ಶಿಕ್ಷಣದಿಂದ ಮಾತ್ರ ಇಂತಹ ಮೌಢ್ಯತೆಯಿಂದ ಹೊರಬರಲು ಸಾಧ್ಯ: ಡಾ ನಾಗಲಕ್ಷ್ಮೀ ಚೌಧರಿ
ಸಿಂದಗಿ 06: ಮಹಿಳಾ ಆಯೋಗಕ್ಕೆ ಒಂದು ದೊಡ್ಡ ಶಕ್ತಿ ಪೊಲೀಸ ಇಲಾಖೆ. ಪೊಲೀಸರು ಯಾರು ಕೆಟ್ಟರಿರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಮಹಿಳಾ ಕಾವಲು ಸಮಿತಿಗಳಾ ಕಾರ್ಯನಿರ್ವಹಿಸುತ್ತವೆ. ಅಪ್ಪ ಡಾ. ಅಂಬೇಡ್ಕರರು ಹೇಳಿದಂತೆ ಮೌಢ್ಯಕ್ಕೆ ಗುಲಾಮರಾಗದಿರಿ ಇದನ್ನು ಯಾವ ದೇವರು ಹೇಳದನ್ನು ನಾವೇ ಮಾಡಿಕೊಂಡಿದ್ದು ಶಿಕ್ಷಣದಿಂದ ಮಾತ್ರ ಇಂತಹ ಮೌಢ್ಯತೆಯಿಂದ ಹೊರಬರಲು ಸಾಧ್ಯ. ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮೀ ಚೌಧರಿ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸ್ಪೂರ್ತಿ ತಾಲೂಕಾ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಸಮಾಜದ ಬೆಳವಣಿಗೆಗೆ ಮಹಿಳೆಯರ ಕೊಡುಗೆ ಅಪಾರ. ಗಂಡು ಮಕ್ಕಳಿಗಿಂತ ವಿಭಿನ್ನ ಬದುಕು ಅಂದು ಸತಿ-ಪತಿ ಸಹಗಮನ ಪದ್ದತಿಯಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ ಹೆಣ್ಣು ಮಕ್ಕಳನ್ನು ದೇವರ ಹೆಸರಿನ ಮೇಲೆ ಹೆದರಿಸುವ ಕಾರ್ಯ ಮನಸ್ಮೃತಿಯವರು ಬರೆದಿದ್ದಾರೆ ಗಂಡು-ಹೆಣ್ಣು ಸಮಾನ ಗೌರವ ಕಾಣಬೇಕು. ಹೆಣ್ಣು ಮಕ್ಕಳು ಎಲ್ಲಿಯವರೆಗೆ ಮನಸ್ಥಿತಿಯಿಂದ ಬದಲಾವಣೆ ಮಾಡಿಕೊಳ್ಳುವುದಿಲ್ಲವೇ ಅಲ್ಲಿಯವರೆಗೆ ಬದಲಾವಣೆ ಅಸಾಧ್ಯ. ಅಂಬೇಡ್ಕರ ಎಂದರೆ ಹೋರಾಟ, ಅಂಬೇಡ್ಕರ ಎಂದರೆ ಸಂಘಟನೆ ಇದು ಶಿಕ್ಷಣ ಕಲಿಸುತ್ತದೆ. ಡಾ. ಅಂಬೇಡ್ಕರರನ್ನು ಮಣ್ಣಲ್ಲಿ ಹೂತಿಲ್ಲ. ಅವರನ್ನು ಬಿತ್ತಿದ್ದೇವೆ. ಹೋರಾಟವೇ ನಮ್ಮ ಬದುಕಾಗಬೇಕು ಅಪಮಾನಕ್ಕಿಂತ ದೊಡ್ಡ ಅವಮಾನ ಮತ್ತೋಂದಿಲ್ಲ. ನಿಮ್ಮ ಬದುಕಿಗೆ ಹೊರಾಟ ನಡೆಸಿ ಹೊಸ ಭಾರತವನ್ನು ಸೃಷ್ಠಿಸಬೇಕಾಗಿದೆ. ಗುಲಾಮಗಿರಿಯನ್ನು ಮೆಟ್ಟಿ ನಿಂತು ಸ್ವಾವಲಂಬಿ ಜೀವನ ನಡೆಸಿ ಎಲ್ಲ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಾವನ್ನೆ ಗೆದ್ದು ಬಂದಿರುವ ನಮಗೆ ಬದುಕನ್ನು ಕಟ್ಟಿಕೊಳ್ಳಲು ಬರುವುದಿಲ್ಲವೇ. ಅಭಿವೃದ್ಧಿ ಬಾಗಿಲೇ ರಾಜಕೀಯ ಅದಕ್ಕೆ ಒಳ್ಳೆಯ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡಿ ಅಂದಾಗ ಭ್ರಷ್ಠಾಚಾರ ನಿಲ್ಲಲು ಸಾಧ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಇನ್ನರ್ ವ್ಹೀಲ್ ಕ್ಲಭ್ ಮಾಜಿ ಅಧ್ಯಕ್ಷೆ ನಾಗರತ್ನ ಅಶೋಕ ಮನಗೂಳಿ ಮಾತನಾಡಿ, ತೊಟ್ಟಿಲು ತೂಗುವ ಹೆಣ್ಣು ಜಗವೇ ತೂಗುತ್ತಾಳೆ. ಹೆಣ್ಣಿಗೆ ಒಂದು ಗಂಡಿನ ಮನೆಯಾದರೆ ಇನ್ನೋಂದು ತವರು ಮನೆ 2 ಮನೆ ಬೆಳಗುವ ಶಕ್ತಿ ಮಹಿಳೆಗೆ ಇರುತ್ತದೆ. ಕಾರಣ ಎಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತದೆಯೋ ಅಲ್ಲಿ ಮಹಿಳೆಯರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗ ಮಾತ್ರ ನಿತ್ಯ ಮಹಿಳಾ ದಿನಾಚರಣೆ ಆಚರಿಸಿದಂತಾಗುತ್ತದೆ ಆದರೆ ಹೆಣ್ಣಿಗೆ ಹೇಣ್ಣೆ ಶತ್ರು ಆಗಬಾರದು ಹೆಣ್ಣು ಸಹನಶಕ್ತಿಯಿಂದ ವರ್ತನೆ ಮಾಡಬೇಕು. ಮೊದಲು ಮನೆ ಆಮೇಲೆ ಸಮಾಜಕ್ಕೆ ಆಧ್ಯತೆ ನೀಡಬೇಕು. ಸಂಗಮ ಸಂಸ್ಥೆ ಹೆಣ್ಣು ಮಕ್ಕಳೀಗೆ ಸದೃಢವಾಗಿ ಬದುಕಲು ಶಕ್ತಿ ಕೊಟ್ಟಿದೆ. ಇಂತಹ ಸಂಸ್ಥೆಯ ಬೆಳವಣಿಗೆಗೆ ಮನಗೂಳಿ ಮನೆತನ ಸದಾಸಿದ್ದವಿದೆ ಎಂದರು.
ಸಾನಿದ್ಯ ವಹಿಸಿದ ಫಾ ಪ್ರಾನ್ಸಿಸ್ ಮಿನಿಜಸ್ ಎಸ್ ಜೆ, ಕರ್ನಾಟಕ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮಮತಾ ಯಜಮಾನ ಮಾತನಾಡಿದರು.
ಗ್ರೇಡ್ 2 ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಲಕ್ಷ್ಮೀ ಪೊಲೀಸಪಾಟೀಲ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಸುನಿತಾ ಕಪ್ಪೇನವರ, ಪೂರ್ಣ ರವಿಶಂಕರ, ಅಪರಾಧ ವಿಭಾಗದ ಪಿಎಸೈ ಎನ್.ಎಸ್ ನಡುವಿನಕೇರಿ, ಡಾ. ಎನ್.ಎಂ.ಮೊಗಲಾಯಿ, ರಾಜಶೇಖರ ಕೂಚಬಾಳ, ಸುಜಾತಾ ಕಲಬುರ್ಗಿ, ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ, ಫಾ ಸಂತೋಷ ಎಸ್.ಜೆ. ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಸ್ಪೂರ್ತಿ ಮಹಿಳಾ ಸಂಘಗಳ ಒಕ್ಕೂಟದ ಅದ್ಯಕ್ಷೆ ಶೈಲಾ ಸಂಗಮ ಸ್ವಾಗತಿಸಿದರು. ಸಿ.ಸಿಂತಿಯಾ ಡಿ ಮೆಲ್ಲೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯಿಶಾ ಚಿಗರಿ ವರದಿವಾಚನ ಮಾಡಿದರು. ನೀಲಮ್ಮ ಬಡಿಗೇರ ನಿರೂಪಿಸಿದರು. ರೇವತಿ ಮೇತ್ರಿ ವಂದಿಸಿದರು.