ಕಂದಾಯ ಇಲಾಖೆ : ಒಂದೇ ಹುದ್ದೆಗೆ ಇಬ್ಬರ ಕಿತ್ತಾಟ

ಬೆಳಗಾವಿ, ಡಿ.2-ಜಿಲ್ಲೆಯ ಉಪನೋಂದಣಿ ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಸಬ್ ರಿಜಿಸ್ಟ್ರಾರ್ಗಳ ಕಿತ್ತಾಟದ ಹಿನ್ನೆಲೆಯಲ್ಲಿ ವಿಷ್ಣುತೀರ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಸಬ್ ರಿಜಿಸ್ಟ್ರಾರ್ ಹುದ್ದೆಗೆ ವಿಷ್ಣುತೀರ್ಥ ಮತ್ತು ಸದಾಶಿವ ಡಬ್ಬಗೊಳ ಎಂಬವರ ಮಧ್ಯೆ ಕಿತ್ತಾಟ ನಡೆದಿತ್ತು. ವಿಷ್ಣುತೀರ್ಥ ಅವರನ್ನು  ಮುಂದುವರೆಸಲು ಸಚಿವ ರಮೇಶ ಜಾರಕಿಹೊಳಿ ಪತ್ರ ಬರೆದಿದ್ದರು.

 ನಿನ್ನೆ ಒಂದೇ ಹುದ್ದೆಗೆ ಇಬ್ಬರೂ ಬಂದು ಕರ್ತವ್ಯವನ್ನು ನಿರ್ವಹಿಸಿದ್ದರು. ಇದೀಗ ಕಂದಾಯ ಇಲಾಖೆ, ವಿಷ್ಣುತೀರ್ಥರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಸದಾಶಿವ ಡಬ್ಬಗೊಳ ಅವರನ್ನು ಮುಂದುವರೆಸಲು ಆದೇಶ ಹೊರಡಿಸಿದೆ.

ಕಳೆದ ತಿಂಗಳು ವಿಷ್ಣುತೀರ್ಥಗೆ ರಾಯಭಾಗಕ್ಕೆ ವಗರ್ಾವಣೆ ಮಾಡಲಾಗಿತ್ತು. ಆದರೆ ಅಧಿಕಾರ ಹಸ್ತಾಂತರ ಮಾಡದೇ ವಿಷ್ಣುತೀರ್ಥ ಅವರು ವಗರ್ಾವಣೆ ಪ್ರಶ್ನಿಸಿ ಕೆಎಟಿಗೆ ಹೋಗಿದ್ದರು. 

ಕೆಎಟಿ ಪೀಠದಿಂದ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಲಾಗಿತ್ತು. ವಿಷ್ಣುತೀರ್ಥ ಅವರು ಅಧಿಕಾರ ಹಸ್ತಾಂತರ ಮಾಡಿಲ್ಲ ಎಂದು ಹೇಳಿ ಕಚೇರಿಗೆ ಬಂದಿದ್ದರು. ಸಕರ್ಾರ ನನಗೆ ಈ ಹುದ್ದೆಗೆ ವರ್ಗ ಮಾಡಿದೆ ಎಂದು ಸದಾಶಿವ ಕಚೇರಿಗೆ ಬಂದಿದ್ದರು. ಇಬ್ಬರು ಅಧಿಕಾರಿಗಳೂ, ಕಚೇರಿಗೆ ಬರುವ ಸಾರ್ವಜನಿಕರ ಫೈಲ್ಗಳಿಗೆ ಸಹಿ ಹಾಕಿದ್ದರು. 

ಹೀಗಾಗಿ ಸಾರ್ವಜನಿಕರು ಯಾರ ಬಳಿ ಹೋಗಬೇಕು ಎನ್ನುವ ಗೊಂದಲದಲ್ಲಿದ್ದರು. ಅಧಿಕಾರಿ ಸದಾಶಿವ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬ್ಯಾಟಿಂಗ್ ಮಾಡಿದರೆ, ವಿಷ್ಣು ತೀರ್ಥ ಪರ ಸಚಿವ ರಮೇಶ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದರು.