ಲಾಸ್ ಏಂಜಲೀಸ್, ಏ 24 (ಕ್ಸಿನ್ಹುವಾ) ಆಸ್ಕರ್ ಎಂದೇ ಖ್ಯಾತವಾಗಿದ್ದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ರ್ಸ ಅಂಡ್ ಸೈನ್ಸನ್ ನ ವಿದೇಶಿ ಚಿತ್ರ ವಿಭಾಗವನ್ನು ಇಂಟರ್ ನ್ಯಾಷನಲ್ ಫೀಚರ್ ಫಿಲ್ಮಂ ಎಂದು ಮರುನಾಮಕರಣ ಮಾಡಲಾಗಿದೆಜಾಗತಿಕ ಚಿತ್ರನಿಮರ್ಾಣದ ಸಮುದಾಯದಲ್ಲಿ 'ಫಾರಿನ್' ಎಂಬ ಪದ ಪ್ರಚಲಿತದಲ್ಲಿ ಇಲ್ಲದಿರುವುದನ್ನು ಮನಗಂಡು ಈ ಹೆಸರು ಬದಲಾವಣೆಗೆ ಮುಂದಾಗಲಾಗಿದೆ ಎಂದು ಅಕಾಡೆಮಿಯ ಮುಖ್ಯಸ್ಥರು ತಿಳಿಸಿದ್ದಾರೆ. ಈ ಹೆಸರು ಸಕರಾತ್ಮಕತೆ ಉತ್ತೇಜಸುತ್ತದೆ ಮತ್ತು ಎಲ್ಲವನ್ನೂ ಒಳಗೊಳ್ಳುವುದನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಇಂಟರ್ನ್ಯಾಷನಲ್ ಫಿಲಂ ಫೀಚರ್ ಫಿಲಂ ಎಂಬುದು ಈ ವಿಭಾಗಕ್ಕೆ ಸೂಕ್ತವೆಂದೆನಿಸಿ ಮರುನಾಮಕರಣ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.ಈ ವಿಭಾದ ಹೆಸರನ್ನು ಮಾತ್ರ ಬದಲಿಸಲಾಗಿದ್ದು, ಅರ್ಹತೆಗಳಾಗಲೀ, ಆಯ್ಕೆ ವಿಧಾನಗಳಾಗಲೀ, ಯಾವುದೇ ನಿಯಮಗಳು ಬದಲಾವಣೆಯಾಗಿಲ್ಲ ಎಂದು ಅಕಾಡೆಮಿ ತಿಳಿಸಿದೆ.
ಎನಿಮೇಟೆಡ್ ಮತ್ತು ಡಾಕ್ಯುಮೆಂಟರಿ ಫೀಚರ್ ಚಿತ್ರಗಳು ಈ ವಿಭಾಗದಲ್ಲಿ ಸ್ಪರ್ಧಿಸ ಬಹುದಾಗಿದೆ. ಪುರಸ್ಕಾರಕ್ಕೆ ಒಂಭತ್ತು ಚಿತ್ರಗಳ ಆಯ್ಕೆ ಪಟ್ಟಿ ಇರುತ್ತಿತ್ತು. ಈ ವರ್ಷ ಇದನ್ನು ಹತ್ತಕ್ಕೆ ವಿಸ್ತರಿಸಲಾಗಿದೆ.
92ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2020ರ ಫೆಬ್ರವರಿ 9 ರಂದು ಕ್ಯಾಲಿಫೋನರ್ಿಯಾದಲ್ಲಿ ಹಾಲಿವುಡ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಲಿದೆ.