ಲೋಕದರ್ಶನ ವರದಿ
ಕೊಪ್ಪಳ 14: ಹಲವು ಸಾಮಾಜಿಕ ಉದ್ದೇಶ ಹಾಗೂ ಅಭಿವೃದ್ಧಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಮೊದಲು ಬಲವೃದ್ಧಿಯೊಂದಿಗೆ ಸಂಘಟಿತ ಧ್ವನಿಯಾಗಿ ಕೆಲಸ ಮಾಡಿದರೆ ಯಶಸ್ಸು ಪಡೆದುಕೊಳ್ಳಲು ಸಾಧ್ಯವೆಂದು ಕನರ್ಾಟಕ ಫೇವಾರ್ಡನ ರಾಜ್ಯಾಧ್ಯಕ್ಷರಾದ ಆಂಜನೇಯ ರೆಡ್ಡಿ ಹೇಳಿದರು.
ನಗರದ ಕೃಷಿ ವಿಸ್ತಣರ್ಾ ಕೇಂದ್ರದ ಸಭಾ ಭವನದಲ್ಲಿ ಜಿಲ್ಲೆಯ ಎನ್.ಜಿ.ಓ.ಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಫೇವಾರ್ಡ ಕನರ್ಾಟಕ, ದೃಷ್ಠಿಕೋನ 'ದುರ್ಬಲ ವರ್ಗದ ಸಾಮಾಜಿಕ ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಧ್ವನಿ' ಕುರಿತ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಡಿಮೆ ಫಲ ಪಡೆದು ದುಡಿಯುವ ಕ್ಷೇತ್ರವೆಂದರೆ ಸ್ವಯಂಸೇವಾ ಸಂಸ್ಥೆಗಳದ್ದು, ಸೇವಾ ಕ್ಷೇತ್ರಕ್ಕಿಂತ ವ್ಯವಹಾರಿಕ ಕ್ಷೇತ್ರವೇ ಇಂದು ಅದು ಎಲ್ಲಡೆ ತನ್ನ ಕರಾಳಚಾಯೇನ್ನೆ ಬಿರಿದೆ, ಇದರಿಂದ ಸೇವಾ ಕ್ಷೇತ್ರ ದೃಷ್ಠಿ ಕಡಿಮೆಯಾಗಿ, ಪ್ರಾಮಾಣಿಕತೆ ಕಾಳಜಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದರು.
ಫೇವಾರ್ಡ ಕನರ್ಾಟಕದ ಪ್ರಧಾನ ಕಾರ್ಯದಶರ್ಿ ಮಹಾಂತೇಶ ಅಗಸಿಮುಂದಿನ, ಕಲಬುಗರ್ಿ ವಿಭಾಗೀಯ ಅಧ್ಯಕ್ಷರಾದ ಸೂಗೂರಯ್ಯಸ್ವಾಮಿ ಮಾತನಾಡಿ ಎನ್.ಜಿ.ಓ.ಗಳು ನೋಂದಣೆಯಾಗುವುದು ಮುಖ್ಯವಲ್ಲ, ಅವು ತಮ್ಮ ಕಾರ್ಯ, ಉದ್ದೇಶ ಮತ್ತು ಸಫಲತೆ ನಿಧರ್ಿಷ್ಟ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು, ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವುದೇ ನಿಜವಾದ ದೇಶಸೇವೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಯರ್ಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಫೇವಾರ್ಡ ಅಧ್ಯಕ್ಷ ವ್ಹಿ.ಚಕ್ರಪಾಣಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಫೇವಾರ್ಡ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 25ಕ್ಕೂ ಹೆಚ್ಚು ಸ್ವಯಂ ಸೇಸಂಸ್ಥೆಗಳು ಕಾರ್ಯಕ್ಷೇತ್ರದಲ್ಲಿ ಗುರಿ ಸಾಧಿಸಲು ಯೋಜನೆಯನ್ನು ಹಾಕಿಕೊಂಡಿದೆ ಎಂದ ಅವರು ಎನ್.ಜಿ.ಓ.ಗಳಲ್ಲಿ ಪ್ರಮುಖವಾಗಿ ದಾಖಲಾತಿಗಳು ಮತ್ತು ಚಟುವಟಿಕೆಗಳನ್ನು ಆಧಾರಿಸಿದೆ ಎಂದು ತಿಳಿಸಿದರು.
ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ, ಎನ್.ಜಿ.ಓ.ಗಳ ದಾಖಲಾತಿ ವೃದ್ಧಿಪಡಿಸಲು ಮಹಿಳಾ ಸಬಲೀಕರಣ ಡಿಜಿಟಲ್ ಮೀಡೀಯ ಅಭಿವೃದ್ಧಿ ಹಾಗೂ ಮಾನವ ಸಾಗಾಣಿಕೆ ತಡೆಗಟ್ಟುವುದರ ಕುರಿತು ಹಾಗೂ ಸಬಲೀಕರಣ ಮತ್ತು ಮುಂದಿರುವ ಸವಾಲ್ಗಳ ಬಗ್ಗೆ ಚಚರ್ಿಸಲಾಯಿತು. ವೇದಿಕೆಯಲ್ಲಿ ಮಹಿಳಾ ಪ್ರತಿನಿಧಿ ಭೂವನೇಶ್ವರಿ ಉಪಸ್ಥಿತರಿದ್ದರು, ಕಾಯರ್ಾಗಾರದಲ್ಲಿ ಜಿಲ್ಲೆಯ 25ಕ್ಕೂ ಹೆಚ್ಚು ಎನ್.ಜಿ.ಓ.ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮೊದಲಿಗೆ ಪುಟ್ಟಯ್ಯಸ್ವಾಮಿ ಪ್ರಾಥರ್ಿಸಿದರು, ಪ್ರಾಸ್ತವಿಕವಾಗಿ ಆನಂಧ ಹಳ್ಳಿಗುಡಿ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಶಿವಯ್ಯ ಸ್ವಾಮಿ ನವಲಿ, ಕೊನೆಗೆ ವಂದನಾರ್ಪಣೆಯನ್ನು ಶರಣಪ್ಪ ಚಿಕ್ಕಮ್ಯಾಗೇರಿ, ಮಾಡಿದರು.