ಸಮಾಜಮುಖಿ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳು ಪಾತ್ರ ಮುಖ್ಯ

Organizations play an important role in social work

ಸಮಾಜಮುಖಿ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳು ಪಾತ್ರ ಮುಖ್ಯ 

ರಾಣೇಬೆನ್ನೂರು   01 : ಸಮಾಜಮುಖಿ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳು ಹೆಚ್ಚಾಗಿ ತೊಡಗಿಸಿಕೊಂಡು, ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.ಅವರು ಇಲ್ಲಿನ  ಪಿ.ಬಿ.ರಸ್ತೆಯ ದೈವಜ್ಞ ಸಮುದಾಯ ಭವನದಲ್ಲಿ  ಜೇಸಿಐ (ಜ್ಯೂನಿಯರ್ ಛೇಂಬರ್ ಇಂಟರ್‌ನ್ಯಾಶನಲ್) ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ  ಸೇವಾ ದೀಕ್ಷಾ  ಸ್ವೀಕಾರ ಸಮಾರಂಭ ಉದ್ಘಾಟಿಸಿ  ಮಾತನಾಡಿದರು,ಇಂತಹ ನಿಸ್ವಾರ್ಥ ಸೇವೆಯಲ್ಲಿ ಜೆಸಿಐ ಸಂಸ್ಥೆ ಮಾಡುತ್ತಿರುವ ಕಾರ್ಯವು ಮೆಚ್ಚವಂತಹದ್ದು, ತನ್ನ ಕಾರ್ಯಗಳ ಮೂಲಕ ಜನರಲ್ಲಿ ಪರಿಸರ ಜಾಗೃತಿ, ರಕ್ತಧಾನ ಶಿಬಿರ, ತರಬೇತಿ ಶಿಬಿರ ನಡೆಸಿದೆ. ಅನೇಕ ಮಹಿಳೆಯರಿಗೆ ಹೋಲಿಗೆ ತರಬೇತಿ  ಜೊತೆಗೆ ಸ್ವಾವಲಂಬಿ ಬದುಕನ್ನು ಜೆಸಿ ಸಂಸ್ಥೆ ಕಟ್ಟಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪರೀಕ್ಷಾ ತರಬೇತಿ ಕಾರ್ಯಕ್ರಮಗಳು ನಡೆಸಿಕೊಟ್ಟಿದೆ.  

