ವಿಜಯಪುರ 25: ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ನಸರ್್ಗಳು ಸಾರ್ವಜನಿಕರಿಗೆ ತಮ್ಮ ಸೇವೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದಿಡುವ ಜೊತೆಗೆ ಸಾರ್ವಜನಿಕರಿಗೆ ತಮ್ಮ ಅಮೂಲ್ಯ ಸೇವೆ ಸಲ್ಲಿಸುವಂತೆ ವೈದ್ಯರು ಮತ್ತು ನಸರ್್ಗಳಿಗೆ ಮನವಿ ಮಾಡಿದ್ದಾರೆ.
ಕೋವಿಡ್-19 ಲಕ್ಷಣವುಳ್ಳವರು ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ಒದಗಿಸಬೇಕು. ತಮಗೆ ತುತರ್ು ಸಂದರ್ಭದಲ್ಲಿ ಬೇಕಾದಾಗ ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್ ಸಹ ಒದಗಿಸಲೂ ಸಹ ಕ್ರಮಕೈಗೊಳ್ಳಲಾಗುವುದು. ಸದ್ಯ ಸಾರ್ವಜನಿಕರಿಗೆ ಉತ್ತಮ ದಜರ್ೆಯ ಸೇವೆ ಮತ್ತು ತಮ್ಮ ಅಮೂಲ್ಯ ಸೇವೆ ಕಲ್ಪಿಸುವ ಸಮಯ ಇದಾಗಿದ್ದು, ಲೈಸನ್ಸ್ ರದ್ದತಿಯಂತಹ ಕ್ರಮಕ್ಕೆ ಅವಕಾಶ ನೀಡದೆ ಸಾರ್ವಜನಿಕರಿಗೆ ಆಸ್ಪತ್ರೆ ತೆರೆದಿಟ್ಟು ನೆರವಾಗುವಂತೆ ಅವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ವೈದ್ಯಕೀಯ ಸಿಬ್ಬಂದಿ ಮತ್ತು ವಿವಿಧ ಮನೆ ಬಾಡಿಗೆ ಮಾಲೀಕರಿಗೆ ನಿದರ್ೇಶನ ನೀಡಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಮುಂಬರುವ ಜೂನ್ ಅಂತ್ಯದವರೆಗೆ ವೈದ್ಯಕೀಯ ಸಿಬ್ಬಂದಿಗೆ ಬಾಡಿಗೆ ನೀಡಲು ಒತ್ತಾಯಿಸುವಂತಿಲ್ಲ. ಅದರಂತೆ ಮನೆ ಬಿಡಲು ಸಹ ಒತ್ತಾಯ ಪಡಿಸಬಾರದು ಎಂದು ತಿಳಿಸಿರುವ ಅವರು ಖಾಸಗಿ ಶಾಲೆಗಳು ಸಹ ವಿದ್ಯಾಥರ್ಿಗಳ ಶುಲ್ಕ ಪಾವತಿಸಲು ಸಹ ಪಾಲಕರಿಗೆ ಒತ್ತಾಯ ಪಡಿಸಬಾರದು. ಈ ಕುರಿತು ಏನಾದರೂ ದೂರು ಬಂದಲ್ಲಿ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಈಗಾಗಲೇ ನಗರದ ನಿಗದಿತ ಪ್ರದೇಶಗಳನ್ನು ರತ್ನಾಪೂರ ಗ್ರಾಮ ಮತ್ತು ಬಿ.ಎಲ್.ಡಿ.ಇ 40 ಬೆಡ್ಗಳ ಆಸ್ಪತ್ರೆ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ವಲಯ ಘೋಷಿಸಿದೆ. ರಾಜ್ಯ ಸಕರ್ಾರ ಈ ವಲಯದಲ್ಲಿ ಜಿಯೋ ಫೆನ್ಸಿಂಗ್ ಗುರುತು ಮಾಡಿದೆ. ಯಾರಾದರೂ ಈ ನಿಗದಿತ, ಗುರುತು ಪಡಿಸಿದ ಸ್ಥಳದಿಂದ ಹೊರಬರುವವರ ಬಗ್ಗೆ ತಕ್ಷಣ ಮೊಬೈಲ್ ಮೂಲಕ ಮಾಹಿತಿ ಲಭ್ಯವಾಗಲಿದ್ದು, ಸೂಕ್ಷ್ಮವಾಗಿ ನಿಗಾ ಇಡಲಾಗಿದೆ. ಈವರೆಗೆ ಮೂರು ಜನರು ಈ ನಿಯಮವನ್ನು ಉಲ್ಲಂಘಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 188 ರನ್ವಯ ಮತ್ತು ಪ್ರಕೃತಿ ವಿಕೋಪ ಕಾಯ್ದೆಯಡಿ ಪ್ರಕರಣ ಸಹ ದಾಖಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಗಳ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ. ನಾಲ್ಕು ತಜ್ಞರ ತಂಡಗಳನ್ನು ಸಹ ರಚಿಸಿ ಮತ್ತು ಇತರೆ ಆರೋಗ್ಯ ಸಿಬ್ಬಂದಿಗಳು ಸಂಪರ್ಕ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಪಾಸಿಟಿವ್ ಪ್ರಕರಣ ಕಂಡುಬಂದ 37 ಜನರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.