ನಮ್ಮ ಕುಟುಂಬಗಳು ಶ್ರೇಷ್ಠ ವ್ಯಕ್ತಿಗಳ ನಿರ್ಮಾಣದ ಕೇಂದ್ರಗಳಾಗಬೇಕಾಗಿದೆ : ಗೊಲ್ಲರ

Our families need to be the centers of building great personalities : Gollara

ನಮ್ಮ ಕುಟುಂಬಗಳು ಶ್ರೇಷ್ಠ ವ್ಯಕ್ತಿಗಳ ನಿರ್ಮಾಣದ ಕೇಂದ್ರಗಳಾಗಬೇಕಾಗಿದೆ : ಗೊಲ್ಲರ 

ಹಾವೇರಿ  13: ಇಂದು ಆಧುನಿಕತೆಯ ಓಟದಲ್ಲಿ ಓಡುತ್ತಿರುವ ಸಮಾಜದಲ್ಲಿ ಕುಟುಂಬ ವ್ಯವಸ್ಥೆಯ ಪಾತ್ರವೂ ದುರ್ಬಲವಾಗುತ್ತಿರುವುದರಿಂದ ಸಮಾಜ ಕ್ಷೊಭೆಗೆ ಒಳಗಾಗಿದ್ದು, ಇಂತಹ ಘತುಕ ಪರಿಸ್ಥಿತಿಯನ್ನು ಬದಲಾಯಿಸಬೇಕಾದರೆ ನಮ್ಮ ಕುಟುಂಬಗಳು ಶ್ರೇಷ್ಠ ವ್ಯಕ್ತಿಗಳ ನಿರ್ಮಾಣದ ಕೇಂದ್ರಗಳಾಗಬೇಕಾಗಿದೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. 

     ತಾಲೂಕಿನ ಅಗಡಿ ಗ್ರಾಮದ ಪ್ರಭುಸ್ವಾಮಿಮಠದಲ್ಲಿ  ಲಿಂ.ರುದ್ರಮುನಿ ಮಹಾ ಶಿವಯೋಗಿಗಳವರ 65ನೇ, ಸಂಗನಬಸವ ಮಹಾಶಿವಯೋಗಿಗಳ ಹಾಗೂ ಶ್ರೀ ಗುರು ಸಿದ್ದ ಮಹಾಸ್ವಾಮಿಗಳವರ ಪಟ್ಟಾಧಿಕಾರದ ಸವಿನೆನಪಿನ ಉಭಯ ಪೂಜ್ಯದ್ವಯರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏರಿ​‍್ಡಸಿದ್ದ ಧರ್ಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

 ಕೌಟುಂಬಿಕ ಸಂಬಂಧಗಳು ನಾಗರೀಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿವೆ, ಕೌಟುಂಬಿಕ ವ್ಯವಸ್ಥೆ ಮತ್ತು ಸಂಸ್ಕಾರದಿಂದ ಮಾತ್ರ ಉತ್ತಮ  ಸಮಾಜ ನಿರ್ಮಾಣ ಸಾಧ್ಯ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ, ವ್ಯಕ್ತಿಯಲ್ಲಿ ಉನ್ನತೋನ್ನತ ಭಾವನೆಗಳನ್ನು, ಮಾನವೀಯ ಮೌಲ್ಯಗಳನ್ನು ಅಚ್ಚೊತ್ತಬೇಕಾದ ವ್ಯಕ್ತಿತ್ವ ನಿರ್ಮಾದ ಟಂಕಸಾಲೆಯಾದ ಕೌಟುಂಬಿಕ ಬದುಕಿನಲ್ಲಿ ಏರುಪೇರಾಗಿದೆ ಎಂದು ಹನುಮಂತಗೌಡ ತಿಳಿಸಿದರು. 

 ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಾಧು-ಸಂತರ ದಾರ್ಶನಿಕರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ವಿದೇಶಿಗರಲ್ಲಿ ಲಿಂಗಧಾರಣೆ ಮನೋಭಾವ ಬೆಳೆಯುತ್ತಿದೆ. ನಮ್ಮ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದನ್ನು ಬಿಟ್ಟು ಇಷ್ಟಲಿಂಗದ  ಬಗ್ಗೆ ಹೆತ್ತವರು ತಿಳಿಸಬೇಕು ಎಂದರು. ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು. ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು. ಪ್ರತ್ಯುಪಕಾರದ ಅಪೇಕ್ಷೆ ಇಲ್ಲದೆ ಕೊಡುಗೆಯೇ ದಾನ, ಧನದ ಸಾರ್ಥಕತೆ  ದಾನ ನೀಡುವುದರಿಂದ ಸಾಧ್ಯ ಎಂದು ನುಡಿದರು. 

 ಸತೀಶ್ ಈಳಗೇರ ಮಾತನಾಡಿ ವಿದ್ಯೆ ಜ್ಞಾನ ನೀಡುತ್ತದೆ. ಸಂಸ್ಕಾರ ಅರ್ಹತೆಯನ್ನು ನೀಡುತ್ತದೆ. ಮಕ್ಕಳಿಗೆ ಸಂಸ್ಕಾರ ನೀಡುವುದು ತಂದೆ-ತಾಯಿಯರ ಕರ್ತವ್ಯ ಎಂದರು. 

 ದಾಸೋಹ ಸೇವಾರ್ಥಿ ಶಿವಪುತ್ರ​‍್ಪ ನೀಲಪ್ಪನವರ,ಗಂಗಾಧರ ಪಾಟೀಲ, ರಾಣೇಬೆನ್ನೂರಿನ ಕಿರಣ ಮಲ್ಲಿಕಾರ್ಜುನ ಅಂಗಡಿ ದಂಪತಿಗಳನ್ನು ಸ್ವಾಮೀಜಿ ಗೌರವಿಸಿದರು. ನಂಜುಂಡೇಶ್ವರ ಶಿವಾಚಾರ್ಯರು, ಗ್ರಾಮ ಪಂಚಾಯತಿ ಸದಸ್ಯರಾದ ಸವಿತಾ ಪಾಟೀಲ,ಮಂಜಕ್ಕ ಕಾಟೇನಹಳ್ಳಿ,ಶಿವಬಸಪ್ಪ ಬಸೇಗೆಣ್ಣಿ,ಈಶಪ್ಪ ಭೀಮಕ್ಕನವರ, ಹಾಗೂ ನಾಗರಾಜ,ಶಂಬಣ್ಣ ಬಸೇಗೆಣ್ಣಿ,ಪ್ರಬಣ್ಣ ಪಟ್ಟಣಶೆಟ್ಟಿ ಮತ್ತಿತರರು ಇದ್ದರು. 

  ಸಂಗನ ಬಸವ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ವಚನ ನೃತ್ಯ ಪ್ರದರ್ಶನ ಹಾಗೂ ಸಿರಿಗನ್ನಡ ಕಲಾತಂಡದವರ ಜಾನಪದ ಗೀತೆಗಳು ಜನಮನ ರಂಜಿಸಿದವು, ಗುರುಮಾತೆ ಲಕ್ಷ್ಮೀ ಅಸುಂಡಿ ಸ್ವಾಗತಿಸಿದರು. ಮಮತಾ ಮರಿಲಿಂಗಣ್ಣನವರ ನಿರೂಪಿಸಿದರು. ಅಶ್ವಿನಿ ಹಿರೇಮಠ ವಂದಿಸಿದರು.