ಉತ್ತಮ ಕ್ರಿಯಾಶೀಲತೆ, ನಡವಳಿಕೆ, ವ್ಯಕ್ತಿತ್ವ ರೂಪಿಸಲು ಹಾಗೂ ಉಧ್ಯಮಶೀಲತೆ ಅಭಿವೃದ್ದಿಗೆ ಜೆಸಿಐ ಸಂಸ್ಥೆ ಸಹಕಾರಿಯಾಗಿದೆ ಎಂದು ಜೇಸಿ ಸಂಸ್ಥೆಯ ಸೇವೆ ಪ್ರಸಂಶಿಸಿ ಮಾತನಾಡಿದರು.ವಲಯ ಉಪಾಧ್ಯಕ್ಷ ಮಧು ಸೂಧನ ನವಡ ಮಾತನಾಡಿ, ಜೀವ ನಮ್ಮ ಮಾತು ಕೇಳುವುದಿಲ್ಲ, ಜೀವನ ನಮ್ಮ ಮಾತು ಕೇಳುತ್ತದೆ, ಈ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಡಿಸಿಕೊಳ್ಳಲು ಜೆಸಿಐ ಸಂಸ್ಥೆ ದಾರೀದೀಪವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳು ಮಾಡಬೇಕು ಎಂದರು.ನಿಕಟಪೂರ್ವ ಅಧ್ಯಕ್ಷ ಕೆ.ಶಿವಶಂಕರ ಮಾತನಾಡಿ, ಸಮಾಜ ಸೇವೆಯಲ್ಲಿ ನಿಸ್ವಾರ್ಥ ಮನೋಭಾವನೆ ಮುಖ್ಯ, ಅದನ್ನು ರೂಡಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ. ನಮ್ಮ ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ರಾಜ್ಯದಲ್ಲಿ ಅತ್ಯುತ್ಯಮ ಜೆಸಿ ಘಟಕವಾಗಿ ಗುರುತಿಸಿಕೊಂಡಿದ್ದು, ಅನೇಕ ಪ್ರಶಸ್ತಿಗಳು ಗಳಿಸಿವೆ  ಇದೇ ರೀತಿ ಸಂಸ್ಥೆ ವತಿಯಿಂದ ಉತ್ತಮ ಕಾರ್ಯಗಳನ್ನು ಮಾಡಲು ಜನರ ಸಹಕಾರ ಮುಖ್ಯವಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಜೇಸಿಐ ಘಟಕದ 2025ನೇ ವರ್ಷದ ನೂತನ ಪದಾಧಿಕಾರಿಗಳಿಗೆ ಜೆ.ಎ.ಸಿ, ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ವಲಯ ಉಪಾಧ್ಯಕ್ಷ ಮಧುಸೂಧನ ನವಡ ಹಾಗೂ ಜೇಸಿಐ ವಲಯ-24ರ ಅಧ್ಯಕ್ಷ ಗೌರೀಶ ಭಾರ್ಗವ್ ಪ್ರಮಾಣ ವಚನ ಬೋಧಿಸಿದರು.ನೂತನ ಅಧ್ಯಕ್ಷ ಕುಮಾರ ಎಸ್ ಬೆಣ್ಣಿ, ಉಪಾಧ್ಯಕ್ಷರಾದ ಅಶೋಕ ದುರ್ಗದಶೀಮಿ, ಚಂದನ ಹಿತ್ತಲಮನಿ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ಆಕರ್ಶ ಬಸ್ಮಾಂಗಿಮಠ, ವಿನಾಯಕ ಗುಲಗಂಜಿ, ರೇಖಾ ಬೆಣ್ಣಿ, ಕಾರ್ಯದರ್ಶಿ ಇಮ್ರಾನ್ ನೀಲಗಾರ, ಸಹ ಕಾರ್ಯದರ್ಶಿ ವಿನಾಯಕ ಯಕನಹಳಿ, ಖಜಾಂಚಿ ವಿದ್ಯಾಧರ ಹಲಗೇರಿ, ತಾಂತ್ರಿಕ ವಿಭಾಗ ಮಂಜುನಾಥ ಹೊಸಪೇಟೆ, ಮಲ್ಲಿಕಾರ್ಜುನ ತಾವರಗೊಂದಿ, ನಾರಾಯಣ ಪವಾರ, ನಾಗರಾಜ ಬೆಣ್ಣಿ, ವಿಜಯ ಮಾಳೋದೆ, ರೂಪಾ ಕಾಕಿ, ಆಕಾಶ ಕೊಟ್ಟೂರ, ಲಕ್ಷ್ಮಿ ಕಾಕಿ, ರೇಖಾ ಬೆಣ್ಣಿ, ಅಂಕಿತಾ ಕಾಕಿ ಅಧಿಕಾರ ಸ್ವೀಕಾರ ಮಾಡಿದರು.ಪೂರ್ವಾಧ್ಯಕ್ಷರಾದ ಶ್ರೀನಿವಾಸ ಕಾಕಿ, ಲಕ್ಷ್ಮೀ ಅಡಕಿ, ವಿ.ಎಸ್‌.ಹಿರೇಮಠ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಆರಿ​‍್ವ.ಪಾಟೀಲ, ಗಣೇಶ ದೇವಗಿರಿಮಠ, ಪ್ರಮುಖರಾದ ಭೋಜರಾಜ ಗುಲಗಂಜಿ, ಲಕ್ಷ್ಮಿ ಶಿವಶಂಕರ, ರೂಪಾ ಕಾಕಿ, ಲಕ್ಷ್ಮೀ ಎಸ್, ಸಿದ್ದಪ್ಪ ಅತಡಕರ, ಕೋಟ್ರೇಶಪ್ಪ ಎಮ್ಮಿ, ಶಿವಪ್ಪ ಗುರಿಕಾರ, ಸಂಜೀವ ಶಿರಹಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.