ಸಂಸ್ಥೆಗಳು ಸಾಲಗಳನ್ನು ಮಿತವಾಗಿಸಬೇಕು : ಡಾ. ಪ್ರಭಾಕರ ಕೋರೆ

ಲೋಕದರ್ಶನ ವರದಿ

ಬೆಳಗಾವಿ 14: ಠೇವುಗಳ ಮತ್ತು ಸಾಲಗಳ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತಿರುವುದರಿಂದ ಸಕರ್ಾರದ ಹೆಚ್ಚಿನ ಗಮನ ಹರಿಸುತ್ತಿದ್ದು, ಸಕರ್ಾರ ನಿರ್ಬಂಧಗಳನ್ನು ಹಾಕು ಸಾಧ್ಯತೆ ಇದೆ. ಆದ್ದರಿಂದ ಸಂಸ್ಥೆಗಳು ತಮ್ಮ ಠೇವುಗಳನ್ನು ಹಾಗೂ ಸಾಲವನ್ನು ಮೀತವಾಗಿಸಬೇಕೆಂದು ಎಂದು ರಾಜ್ಯ ಸಭಾ ಸದಸ್ಯರು ಹಾಗೂ ಕಾಯರ್ಾಧ್ಯಕ್ಷರು ಕೆಎಲ್ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಹೇಳಿದರು. ಅವರು ಬುಧವಾರದಂದು(14) ನಗರದ ಖಾಸಗಿ ಹೋಟೆಲ್ನಲ್ಲಿ ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ,ಬೆಂಗಳೂರು ಹಾಗೂ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯ ನಿವರ್ಾಹಕರ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ "ಉನ್ನತ ಮಟ್ಟದ ತರಬೇತಿ" ಕಾಯರ್ಾಗಾರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಠೇವುಗಳುಮತ್ತು ಸಾಲಗಳ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತಿರುವ್ಯದರಿಂದ ಸಕರ್ಾರದ ಹೆಚ್ಚು ಗಮನ ಹರಿಸುತ್ತಿದೆ. ಹೆಚ್ಚಿನ ನಿರ್ಬಂಧಗಳನ್ನು ಹೆರುವ ಸಾಧ್ಯತೆಗಳಿ ಇವೆ ಎಂದು ಹೇಳಿದರು. ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಿ.ಹೆಚ್.ಕೃಷ್ಣಾರೆಡ್ಡಿಯವರು ಮಾತನಾಡಿ, ಸಹಕಾರಿ ಸಂಘಗಳಲ್ಲಿ ಸದಸ್ಯರಿಗೆ ಕಾನೂನಿನಲ್ಲಿ ಕೆಲವೊಂದು ಸವಲತ್ತುಗಳಿದ್ದು, ಸೌಹಾರ್ದ ಸಹಕಾರಿಗಳು ಸಹಕಾರ ಸಂಘಗಳಲ್ಲ ಆದ್ದರಿಂದ ಈ ಸಂಸ್ಥೆಗಳನ್ನು ಸಹಕಾರ ಸಂಘಗಳೆಂದು ಪರಿಗಣಿಸಿ ಸದಸ್ಯರಿಗೆ ಆಯಕರ ಕಾನೂನಿನ ಸವಲತ್ತುಗಳನ್ನು ನೀಡಲು ಸಾಧ್ಯವಿಲ್ಲವೆಂದು ಆಯಕರ ಇಲಾಖೆಯ ಉಚ್ಛ ಅಧಿಕಾರಿಗಳು ನಿರ್ಣಯಿಸಿರುತ್ತಾರೆ. ಆದರೆ ಈಗಾಗಲೇ ಇದರ ಸಲುವಾಗಿ ಸಂಯುಕ್ತ ಸಹಕಾರಿಯ ಅಧ್ಯಕ್ಷರು ಹಾಗೂ ನಿದರ್ೇಶಕರುಗಳು ಡಾ. ಪ್ರಭಾಕರ ಕೋರೆಯವರ ನಿಯೋಗದೊಂದಿಗೆ, ವಿತ್ತ ಸಚಿವರಾದ ಅರುಣ ಜೆಟ್ಲಿಯವರನ್ನು ಐದಾರು ಸಲ ಭೇಟಿಯಾಗಿ ಸೌಹಾರ್ದ ಸಹಕಾರಿಗಳಿಗಿರುವ ಆಮಯಕರ ಕಾಯ್ದೆಯಲ್ಲಿನ ತೊಂದರೆಗಳ ಬಗ್ಗೆ ಅವರ ಗಮನಕ್ಕೆ ತರಲಾಗಿದೆ. ಆದರೆ ಅವರು ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ. ರಾಜ್ಯ ಸಕರ್ಾರದ ಸಹಕಾರ ಮಂತ್ರಿಗಳಿಗೆ ಅಡಚಣೆಗಳ ಕುರಿತು ಭೇಟಿ ಮಾಡಿದಾಗ ಸೌಹಾರ್ದ ಸಹಕಾರಿಗಳಿಗೆ ಸಂಘ ಎಂದು ಸೇರಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಂದು ತಿಳಿಸಿದ್ದು ಮಂತ್ರಿಗಳು ಇದರ ಬಗ್ಗೆ ಮುಂದೆ ಬರುವ ಬೆಳಗಾವಿ ಅಧಿವೇಶನದಲ್ಲಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿರುತ್ತಾರೆ ಎಂದು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯ ಭಾಷಣದಲ್ಲಿ ತಿಳಿಸಿದರು.

     ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಾಂತೇಶ ಕವಟಗಿಮಠ ಮಾನ್ಯ ಮುಖ್ಯ ಸಚೇತಕರು ವಿರೋಧ ಪಕ್ಷ ವಿಧಾನ ಪರಿಷತ್, ಕನರ್ಾಟಕ ಸಕರ್ಾರ, ಜಗದೀಶ ಕವಟಗಿಮಠ ಮಾನ್ಯ ಉಪಾಧ್ಯಕ್ಷರು, ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಬೆಂಗಳೂರು, ಚಂದ್ರಕಾಂತ ಪಡಚಣ್ಣವರ ಮಾನ್ಯ ನಿದರ್ೇಶಕರು, ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ಹಾಗೂ ಪ್ರಾಂತೀಯ ಅಧಿಕಾರಿಯಾದ ಶ್ರೀಕಾಂತ ಬರುವೆ ಹಾಗೂ ಅಧಿಕಾರಿಯಾದ ಜಿ ಎಸ್ ಟೋಪಣ್ಣವರ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ಸದರಿ ತರಬೇತಿ ಕಾರ್ಯಕ್ರಮದಲ್ಲಿ 90 ಸೌಹಾರ್ದ ಸಹಕಾರಿಗಳಿಂದ 102 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಅಶ್ವೀನಿ ಕಮ್ಮಾರ ಅವರು ನಿರೂಪಿಸಿದರು, ಪ್ರತಿಭಾ ಮಠ ಹಾಗೂ ರೇಷ್ಮಾ ಪಾಟೀಲ ಇವರುಗಳು ಪ್ರಾರ್ಥನೆಯನ್ನು ಮಾಡಿದರು ಹಾಗೂ ಪ್ರಾಂತೀಯ ಅಧಿಕಾರಿಯಾದ ಶ್ರೀಕಾಂತ ಬರುವೆ ಸ್ವಾಗತಿಸಿದರು ಹಾಗೂ ಪ್ರಭಯ್ಯ ಹಿರೇಮಠರವರು ವಂದಿಸಿದರು.