ಮುಕ್ತ ಕಬಡ್ಡಿ ಪಂದ್ಯಾವಳಿ: ಬಹುಮಾನ ವಿತರಣೆ

ರಾಮದುರ್ಗ 03: ಯುವ ಜನತೆ ಅನವಶ್ಯಕ ಸಮಯವನ್ನು ಹಾಳು ಮಾಡುವ ಬದಲು ಕ್ರೀಡೆಯಂತಹ ಚಟುವಟಿಕೆಯಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕ ಸದೃಢತೆ ಪಡೆದುಕೊಳ್ಳಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ತಾಲೂಕಿನ ಆನೇಗುದ್ದಿ ಗ್ರಾಮದ ಸಿದ್ದಲಿಂಗೇಶ್ವರ ಯುವಕ ಮಂಡಳದ ನೇತೃತ್ವಲ್ಲಿ ರವಿವಾರ ರಾತ್ರಿ ಏರ್ಪಡಿಸಿದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಯುವಕರು ದೇಶಿ ಕ್ರೀಡೆಗಳತ್ತ ಗಮನ ಹರಿಸುತ್ತಿಲ್ಲ. ದೇಶಿ ಕ್ರೀಡೆಗಳಾದ ಕಬಡ್ಡಿ, ವ್ಹಾಲಿಬಾಲ್ ದಂತಹ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೆಕೆಂದರು. ದೇಶಿ ಕ್ರೀಡೆ ಬೆಳೆಸುವ ನಿಟ್ಟಿನಲ್ಲಿ ಸ್ಪಧರ್ೆಗಳನ್ನು ಏರ್ಪಡಿಸಬೇಕು. ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದ ಅವರು, ದೇಶಿ ಕ್ರೀಡೆಗಳನ್ನು ಬೆಳೆಸಿ ಪೋಶಿಸುವವರಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಗ್ರಾಮದ ಮುಖಂಡ ಹಾಗೂ ಮಾಜಿ. ಜಿ.ಪಂ ಸದಸ್ಯ ಗಂಗಪ್ಪ ಬೂದಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಜ್ರೀಡಾ ಚಟುವಟಿಕೆಗಳ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳನ್ನು ಏರ್ಪಡಿಸುವುದರಿಂದ ಸಂಘಟನೆಯ ಅರಿವು ಉಂಟಾಗಿ, ಭಾತೃತ್ವತೆ ಉಂಟಾಗುತ್ತದೆ ಎಂದರು.

ಸ್ಪಧರ್ೆಯಲ್ಲಿ ಸುಮಾರು 16 ಕಬಡ್ಡಿ ತಂಡಗಳು ಭಾಗವಸಿದ್ದವು. ಪ್ರಥಮ ಬಹುಮಾನ ಮುಳ್ಳೂರ ಯುವಕ ಮಂಡಳ, ದ್ವೀತಿಯ ಆನೇಗುದ್ದಿಯ ಸಿದ್ದಲಿಂಗೇಶ್ವರ ಯುವಕ ಮಂಡಳ, ತೃತೀಯ ಮುಧೋಳ ತಾಲೂಕಿನ ಅರಳಿಕಟ್ಟಿ ಯುವಕ ಮಂಡಳದವರು ಪಡೆದುಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಕೃಷ್ಣಾ ಲಮಾಣಿ, ಜಯಣ್ಣ, ಶಿವಯೋಗಿ ಹಿರೇಮಠ, ರಾಮಯ್ಯ ಬೆಟಸೂರಮಠ, ಗ್ರಾ.ಪಂ ಸದಸ್ಯ ಬಸವರಾಜ ಸೊರಗಾವಿ, ಭೀಮಣ್ಣ ಬೂದಿ ಸೇರಿದಂತೆ ಇತರರಿದ್ದರು. ಅಜರ್ುನ ತಳವಾರ ನಿರೂಪಿಸಿದರು. ಹಣಮಂತ ಕುರಿ ವಂದಿಸಿದರು.