ಪ್ರಕೃತಿಯ ಪ್ರತಿಬಿಂಬ ನಮ್ಮ ಹುಲಿಕೆರೆ : ಸ್ವಚ್ಛತಾ ಅಭಿಯಾನ

Our Hulikere is a reflection of nature: Cleanliness campaign

ಪ್ರಕೃತಿಯ ಪ್ರತಿಬಿಂಬ ನಮ್ಮ ಹುಲಿಕೆರೆ : ಸ್ವಚ್ಛತಾ ಅಭಿಯಾನ  

ಕೊಪ್ಪಳ 11 : ಕೊಪ್ಪಳ ನಗರದ ಹತ್ತನೇ ವಾರ್ಡಿನಲ್ಲಿರುವ ಹುಲಿಕೆರೆ ಪಾರ್ಕ್‌ ಈ ಮೊದಲು ತುಂಬಾ ಸುಸ್ಥಿತಿಯಲ್ಲಿತ್ತು, ಆದರೆ ಈಗ ಹುಲಿಕೆರೆ ಪಾರ್ಕ ಪರಿಸರ ಮಾಲಿನ್ಯಕ್ಕೊಳಗಾಗಿದ್ದು, ಪ್ಲಾಸ್ಟಿಕ್ ಹಾಗೂ ಇತರೆ ಘನ ತ್ಯಾಜ್ಯಗಳ, ಆಗರವಾಗಿತ್ತು. ಸದರಿ ಪಾರ್ಕ್‌ ನ,ಅಭಿವೃದ್ಧಿಯ ಕಾರ್ಯಕ್ಕಾಗಿ ಹಾಗೂ ಸುಂದರ ಪರಿಸರ ನಿರ್ಮಾಣದ ಉದ್ದೇಶದಿಂದ ಹುಲಿಕೆರೆ ಪಾರ್ಕಿನ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ವಾರ್ಡಿನ ಹಾಲಿ ಸದಸ್ಯರಾದ ಮಹೇಂದ್ರ ಚೋಪ್ರಾ ತಿಳಿಸಿದ್ದಾರೆ,ಸದರಿ ಸ್ವಚ್ಛತಾ ಅಭಿಯಾನಕ್ಕೆ ಪ್ರಗತಿ ಯುವ ಗುಂಪು ಕೊಪ್ಪಳ, ನಗರಸಭೆ ಕೊಪ್ಪಳ ಹಾಗೂ ಮಹಿಳಾ ಕಾಲೇಜಿನ ಯುವತಿಯರು ಭಾಗವಹಿಸಿದ್ದರುಎಂದು ವಿವರಿಸಿದ್ದರು,ಪ್ರಕೃತಿಯ ಪ್ರತಿಬಿಂಬ ಹುಲಿಕೆರೆ ಪಾರ್ಕ್‌ ಎಂಬ ಅಭಿಯಾನದಡಿ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ 8/3 2025 ನೇ ದಿನದಂದು ಪಾರ್ಕ್‌ ನ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. 

 ಈ ಸ್ವಚ್ಛತಾ ಅಭಿಯಾನದಲ್ಲಿ ಪ್ರಗತಿ ಯುವ ಗುಂಪಿನ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನಗರಸಭೆಯ ಸುಮಾರು 50ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರು ಹಾಗೂ ನಗರದ ಸಮಾನ ಮನಸ್ಕ ಆಸಕ್ತ ಜನರೆಲ್ಲ ಸೇರಿ ಸ್ವಚ್ಛತೆಯ ಅಭಿಯಾನವನ್ನು ಕೈಗೊಂಡು ಪರಿಸರವನ್ನ ಉಳಿಸುವ ಮತ್ತು ಮುಂದಿನ ಪೀಳಿಗೆಗೆ ತನ್ಮೂಲಕ ಪರಿಸರ ಸ್ವಚ್ಛತೆಯ ಅರಿವು ಮೂಡಿಸುವ ಹಾಗೂ ಕೊಪ್ಪಳ ನಗರವನ್ನು ಸ್ವಚ್ಛ ಸುಂದರ ಹಾಗೂ ಹಸಿರು ವಾತಾವರಣವನ್ನು ನಿರ್ಮಾಣ ಮಾಡಲು ಮೊದಲ ಹಂತದಲ್ಲಿ ಹುಲಿಕೆರೆ ಪಾರ್ಕಿನ ಬಹುತೇಕ ಶಿಥಿಲಾವತ್ಸೆಯಲಿದ್ದ ಹಾಗೂ ಹಾಳಾಗಿದ್ದ ಎಲ್ಲಾ ಜಾಗಗಳನ್ನು ಸ್ವಚ್ಛತೆ ಮಾಡಿ ಅದರ ಸುಂದರತೆಯನ್ನು ಹೆಚ್ಚಿಸಲು ಕಾರ್ಯ ಕೈಗೊಳ್ಳಲಾಯಿತು. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಗರಸಭೆಯ ಮಾಜಿ ಅಧ್ಯಕ ರಾದ ಮಹೇಂದ್ರ ಚೋಪ್ರಾರವರು ಮಾತನಾಡುತ್ತ ಈ ಪ್ರಕೃತಿ ಸುಂದರಗೊಳಿಸುವುದು, 

ಇದನ್ನು ಕಾಯ್ದುಕೊಳ್ಳುವುದು ಹಾಗೂ ಹಸಿರಾಗಿಟ್ಟುಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ, ಮುಂದಿನ ಪೀಳಿಗೆಯ ಜನರ ಏಳಿಗೆಯನ್ನ ನಿರ್ಮಾಣ ಮಾಡಲು ನಾವು ಕೈಗೊಳ್ಳುವ ಮೊದಲ ಹೆಜ್ಜೆ ಅದಾ ಗಬೇಕು. ಜೊತೆಗೆ ಈ ರೀತಿಯ ಕಾರ್ಯ ಚಟುವಟಿಕೆಗಳು ನಮ್ಮೆಲ್ಲರ ಸ್ವಚ್ಛಂದ ಬದುಕಿಗೆ ದಾರಿಯಾಗಬೇಕು ಎನ್ನುವ ಅಂಶಗಳನ್ನು ಮಾತನಾಡಿದರು.  ಈ ಸುಂದರ ಪ್ರಕೃತಿ ದೇವರು ನಮಗಾಗಿ ನೀಡಿದ ದೇಣಿಗೆ,ಅದನ್ನು ಕಾಪಾಡುವದು ನಮ್ಮ ಜವಾಬ್ದಾರಿ ಹಾಗೂ ಈ ಸುಂದರ ಪ್ರಕೃತಿಯನ್ನು ನಾವು ಮುಂದಿನ ಪೀಳಗೆಗಾಗಿ ಉಳಿಸುವದು  ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಬೇಕು, ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಬೇಕು ಹಾಗೂ ಸ್ವಚ್ಛ ಸುಂದರ ಹಸಿರು ಯುಕ್ತ ನಗರವನ್ನು ನಿರ್ಮಾಣ ಮಾಡಬೇಕು ಎಂದರು. ನಗರದ ವ್ಯಾಪಾರಸ್ಥರಾದ ಮಂಜುನಾಥ್ ಕುದುರಿಮೋತಿಯವರು ಮಾತನಾಡುತ್ತಾ ನಾವೆಲ್ಲರೂ ಸುಂದರ ನಗರ ಕಟ್ಟುವ ಹಾಗೂ ನಮ್ಮ ಸುತ್ತಲಿನ ಪ್ರಾಕೃತಿಕ ಸಂಪತ್ತನ್ನ ಕಾಯ್ದುಕೊಳ್ಳುವ ಹಾಗೂ ನಗರದ ಸೌಂದರ್ಯವನ್ನು ಹೆಚ್ಚಿಸುವ ಈ ರೀತಿಯ ಚಟುವಟಿಕೆಗಳನ್ನ ನಿರಂತರಗೊಳಿಸಬೇಕು ಮತ್ತು ನಾವೆಲ್ಲರೂ ಸೇರಿ ಇದರ ಜವಾಬ್ದಾರಿ ಹೊತ್ತು ಪ್ರಾಕೃತಿಕ ಸಂಪತ್ತಿನ ಉಳಿವಿಗಾಗಿ ಹಾಗೂ ನಮ್ಮೆಲ್ಲರ ಬದುಕಿಗೆ ಸ್ವಚ್ಛ ಗಾಳಿ, ನೀರು ಹಾಗೂ ಸುಂದರ ಪರಿಸರ ನಿರ್ಮಾಣ ಮಾಡಲು ನಾವೆಲ್ಲರೂ ಪಣತೊಡಬೇಕು ಎಂದರು. 

