವಾಸ್ತವ ಅವರು ಎಲ್ಲ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಿದ್ದ ಬೆಳೆಗಳನ್ನು ಪ್ರೋತ್ಸಾಹಿಸಲು ಹಾಗೂ ಉದ್ಯಮವಾಗಿ ಬೆಳೆಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸಕರ್ಾರದ ಸಹಯೋಗದಲ್ಲಿ 2019 -20 ರ ಸಾಲಿನಲ್ಲಿ ಈ ಯೋಜನೆಗೆ 25 ಕೋಟಿ ರೂ.ಗಳನ್ನು ಮಿಸಲಾಗಿದೆ. ರೈತರಿಗೆ ತಮ್ಮ ಸ್ವಂತ ಹೊಲಗಳಲ್ಲಿ ಬಿದಿರು ಬೆಳೆಯುವದಕ್ಕೆ 50 ಸಾವಿರ ಸಹಾಯದನ ನೀಡಲಾಗುತ್ತದೆ ಎಂದರು.

ಬೆಳಗಾವಿ ವಿಭಾಗದ ಉಪಸಂರಕ್ಷಣಾಧಿಕಾರಿಗಳಾದ ಎಂ.ವಿ. ಅಮರಾಥ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಹೆಚ್.ಜಿ. ರಾಘವೇಂದ್ರ ಸುಹಾಸ, ಹೊಸೂರು ಗ್ರೋಮೋರದ ಬಯೋಟೆಕ್ ಲಿಮಿಟೆಡ್ನ ನಿದರ್ೇಶಕರಾದ ಡಾ.ಎನ್ ಭಾರತಿ, ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವಾಸುದೇವ, ಬೆಂಗಳೂರಿನ ಎಂ.ಎಸ್.ಸಿ ಕೀಟ ಶಾಸ್ತ್ರ ಜಿ.ಎನ್ ಜಯಚಂದ್ರ, ಗೋಕಾಕ ಘಟಪ್ರಭಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ದೇವರಾಜ  ಮತ್ತು  ರೈತರು, ಬೆಳಗಾವಿ, ವಿಜಾಪೂರ, ಬಾಗಲಕೋಟ ಎಲ್ಲ ಅರಣ್ಯಾಧಿಕಾರಿಗಳು ಹಾಗೂ ರೈತರು ಕಾಯರ್ಾಗಾರದಲ್ಲಿ ಉಪಸ್ಥಿತರಿದ್ದರು.