ಕೇಣಿಯಲ್ಲಿ ಗ್ರೀನ್ ಫೀಲ್ಡ್ ಖಾಸಗಿ ಬಂದರು ಯೋಜನೆಗೆ ವಿರೋಧ
ಕಾರವಾರ, 24 : ಅಂಕೋಲಾ ತಾಲೂಕಿನ ಕೇಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಯೋಜನೆಯ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಜಿಲ್ಲಾಡಳಿತದನಿಷೇಧಾಜ್ಞೆ ನಡುವೆಯೇ ಪ್ರತಿಭಟನೆ ನಡೆಯಿತು .ಪ್ರತಿಭಟನಾನಿರತ ಮೀನುಗಾರರೊಂದಿಗೆ ಬಿಜೆಪಿಯ ವಿಧಾನ ಪತಿಷತ್ ಸದಸ್ಯ ಗಣಪತಿ ಉಳ್ವೇಕರ ಸಮುದ್ರಕ್ಕೆ ಇಳಿಯುವ ಯೋಜನೆಯ ಸಮೀಕ್ಷೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 4,119 ಕೋಟಿ ರೂ. ವೆಚ್ಚದಲ್ಲಿ ಜೆ.ಎಸ್.ಡಬ್ಲ್ಯು ಕಂಪನಿಯು ಅಂಕೋಲಾ ತಾಲೂಕಿನ ಕೇಣಿಯ ಬಂದರು ಪ್ರದೇಶದ ಕಡಲತೀರದಲ್ಲಿ ಗ್ರೀನ್ ಫೀಲ್ಡ್ ಖಾಸಗಿ ಬಂದರು ಯೋಜನೆಯನ್ನು ಹಿಂದೆ ಬಿಜೆಪಿ ಅಡಳಿತಾವಧಿಯಲ್ಲೇ ರೂಪಿಸಿ, ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್ ಪಡೆದಿತ್ತು. ಈಗ ಯೋಜನಾ ಪ್ರದೇಶದಸರ್ವೇ ಕಾರ್ಯ ಮಾಡಲು ಮುಂದಾಗಿದೆ.
ಬಂದರು ಕಡಲ ದಂಡೆಯಿಂದ 3 ಕಿ.ಮೀ. ದೂರದ ಅಳ ಸಮುದ್ರದಲ್ಲಿ ಕೃತಕ ದ್ವೀಪ ನಿರ್ಮಿಸಿ ಬಂದರು ಜಟ್ಟಿ ರೂಪಿಸುವುದಾಗಿದೆ. ಕೇಣಿಯಿಂದ ಬಂದರು ತಲುಪಲು ರಸ್ತೆ ನಿರ್ಮಾಣಕ್ಕೆ ಸರ್ವೆ ನಡೆಸಲು ಜೆ.ಎಸ್.ಡಬ್ಲ್ಯು ಕಂಪನಿಯುಮುಂದಾಗಿದೆ.
ಈ ಕಾರ್ಯಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತ , ಇಂದು ಮತ್ತು ನಾಳೆ ಸರ್ವೆ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿತ್ತು.ಈ ನಡೆಯನ್ನು ಖಂಡಿಸಿ ಹಾಗೂ ಬಂದರು ನಿರ್ಮಾಣವೇ ಬೇಡ ಎಂದು ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆಯ ವೇಳೆ ಮೂವರು ಮಹಿಳೆಯರು ಸಮುದ್ರಕ್ಕೆ ಹಾರಿದ್ದಾರೆ. ಮೂವರು ಮಹಿಳೆಯರನ್ನ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಸರ್ವೇ ಕಾರ್ಯ ನಿಲ್ಲಿಸುವವರೆಗೂ ಉಗ್ರ ಪ್ರತಿಭಟನೆ ಮಾಡುತ್ತೇವೆ. ಬಂದರು ಯೋಜನೆಯನ್ನು ಕೈಬಿಡದಿದ್ದರೇ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವ ಜೊತೆಗೆ, ಸಾಮೂಹಿಕವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಡಲ ತೀರದಲ್ಲಿ ಸೇರಿದ ನೂರಾರು ಮೀನುಗಾರ ಮಹಿಳೆಯರು ಎಚ್ಚರಿಕೆ ನೀಡಿದರು.
ಈ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ಈಗ ಅದು ಅನುಷ್ಠಾನಕ್ಕೆ ಮೊದಲ ಹೆಜ್ಜೆ ಇಡಲಾಗುತ್ತಿದೆ. ಇಂದಿನ ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿಗರೂ, ಶಾಸಕ ಸೈಲ್ ಬೆಂಬಲಿಗರೂ ಇರುವುದು ವಿಶೇಷ