 ಜೊತೆಗೆ ಕೊಪ್ಪಳ ನಗರವು ಒಂದು ಸುಂದರ ಕೋಟೆಯ ನಗರವಾಗಿದ್ದು ಈ ನಗರದ ಸುತ್ತ ಹುಲಿಕೆರೆ ತುಂಬಾ ದೊಡ್ಡ ಕೆರೆಯಾಗಿದ್ದು ಈ ಕೆರೆಯ ಅಭಿವೃದ್ಧಿ ಮಾಡಿದರೆ ಕೆರೆಯ ಸುತ್ತಲ ಪರಿಸರದಲ್ಲಿ ಜನರ ಓಡಾಟಕ್ಕೆ ಮತ್ತು ಉದ್ಯಾನವನವನ್ನು ಪುನರ್ ನಿರ್ಮಾಣ ಮಾಡಿ ಆ ಉದ್ಯಾನವನವನ್ನು ಇಲ್ಲಿಯ ಜನರ ವಿಶ್ರಾಂತಿ ಧಾಮವನ್ನಾಗಿ ನಿರ್ಮಾಣ ಮಾಡಲು ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ನಾವೆಲ್ಲರೂ ಸೇರಿ ಮುಂದಾಗಬೇಕು ಎಂದರು.ಪ್ರಕೃತಿಯ ಪ್ರತಿಬಿಂಬ ನಮ್ಮ ಹುಲಿಕೆರೆ ಪಾರ್ಕ್‌ ಎಂಬ ಅಭಿಯಾನದಡಿ ವಾರ್ಡಿನ ಸದಸ್ಯರು ಹಾಗೂ ನಗರಸಭೆಯ ಮಾಜಿ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ ರವರ ಮಾರ್ಗದರ್ಶನ ಹಾಗೂ ಸಹಕಾರ ದೊಂದಿಗೆ ಸುಮಾರು 150ಕ್ಕೂ ಹೆಚ್ಚು ಸಮಾನ ಮನಸ್ಕ ಯುವಕರು, ಮಹಿಳಾ ಕಾಲೇಜಿನ ಯುವತಿಯರೂ ಹಾಗೂ ನಗರಸಭೆಯ ಸಿಬ್ಬಂದಿಯವರು  ಪಾಲ್ಗೊಂಡು, ಹುಲಿಕೆರೆ ಉದ್ಯಾನವನವನ್ನು ಹಾಗೂ ಕೆರೆಯ ಸುತ್ತಲ ಕಸ ಇತ್ಯಾದಿ ತ್ಯಾಜ್ಯಗಳನ್ನ ಹೊರ ತೆಗೆದು ಅವುಗಳನ್ನ ವಿಲೇವಾರಿ ಮಾಡುವ ಕೈಂಕರ್ಯದಲ್ಲಿ ಎಲ್ಲರೂ ತೊಡಗಿ ಯಶಸ್ವಿ ಸ್ವಚ್ಛತಾ ಅಭಿಯಾನವನ್ನು ನಡೆಸಿದರು.ಹುಲಿಕೆರೆ ಉದ್ಯಾನವನದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಯುವ ಗುಂಪಿನ ಸದಸ್ಯರಿಗೆ ಮಂಜುನಾಥ್ ಕುದುರಿಮೋತಿಯವರು ಉಪಹಾರ ವ್ಯವಸ್ಥೆಯನ್ನ ಮಾಡಿದರು. ಅಭಿಯಾನದಲ್ಲಿ ದೇವರಾಜ ಕೋಡಬಾಳ, ಗವಿಸಿದ್ದಪ್ಪ, ಶೋಭಾ, ಚಿಕ್ಕವೀರೇಶ್, ಜ್ಯೋತಿ, ಲಿಂಗರಾಜ, ಶೋಭನಾ, ಅನ್ನಪೂರ್ಣ, ಯಲ್ಲಾಲಿಂಗ ಹಾಗೂ  ಶೇಖರ್   ಇವರುಗಳು ಪಾಲ್ಗೊಂಡಿದ್ದರು. ಉದ್ಯಾನವನದ ಸ್ವಚ್ಛತೆಯನ್ನ ಕಾಯ್ದುಕೊಳ್ಳುವ ಹಾಗೂ ಮುಂದಿನ ಕಾರ್ಯ ಯೋಜನೆಯನ್ನು ರೂಪಿಸಿ  ತನ್ಮೂಲಕ, ಉದ್ಯಾನವನವನ್ನು     ನಾಗರಿಕರಿಗೆ ಮುಕ್ತಗೊಳಿಸುವ ಯೋಜನೆಗಳೊಂದಿಗೆ ಚಾಲನೆ ನೀಡಲಾಯಿತು.