ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕ ಆಯೋಜಿಸಿದ್ದ, ವರಕವಿ ದ.ರಾ. ಬೇಂದ್ರೆ ಜನ್ಮದಿನೋತ್ಸವ
ರಾಣೇಬೆನ್ನೂರು 04 : ಕವಿಯಾಗಬೇಕಾದರೆ ಮೊದಲು ಸಾಮಾಜಿಕ ಪ್ರಜ್ಞೆ ಅತ್ಯವಶ್ಯಕ. ವರ್ತಮಾನದ ಬೇಗುದಿಗಳಿಗೆ ಮುಲಾಮು ಆಗುವಂತಹ ಕವಿತೆಗಳನ್ನು ರಚಿಸಬೇಕಾದ ಇಂದಿನ ಅಗತ್ಯವಿದೆ ಎಂದು ಕವಿ ಚನ್ನಬಸಪ್ಪ ನಾಡರ ಹೇಳಿದರು. ಅವರು ತಾಲೂಕಿನ ಮೇಡ್ಲೆರಿ ಗ್ರಾಮದ ಸರಕಾರಿ ಕನ್ನಡ ಮಾದರಿ ಕೇಂದ್ರ ಶಾಲೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕ ಆಯೋಜಿಸಿದ್ದ, ವರಕವಿ ದ.ರಾ. ಬೇಂದ್ರೆ ಜನ್ಮದಿನೋತ್ಸವದ ನಿಮಿತ್ತ ಏರಿ್ಡಸಲಾಗಿದ್ದ, ಮಕ್ಕಳ ಕವಿ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಇಂದು ನಡೆಯುತ್ತಿರುವ ವಿವಿಧ ಧೋರಣೆಗಳ ಕುರಿತಂತೆ ತಮ್ಮ ಕಾವ್ಯದ ಮೂಲಕ ಜನಜಾಗೃತಿಗೊಳಿಸುವ ಗಟ್ಟಿತನ ಕಾವ್ಯದಲ್ಲಿ ಬರಬೇಕಾಗಿದೆ. ಸಮಾಜಮುಖಿ ಕವನಗಳು ರಚನೆಯಾದರೆ ಜನರ ಮನ ಮುಟ್ಟುವಲ್ಲಿ ಕವಿ ಯಶಸ್ವಿ ಕಾಣುತ್ತಾನೆ ಎಂದರು. ಕಾವ್ಯ ಸೂಪ್ತ ಮನಸ್ಸಿನಿಂದ, ಶಬ್ದಗಳು, ಶಬ್ದದ ಆಳ ಮತ್ತು ಅರ್ಥ ರೂಪಕ, ಪ್ರತಿಮೆಗಳು ಪ್ರಾಸ ಅದಕ್ಕೆ ಶೈಲಿ ಇರಬೇಕಾಗುತ್ತದೆ. ಎಂದರು ಮಕ್ಕಳ ಕವಿಗೋಷ್ಠಿ ಉದ್ಘಾಟಿಸಿದ ತಾಲೂಕ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಮುರಡಪ್ಪನವರ ಅವರು, ಮಕ್ಕಳಲ್ಲಿ ಅಪಾರವಾದ ಪ್ರತಿಭೆಗಳಿವೆ, ಕಾವ್ಯ ರಚನೆಗೆ ಸೂಕ್ಷ್ಮತೆ ಮತ್ತು ಪರಸ್ಪರ ಚಿಂತನಾಶಕ್ತಿ ಇರಬೇಕು. ಇದರಿಂದ ಭವಿಷ್ಯದಲ್ಲಿ ಗಟ್ಟಿತನದ ಕಾವ್ಯವನ್ನು ರಚಿಸುವ ಗುಣ ಧರ್ಮಗಳನ್ನು ಅಳವಡಿಸಿಕೊಂಡು ಬೆಳೆಯಲು ಸಾಧ್ಯವಾಗಲಿದೆ ಎಂದರು. ಮಕ್ಕಳಲ್ಲಿ ಕಾವ್ಯತ್ವದ ಮಾತುಗಳು ಸದಾಕಾಲ ಆಗಾಗ ಪ್ರಾಸದ ರೂಪದಲ್ಲಿ ಕಾಣಬಹುದಾಗಿದೆ ಅಂತಹ ಮಕ್ಕಳನ್ನು ಗುರುತಿಸಿ, ಕಾವ್ಯ ಪ್ರಪಂಚದ ಮತ್ತು ವಿದ್ಯಮಾನಗಳ ಅರಿವು ಮೂಡಿಸಬೇಕು ಮತ್ತು ಹಿರಿಯ ಕವಿಗಳ, ಸಾಹಿತಿಗಳ ಕಾವ್ಯಗಳನ್ನು ಓದಬೇಕು. ಮತ್ತು ಶಿಕ್ಷಕರು ಅಂತಹ ಕಾರ್ಯಕ್ಕೆ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು. ಪ್ರಧಾನ ಗುರು ನಾಗೇಶ್ ಚಿನ್ನಿಕಟ್ಟಿ ಅವರು ಕವಿ ಗೋಷ್ಟಿ ಕುರಿತು ಆಶಯ ನುಡಿಯಾಡಿದರು.ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ಡೊಂಬರ, ಮಂಜುಳಾ ಹಿರೇಬಿದರಿ, ರತ್ನಮ್ಮ ಕಂದಾಟಿ, ಎಂ. ಮಹೇಶ್ವರ್ಪ, ರಾಘವೇಂದ್ರ ದೇವರಮನಿ, ಎಚ್. ಎಚ್.ಬಿಂಗೇರ, ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ ಮತ್ತಿತರರು ಉಪಸ್ಥಿತರಿದ್ದರು. ಸವಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರಕಾಶ್ ಕೊಕ್ಕನವರ, ಸ್ವಾಗತಿಸಿ, ಪ್ರವೀಣ ಕೆಳಗಿನಮನಿ ನಿರೂಪಿಸಿ, ವಂದಿಸಿದರು.ಊ4-ಖಓಖ05-ನ್ಯೂಕ್ಸ್ಯಾಂಡ್. ಕಊಓಖಿಓ.